ADVERTISEMENT

ಸ್ಪರ್ಧಾವಾಣಿ: UPSC ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬಹುಆಯ್ಕೆಯ ಪ್ರಶ್ನೆಗಳು

ಸ್ಪರ್ಧಾವಾಣಿ

ಪ್ರಜಾವಾಣಿ ವಿಶೇಷ
Published 8 ಮೇ 2024, 14:12 IST
Last Updated 8 ಮೇ 2024, 14:12 IST
<div class="paragraphs"><p>ಪರೀಕ್ಷೆ–ಪ್ರಾತಿನಿಧಿಕ ಚಿತ್ರ</p></div>

ಪರೀಕ್ಷೆ–ಪ್ರಾತಿನಿಧಿಕ ಚಿತ್ರ

   

1. ಸ್ವಾತಂತ್ರ್ಯಪೂರ್ವದ ಮೊದಲ ಕಾನೂನು ಆಯೋಗದ ಅಧ್ಯಕ್ಷತೆಯನ್ನು ಕೆಳಗಿನ ಯಾವ ಬ್ರಿಟಿಷ್ ಅಧಿಕಾರಿಗಳು ವಹಿಸಿದ್ದರು ?

ಎ. ಲಾರ್ಡ್ ಮೆಕಾಲೆ

ADVERTISEMENT

ಬಿ. ಲಾರ್ಡ್ ವಿಲಿಯಂ ಬೆಂಟಿಕ್

ಸಿ. ವಾರನ್ ಹೇಸ್ಟಿಂಗ್ಸ್

ಡಿ. ಲಾರ್ಡ್ ವೆಲ್ಲೆಸ್ಲಿ

ಉತ್ತರ : ಎ

2. ಭಾರತೀಯ ಕಾನೂನು ಆಯೋಗದ ಸ್ವರೂಪಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ ?

1. ಭಾರತೀಯ ಕಾನೂನು ಆಯೋಗದ ಸ್ವರೂಪವನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ.

2. ಭಾರತೀಯ ಕಾನೂನು ಆಯೋಗದ ಸ್ವರೂಪವನ್ನು ಅವಶ್ಯಕತೆಗೆ ಅನುಗುಣವಾಗಿ ಸರ್ಕಾರ ಬದಲಾಯಿಸುತ್ತದೆ.

3. ಭಾರತೀಯ ಕಾನೂನು ಆಯೋಗದ ಅಧ್ಯಕ್ಷೀಯ ಸ್ಥಾನದಲ್ಲಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಮಾತ್ರ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 2 ಮತ್ತು3 ಡಿ. 1 ಮತ್ತು3

ಉತ್ತರ : ಸಿ

3. ಚಂಡಿ ಪ್ರಸಾದ್ ಭಟ್ ಅವರಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಚಂಡಿ ಪ್ರಸಾದ್ ಭಟ್ ಅವರು ಗಾಂಧಿ ವಾದಿಗಳಾಗಿರಲಿಲ್ಲ.

2. ಚಂಡಿ ಪ್ರಸಾದ್ ಭಟ್ ಅವರು ಸಾಮಾಜಿಕ ಕಾರ್ಯಕರ್ತರು ಮತ್ತು ಪರಿಸರ ಪ್ರೇಮಿಯಾಗಿದ್ದರು.

3. ದಶೋಲಿ ಗ್ರಾಮ ಸ್ವರಾಜ್ಯ ಮಂಡಲವನ್ನು ಚಂಡಿ ಪ್ರಸಾದ್ ಭಟ್ ಅವರು ಸ್ಥಾಪಿಸಿದರು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3  ಬಿ. 2 ಮತ್ತು 3 

ಸಿ. 3 ಮಾತ್ರ  ಡಿ. 2 ಮಾತ್ರ

ಉತ್ತರ : ಬಿ

4. ಭಾರತದ ಪರಿಸರ ಸಂರಕ್ಷಣಾ ಚಳುವಳಿಗಳು ಮತ್ತು ಸ್ಥಳಗಳ ಬಗ್ಗೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಬಿಷ್ಣೋಯ್ ಚಳುವಳಿಯನ್ನು ರಾಜಸ್ಥಾನದ ಕೆಜೂಲಿ ಮತ್ತು ಮಾನ್ವಾರ್ ನಲ್ಲಿ ಹಮ್ಮಿಕೊಳ್ಳಲಾಯಿತು.

2. ಬಿಷ್ಣೋಯ್ ಚಳುವಳಿಗೆ ಅಮೃತದೇವಿಯವರು ನಾಯಕತ್ವವನ್ನು ಒದಗಿಸಿದರು.

3. ಸೇವ್ ಅರೆ ಚಳುವಳಿಯ ನಾಯಕತ್ವವನ್ನು ಮೇಧಾ ಪಾಟ್ಕರ್ ಮತ್ತು ಅರುಂಧತಿ ರಾಯ್ ಅವರು ವಹಿಸಿದರು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3  ಬಿ. 1 ಮಾತ್ರ 

ಸಿ. 2 ಮಾತ್ರ  ಡಿ. 2 ಮತ್ತು 3

ಉತ್ತರ : ಎ

5. ಕೆಳಗಿನ ಯಾವ ಸ್ಥಳಗಳಲ್ಲಿ ಭಾಷಾ ಅಲ್ಪಸಂಖ್ಯಾತ ಆಯುಕ್ತರ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಲಾಗಿದೆ?

1. ಬೆಂಗಳೂರು, ಕರ್ನಾಟಕ.

2. ಬೆಳಗಾವಿ, ಕರ್ನಾಟಕ.

3. ಚೆನ್ನೈ, ತಮಿಳುನಾಡು.

4. ಕೊಲ್ಕತ್ತಾ, ಪಶ್ಚಿಮ ಬಂಗಾಳ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 2, 3 ಮತ್ತು 4 ಬಿ. 1, 2 ಮತ್ತು 3

ಸಿ. 1 ಮತ್ತು 4 ಡಿ. 2 ಮತ್ತು 4

ಉತ್ತರ : ಎ

6. ಭಾಷಾವಾರು ಅಲ್ಪಸಂಖ್ಯಾತ ಅಧಿಕಾರಿಯ ಹುದ್ದೆಯನ್ನು ಸ್ಥಾಪಿಸುವಂತೆ ಕೆಳಗಿನ ಯಾವ ಆಯೋಗ ಶಿಫಾರಸ್ಸು ನೀಡಿತು?

ಎ. ಜೆ.ವಿ.ಪಿ ಸಮಿತಿ.

ಬಿ. ಎಸ್. ಕೆ. ದಾರ್ ಆಯೋಗ.

ಸಿ. ಫಜಲ್ ಅಲಿ ಆಯೋಗ.

ಡಿ. ಮಹಾಜನ್ ಆಯೋಗ.

ಉತ್ತರ : ಸಿ

7. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು ಕೆಳಗಿನ ಯಾವ ದರ್ಜಿಯ ಸ್ಥಾನಮಾನವನ್ನು ಹೊಂದಿರುತ್ತಾರೆ?

ಎ. ಸಂಪುಟ ದರ್ಜೆಯ ಸಚಿವರ ಸ್ಥಾನಮಾನ.

ಬಿ. ರಾಜ್ಯ ಸಚಿವರ ಸ್ಥಾನಮಾನ.

ಸಿ. ಉಪ ಸಚಿವರ ಸ್ಥಾನಮಾನ.

ಡಿ. ಸಂಪುಟ ಕಾರ್ಯದರ್ಶಿಯ ಸ್ಥಾನಮಾನ.

ಉತ್ತರ : ಎ

8. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಳಗಿನ ಯಾವ ಕಾರ್ಯಗಳನ್ನು ನಿರ್ವಹಿಸುತ್ತದೆ?

1. ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯನ್ನು ಜಾರಿಗೆ ತರುವುದು.

2. ರಾಷ್ಟ್ರೀಯ ವಿಪತ್ತು ನಿರ್ವಹಣಾ ಯೋಜನೆಯನ್ನು ಅನುಮೋದಿಸುವುದು.

3. ರಾಜ್ಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರಗಳಿಗೆ ಅವಶ್ಯಕ ನಿಯಮಾವಳಿಗಳನ್ನು ರೂಪಿಸುವುದು.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1, 2 ಮತ್ತು 3 ಡಿ. 2 ಮತ್ತು 3

ಉತ್ತರ : ಸಿ

9. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಕ್ಯಾನ್ಸರ್ ರೇಡಿಯೋ ಥೆರಪಿ ಚಿಕಿತ್ಸೆಯ ವಿಧಾನದಲ್ಲಿ ರೇಡಿಯೋ-ಕೊಬಾಲ್ಟ್(ಕೊಬಾಲ್ಟ್-60), ರೆಡಾನ್-120, ಐಯೋಡಿನ್120, ಎಕ್ಸ್-ರೆ ವಿಕೀರಣಗಳನ್ನು ಬಳಸುತ್ತಾರೆ.

ಬಿ. ಡಿಸಾರಿಬ್ ಔಷಧಿ ಬಳಸುವ ಕ್ಯಾನ್ಸರ್ ರೋಗಗಳೆಂದರೆ ಲ್ಯೂಕೇಮಿಯಾ, ಜಠರ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್, ದುಗ್ಧ ಗ್ರಂಥಿ ಕ್ಯಾನ್ಸರ್ ಮತ್ತು ಅನ್ನನಾಳದ ಕ್ಯಾನ್ಸರ್ ಆಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

10. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಬೆಂಗಳೂರಿನಲ್ಲಿದೆ.

ಬಿ. ಇನ್ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಬಯಾಲಜಿ ಮತ್ತು ರಿಜೆನೆರೇಟಿವ್ ಮೆಡಿಸಿನ್ ಸಂಸ್ಥೆಯು ಪುಣೆಯಲ್ಲಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಎ

11. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ.

ಬಿ. 2024 ರ ವಿಶ್ವ ಕ್ಯಾನ್ಸರ್ ದಿನದ ಥೀಮ್ " Close the Care Gap: Everyone Deserves Access to Cancer Care." ಆಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.