ADVERTISEMENT

’ಕೆಎಂಎಫ್‌–ರಾಬಕೊವಿ’ಯಲ್ಲಿ ವಿವಿಧ ಹುದ್ದೆಗಳು

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

ಆತ್ರೇಯ
Published 1 ಫೆಬ್ರುವರಿ 2023, 20:15 IST
Last Updated 1 ಫೆಬ್ರುವರಿ 2023, 20:15 IST
   

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ (ಕೆಎಂಎಫ್‌–ರಾಬಕೊವಿ) ಡೇರಿ ಮೇಲ್ವಿಚಾರಕರು, ಕಿರಿಯ ತಂತ್ರಜ್ಞರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಕುರಿತು ಅಧಿಸೂಚನೆ ಹೊರಡಿಸಿದೆ.

ಡೇರಿ ಮೇಲ್ಟಿಚಾರಕರು, ಆಡಳಿತ ಸಹಾಯಕ, ಅಕೌಂಟ್ಸ್‌ ಅಸಿಸ್ಟೆಂಟ್‌, ಬಾಯ್ಲರ್‌, ಎಲೆಕ್ಟ್ರಾನಿಕ್ಸ್‌ ಮೆಕ್ಯಾನಿಕಲ್‌, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್‌, ಶಿತಲೀಕರಣ ಮತ್ತು ಎಸಿ ಘಟಕಗಳಲ್ಲಿ ಖಾಲಿ ಇರುವ 24 ಹುದ್ದೆಗಳ ಭರ್ತಿಗಾಗಿ ಜನವರಿ 23ರಂದು ಅಧಿಸೂಚನೆ ಹೊರಡಿಸಲಾಗಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಫೆಬ್ರುವರಿ 15 ಅರ್ಜಿ ಸಲ್ಲಿಕೆಗೆ ಕೊನೆ ದಿನ. ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ADVERTISEMENT

ಕನಿಷ್ಠ ವಿದ್ಯಾರ್ಹತೆ:

1. ಡೇರಿ ಮೇಲ್ವಿಚಾರಕರ ದರ್ಜೆ –1 (6 ಹುದ್ದೆಗಳು). ವೇತನ ಶ್ರೇಣಿ ₹40,900–₹78, 200.

ಅಂಗೀಕೃತ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್‌/ಎಲೆಕ್ಟ್ರಿಕಲ್‌/ಮೆಕ್ಯಾನಿಕಲ್‌ನಲ್ಲಿ ಬಿ.ಇ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿರಬೇಕು. ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

2. ಆಡಳಿತ ಸಹಾಯಕ ದರ್ಜೆ–3 (6 ಹುದ್ದೆಗಳು): ವೇತನ ಶ್ರೇಣಿ ₹21400-₹42000. ಕನಿಷ್ಠ ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಹೊಂದಿರಬೇಕು. ಕನಿಷ್ಠ 6 ತಿಂಗಳ ಅವಧಿಯ ಕಂಪ್ಯೂಟರ್ ಅಪ್ಲಿಪ್ಲಿಕೇಷನ್‌ನಲ್ಲಿ ಡಿಪ್ಲೊಮಾ ತಂತ್ರಜ್ಞಾನ ಪಡೆದಿರಬೇಕು. ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಠ 3 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

3. ಲೆಕ್ಕಪತ್ರ ಸಹಾಯಕ ದರ್ಜೆ-3 (1 ಹುದ್ದೆ ) ವೇತನ ಶ್ರೇಣಿ ₹ 21400-₹ 42000. ವಿದ್ಯಾರ್ಹತೆ: ಬಿ.ಕಾಂ. ಪದವಿ ಹೊಂದಿರಬೇಕು. 6 ತಿಂಗಳ ಅವಧಿಯ ಕಂಪ್ಯೂಟರ್ ಡಿಪ್ಲೊಮಾ ಕೋರ್ಸ್‌ ಮಾಡಿರಬೇಕು ಮತ್ತು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ 5 ವರ್ಷಗಳ ಸೇವೆ ಸಲ್ಲಿಸಿದ ಅನುಭವವಿರಬೇಕು.

4. ಕಿರಿಯ ತಾಂತ್ರಿಕರು:(10 ಹುದ್ದೆಗಳು).

ಅ) ಬಾಯ್ಲರ್‌(5 ಹುದ್ದೆಗಳು): ವೇತನ ಶ್ರೇಣಿ: ₹ 21400-₹42000. ಒಟ್ಟು 10 ಹುದ್ದೆಗಳು. ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಕರ್ನಾಟಕ ಸರ್ಕಾರ ಬಾಯ್ಲರ್ ಅಟೆಂಡೆಂಟ್‌ ಪರೀಕ್ಷಾ ಮಂಡಳಿಯಿಂದ ದಿತೀಯ ಬಾಯ್ಲರ್ ಅಟೆಂಡೆಂಟ್ ದರ್ಜೆ-2 ಪ್ರಮಾಣ ಪತ್ರ ಹೊಂದಿರತಕ್ಕದ್ದು.

ಬ) ಎಲೆಕ್ಟ್ರಾನಿಕ್ಸ್‌– ಮೆಕ್ಯಾನಿಕಲ್‌(1 ಹುದ್ದೆ): ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಜೊತೆಗೆ, ಐ.ಟಿ.ಐನಲ್ಲಿ ಎಲೆಕ್ಟ್ರಾನಿಕ್ಸ್‌ ಮೆಕಾನಿಕಲ್ ವಿಷಯಗಳಲ್ಲಿ ಎರಡು ವರ್ಷದ ಕೋರ್ಸ್‌ ಉತ್ತೀರ್ಣರಾಗಿರಬೇಕು.

ಕ) ‌ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕಲ್‌(2 ಹುದ್ದೆ): ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಜೊತೆಗೆ, ಎಲೆಕ್ಟ್ರಾನಿಕ್ಸ್‌ ಮತ್ತು ಎಲೆಕ್ಟ್ರಿಕ್‌ ವಿಷಯದಲ್ಲಿ ಎರಡು ವರ್ಷದ ಐಟಿ.ಐ ಕೋರ್ಸ್‌ ಪೂರ್ಣಗೊಳಿಸಿರಬೇಕು.

ಟ) ರೆಫ್ರಿಜರೇಶನ್ ಮತ್ತು ಎ.ಸಿ(2 ಹುದ್ದೆ): ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಜೊತೆಗೆ ರೆಫ್ರಿಜರೇಷನ್ ಮತ್ತು ಎಸಿ ವಿಷಯಗಳಲ್ಲಿ ಎರಡು ವರ್ಷದ ಐಟಿಐ ಕೋರ್ಸ್‌ ಉತ್ತೀರ್ಣರಾಗಿರಬೇಕು.

ಹೆಚ್ಚಿನ ಮಾಹಿತಿಗೆ: www.rbkmul.in ಅಥವಾ https://virtualofficeerp.com/ballary_kmf/uploads/files/notification/1dm4vq.pdf ಈ ಲಿಂಕ್ ನೋಡಬಹುದು.

ಮೇಲಿನ ಹುದ್ದೆಗಳಲ್ಲಿ ಕಿರಿಯ ತಾಂತ್ರಿಕ, ಹುದ್ದೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ
ನೇಮಕಾತಿಗೆ ಅಭ್ಯರ್ಥಿಗಳು ಕನಿಷ್ಠ 06 ತಿಂಗಳ ಅವಧಿಯ ಕಂಪ್ಯೂಟರ್ ಸರ್ಟಿಫಿಕೇಟ್ ತರಬೇತಿ
ಪ್ರಮಾಣ ಪತ್ರಸಲ್ಲಿಸಬೇಕು. ಇಲ್ಲವೇ, ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್‌ನಲ್ಲಿ ಕಂಪ್ಯೂಟರ್‌ ವಿಷಯವನ್ನು ಅಧ್ಯಯನ ಮಾಡಿರಬೇಕು.

ಆಯ್ಕೆ ವಿಧಾನ:

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 200 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಸಂದರ್ಶನಕ್ಕೆ 15 ಅಂಕಗಳನ್ನು ನಿಗದಿಪಡಿಸಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ಕನ್ನಡ ಭಾಷೆ(50 ಅಂಕಗಳು), ಸಾಮಾನ್ಯ ಇಂಗ್ಲಿಷ್‌, ಸಾಮಾನ್ಯ ಜ್ಞಾನ, ಭಾರತದ ಸಂವಿಧಾನ, ಒಕ್ಕೂಟದ ಕಾರ್ಯಚಟುವಟಿಕೆಗಳು ಹಾಗೂ ವಸ್ತುನಿಷ್ಠ ವಿಷಯಗಳಿರುವ ಪತ್ರಿಕೆಗಳಿಗೆ ತಲಾ 25 ಅಂಕಗಳು, ಸಹಕಾರ ವಿಷಯದ ಪತ್ರಿಕೆಗೆ 50 ಅಂಕಗಳನ್ನು ನಿಗದಿಪಡಿಸಲಾಗಿದೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ 85ಕ್ಕೆ ಇಳಿಸಿ, ಅದಕ್ಕೆ ಮೌಖಿಕ ಸಂದರ್ಶನದಲ್ಲಿಗಳಿಸುವ ಅಂಕಗಳನ್ನು ಸೇರಿಸಿ, ಅಂತಿಮ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಲಿಖಿತ ಪರೀಕ್ಷೆಯ ಪ್ರವೇಶ ಪತ್ರ, ದಿನಾಂಕ ಹಾಗೂ ಪರೀಕ್ಷೆಯ ಕಾಲಾವಧಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಹಾಗೆಯೇ ಅಭ್ಯರ್ಥಿಗಳಿಗೆ ನೊಂದಾಯಿತ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.