ಐಎಎಸ್, ಕೆಎಎಸ್, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
1.ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ಇತ್ತೀಚೆಗೆ 2023 ರ ಜಾಗತಿಕ ಲಿಂಗ ಅಂತರ ಸೂಚ್ಯಂಕವನ್ನು ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿದೆ.
ಬಿ. ಈ ಸೂಚ್ಯಂದಲ್ಲಿ ಭಾರತ 146 ದೇಶಗಳಲ್ಲಿ 127 ನೇ ಸ್ಥಾನದಲ್ಲಿದೆ.
ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ
1.ಹೇಳಿಕೆ ಎ ಸರಿಯಾಗಿದೆ
2.ಹೇಳಿಕೆ ಬಿ ಸರಿಯಾಗಿದೆ
3. ಎರಡೂ ಹೇಳಿಕೆಗಳು ತಪ್ಪಾಗಿವೆ
4. ಎರಡೂ ಹೇಳಿಕೆಗಳು ಸರಿಯಾಗಿವೆ
ಉತ್ತರ: 4
2. ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ
ಎ. ವಿಶ್ವ ಆರ್ಥಿಕ ವೇದಿಕೆಯು ಸ್ವಿಟ್ಜರ್ಲ್ಯಾಂಡ್ ನ ಜಿನೀವಾದಲ್ಲಿ 1971ರಲ್ಲಿ ಸ್ಥಾಪನೆಯಾದ ಲಾಭರಹಿತ ಸಂಸ್ಥೆಯಾಗಿದೆ.
ಬಿ. ಜಾಗತಿಕ ಲಿಂಗ ಅಂತರ ವರದಿಯ ಪ್ರಕಾರ ಲಿಂಗ ಸಮಾನತೆಯ ವಿಷಯದಲ್ಲಿ ಭಾರತವು ಕಳೆದ ವರ್ಷಕ್ಕಿಂತ ಎಂಟು ಸ್ಥಾನಗಳ ಸುಧಾರಣೆ ಕಂಡಿದೆ.
ಮೇಲಿನ ಹೇಳಿಕೆಗಳಲ್ಲಿ ಸರಿಯಾದ/ವುಗಳನ್ನು ಗುರುತಿಸಿ
1. ಹೇಳಿಕೆ ಎ ಸರಿಯಾಗಿದೆ
2. ಹೇಳಿಕೆ ಬಿ ಸರಿಯಾಗಿದೆ
3. ಎರಡೂ ಹೇಳಿಕೆಗಳು ತಪ್ಪಾಗಿವೆ
4. ಎರಡೂ ಹೇಳಿಕೆಗಳು ಸರಿಯಾಗಿವೆ
ಉತ್ತರ : 4
3. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಎ) ಭಾರತದ ಸಂವಿಧಾನವು ಅನುಚ್ಛೇದ 44 ರಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಅವಕಾಶ ಕಲ್ಪಿಸಿದೆ.
ಬಿ) ಇದು ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1.ಎ ಮಾತ್ರ
2.ಬಿ ಮಾತ್ರ
3. ಎ ಮತ್ತು ಬಿ ಎರಡೂ
4. ಎ ಅಥವಾ ಬಿ ಅಲ್ಲ
ಉತ್ತರ: 1
4) ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಎ) ಮದುವೆ, ವಿಚ್ಛೇದನ, ಉತ್ತರಾಧಿಕಾರದಂತಹ ವೈಯಕ್ತಿಕ ಕಾನೂನು ವಿಷಯಗಳು ಒಕ್ಕೂಟ ಪಟ್ಟಿಯ ಅಡಿಯಲ್ಲಿ ಬರುತ್ತವೆ.
ಬಿ) 1937 ರ ಷರಿಯತ್ ಕಾನೂನು ಭಾರತದಲ್ಲಿನ ಎಲ್ಲಾ ಭಾರತೀಯ ಮುಸ್ಲಿಮರ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳನ್ನು ಗಮನಿಸಿ
1. ಎ ಮಾತ್ರ ಸರಿ
2. ಬಿ ಮಾತ್ರ ಸರಿ
4. ಎ ಮತ್ತು ಬಿ ಎರಡೂ ಸರಿ
5. ಎ ಮತ್ತು ಬಿ ಎರಡೂ ಸರಿಯಲ್ಲ
ಉತ್ತರ: 2
5) 22 ನೇ ಕಾನೂನು ಆಯೋಗದ ಅಧ್ಯಕ್ಷರು ಯಾರು?
1. ನ್ಯಾ. ಧನಂಜಯ ವೈ. ಚಂದ್ರಚೂಡ್
2. ನ್ಯಾ. ಸಂಜಯ್ ಕಿಶನ್ ಕೌಲ್
3. ನ್ಯಾ.ತಿ ಕೆ.ಎಂ. ಜೋಸೆಫ್
4. ನ್ಯಾ.ತಿ ರಿತು ರಾಜ್ ಅವಸ್ತಿ
ಉತ್ತರ: 4
6) ಭಾರತದ ಕಾನೂನು ಆಯೋಗಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
ಎ. ಭಾರತದ ಕಾನೂನು ಆಯೋಗವು ಶಾಸನಬದ್ಧ ಸಂಸ್ಥೆಯಾಗಿದೆ.
ಬಿ. ಎಂ.ಸಿ. ಸೆಟಲ್ವಾಡ್ ಮೊದಲ ಕಾನೂನು ಆಯೋಗದ ಅಧ್ಯಕ್ಷರಾಗಿದ್ದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ ?
(1) ಎ ಮಾತ್ರ
(2) ಬಿ ಮಾತ್ರ
(3) ಎ ಮತ್ತು ಬಿ ಎರಡೂ
(4) ಎ ಮತ್ತು ಬಿ ಎರಡೂ ಅಲ್ಲ
ಉತ್ತರ: 2
7. ಲುಗಾನೋ ತತ್ವಗಳು ಕೆಳಗಿನ ಯಾವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ವಿವರಣೆಯನ್ನು ನೀಡುತ್ತವೆ?
ಎ. ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ತೆಗೆದುಕೊಂಡಿರುವ ನಿರ್ಧಾರ.
ಬಿ. ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ರಚನೆಯಾಗಿರುವ ಕಾರ್ಯಸೂಚಿ.
ಸಿ. ಉಕ್ರೇನ್ ರಾಷ್ಟ್ರದ ಪುನರ್ ನಿರ್ಮಾಣಕ್ಕಾಗಿ ಸಿದ್ಧವಾಗಿರುವ ಕಾರ್ಯಸೂಚಿ.
ಡಿ. ಯುದ್ಧದ ಕೈದಿಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಿದ್ಧವಾಗಿರುವ ಮಾರ್ಗಸೂಚಿಗಳು.
ಉತ್ತರ: ಸಿ
8. ಇತ್ತೀಚೆಗೆ ವೈಕಂ ಸತ್ಯಾಗ್ರಹದ ಶತಮಾನೋತ್ಸವವನ್ನು ರಾಷ್ಟ್ರದ ಯಾವ ಭಾಗದಲ್ಲಿ ಆಯೋಜಿಸಲಾಗಿತ್ತು?
ಎ. ಕೊಟಾಯಂ, ಕೇರಳ.
ಬಿ. ಕೊಲ್ಕತ್ತಾ, ಪಶ್ಚಿಮ ಬಂಗಾಳ.
ಸಿ. ಚೆನ್ನೈ, ತಮಿಳುನಾಡು.
ಡಿ. ವಿಶಾಖಪಟ್ಟಣಂ, ಆಂಧ್ರಪ್ರದೇಶ.
ಉತ್ತರ : ಎ
9. ಕೆಳಗಿನ ಯಾವ ವಿಚಾರಗಳಲ್ಲಿ ಅಮೆರಿಕ ಭಾರತಕ್ಕೆ ವಿಶೇಷ ವಿನಾಯತಿಗಳನ್ನು ಕಲ್ಪಿಸಿದೆ?
1. ಪರಮಾಣು ಪ್ರಸರಣ ರಹಿತ ಒಪ್ಪಂದಕ್ಕೆ ಒತ್ತಡವನ್ನು ಹೇರಿರುವುದಿಲ್ಲ.
2. ಸಮಗ್ರ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದಕ್ಕೂ ಕೂಡ ಯಾವುದೇ ಒತ್ತಡವನ್ನು ಹೇರಿರುವುದಿಲ್ಲ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2 ಡಿ.
ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ : ಡಿ
10. ಕೆಳಗಿನ ಯಾವ ಒಪ್ಪಂದದ ಅನ್ವಯ ಭಾರತ-ಅಮೆರಿಕ ಅಣ್ವಸ್ತ್ರ ಒಪ್ಪಂದ ಜಾರಿಗೆ ಬಂದಿತು?
ಎ. 1 2 3 ಒಪ್ಪಂದ.
ಬಿ. 1 3 2 ಒಪ್ಪಂದ.
ಸಿ. 1 1 2 ಒಪ್ಪಂದ.
ಡಿ. 2 3 4 ಒಪ್ಪಂದ.
ಉತ್ತರ : ಎ
11. ದೇಶದ ಆರ್ಥಿಕತೆಗೆ ಎಂಎಸ್ಎಂಇಗಳು ಯಾವ ರೀತಿ ಕೊಡುಗೆ ನೀಡುತ್ತವೆ ?.
ಎ. ಇವು ದೇಶದ ಒಟ್ಟು ಮೌಲ್ಯ ಸೇರ್ಪಡೆಯಲ್ಲಿ ಶೇ 32ರಷ್ಟು ಹೊಂದಿವೆ.
ಬಿ. ಎಂಎಸ್ಎಂಇ ಗಳು ದೇಶದಲ್ಲಿ ಸುಮಾರು 11.10 ಕೋಟಿಯಷ್ಟು ಉದ್ಯೋಗಗಳನ್ನು ಸೃಷ್ಟಿಸಿವೆ.
ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.
ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.
ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.
ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.
ಉತ್ತರ: ಸಿ.
12. ಎಂ ಎಸ್ ಎಂ ಇ ಗಳ ಬೆಂಬಲಕ್ಕೆ ಸರ್ಕಾರ ನೀಡುತ್ತಿರುವ ತಾಂತ್ರಿಕ ಸಹಾಯವೇನು?
ಎ. ಸಣ್ಣ ಪ್ರಮಾಣದ ಕೈಗಾರಿಕಾ ಅಭಿವೃದ್ಧಿ ಸಂಘಟನೆಯನ್ನು 1954ರಲ್ಲಿ ಸ್ಥಾಪಿಸಿರುವುದು.
ಬಿ. 1982ರಲ್ಲಿ ಗ್ರಾಮೀಣ ತಂತ್ರಜ್ಞಾನ ಅಭಿವೃದ್ಧಿ ಕೌನ್ಸಿಲ್ ಸ್ಥಾಪಿಸಿರುವುದು.
ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.
ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.
ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.
ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.
ಉತ್ತರ:ಸಿ.
13. ರಾಷ್ಟ್ರೀಯ ಷೇರುನಿಧಿಯನ್ನು ಯಾವಾಗ ಸ್ಥಾಪಿಸಲಾಯಿತು?
ಎ. 1987
ಬಿ. 1986
ಸಿ. 1994
ಡಿ. 1995
ಉತ್ತರ: ಎ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.