1. ಆಹಾರ ಸಂಸ್ಕರಣಾ ವಲಯದ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ?
1. 2014ರಿಂದ 2020ರ ಅವಧಿಯಲ್ಲಿ 4.18 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದು ಬಂದಿದೆ.
2. 2020ರ ನಂತರ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.
ಉತ್ತರ: ಎ
____________________________________
2. ಭಾರತದ ಆಹಾರ ಸಂಸ್ಕರಣಾ ವಲಯ ಕೆಳಗಿನ ಯಾವ ಸವಾಲುಗಳನ್ನು ಎದುರಿಸುತ್ತಿದೆ?
1. ಸೂಕ್ತ ದಾಸ್ತಾನು ವ್ಯವಸ್ಥೆ ಇಲ್ಲದೆ ಇರುವುದು.
2. ರೈಲು ಮತ್ತು ರಸ್ತೆ ಸಾರಿಗೆಯ ಅಲಭ್ಯತೆ.
3. ಸಂಶೋಧನಾ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಮರ್ಪಕ ಬೆಂಬಲ ಇಲ್ಲದಿರುವುದು.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1, 2 ಮತ್ತು 3
ಉತ್ತರ : ಡಿ
____________________________________
3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ದೇಶದಲ್ಲಿ 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು.
ಬಿ. ತುರ್ತು ಪರಿಸ್ಥಿತಿ ಘೋಷಣೆ ಮಾಡಲಾದ ಜೂನ್ 25 ಅನ್ನು ಕೇಂದ್ರ ಸರ್ಕಾರವು ಸಂವಿಧಾನದ
ಹತ್ಯೆಯ ದಿನ ಎಂದು ಘೋಷಿಸಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ
____________________________________
4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಸಂವಿಧಾನದ XVIII ಭಾಗದ 352 ರಿಂದ 360ನೇ ವಿಧಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಕುರಿತ
ಪ್ರಾವಧಾನಗಳನ್ನು ಒದಗಿಸಲಾಗಿದೆ.
ಬಿ. ಭಾರತೀಯ ಸಂವಿಧಾನವು ನಾಲ್ಕು ರೀತಿಯ ತುರ್ತು ಪರಿಸ್ಥಿತಿಗಳ ಪ್ರಾವಧಾನವನ್ನು ಒದಗಿಸುತ್ತದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಎ
____________________________________
5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಕೇಂದ್ರ ಸರ್ಕಾರವು 358ನೇ ವಿಧಿಯ ಅಡಿಯಲ್ಲಿ ಯುದ್ಧ ಮತ್ತು ಬಾಹ್ಯ ಆಕ್ರಮಣದ ಸಮಯದಲ್ಲಿ
ಮಾತ್ರ ನಾಗರಿಕರ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದು.
ಬಿ. ಕೇಂದ್ರ ಸರ್ಕಾರವು ವಿಧಿ 359ರ ಅಡಿಯಲ್ಲಿ ಯುದ್ಧ, ಬಾಹ್ಯ ಆಕ್ರಮಣ, ಸಶಸ್ತ್ರ ದಂಗೆ, ಆರ್ಥಿಕ
ಬಿಕ್ಕಟ್ಟು ಮತ್ತು ಇತರ ಕಾರಣಗಳಿಂದ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಬಹುದು.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ
____________________________________
6. ಭಾರತದ ಕೆಳಗಿನ ಯಾವ ರಾಜ್ಯದಲ್ಲಿ ಕೋಲ್ಮಿಂಚಿನ ಘಟನೆಗಳು ಹೆಚ್ಚಾಗಿ ಕಂಡುಬರುತ್ತದೆ?
ಎ. ಒಡಿಶಾ.
ಬಿ. ನಾಗಾಲ್ಯಾಂಡ್.
ಸಿ. ಉತ್ತರ ಪ್ರದೇಶ.
ಡಿ. ಮಧ್ಯಪ್ರದೇಶ.
ಉತ್ತರ: ಎ
____________________________________
7. ಕೆನಡಾದ ಯಾವ ಪ್ರದೇಶಗಳಲ್ಲಿ ಕಾಡ್ಗಿಚ್ಚುಗಳ ಘಟನೆಗಳು ಹೆಚ್ಚಾಗಿ ಕಂಡುಬಂದಿದೆ?
1. ಬ್ರಿಟಿಷ್ ಕೊಲಂಬಿಯಾ.
2. ಆಲ್ಬರ್ಟಾ.
3. ಒಂಟಾರಿಯೋ.
4. ನೋವಾ ಸ್ಕಾಟಿಯಾ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ
ಬಿ. 1, 2, 3 ಮತ್ತು 4
ಸಿ. 2 ಮತ್ತು 3
ಡಿ. 3 ಮತ್ತು 4.
ಉತ್ತರ : ಬಿ
____________________________________
8. ಸರಕು ಮತ್ತು ಸೇವಾ ತೆರಿಗೆಯ ಮೇಲ್ಮನವಿ ನ್ಯಾಯಾಧಿಕರಣಗಳ ಸಂಖ್ಯೆಯನ್ನು ನಿರ್ಧರಿಸಲು ಕೆಳಗಿನ ಯಾರಿಗೆ ಅಧಿಕಾರವನ್ನು ನೀಡಲಾಗಿದೆ?
ಎ. ಕೇಂದ್ರ ಹಣಕಾಸು ಸಚಿವಾಲಯ.
ಬಿ. ಕೇಂದ್ರ ವಾಣಿಜ್ಯ ಸಚಿವಾಲಯ.
ಸಿ. ರಾಜ್ಯಸರ್ಕಾರಗಳಿಗೆ.
ಡಿ. ಸುಪ್ರೀಂಕೋರ್ಟ್.
ಉತ್ತರ: ಸಿ
____________________________________
9. ಕೆಳಗಿನ ಯಾವ ಸಭೆಯಲ್ಲಿ ಸರಕು ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣವನ್ನು ಸ್ಥಾಪಿಸಲು ಮೌಖಿಕ ಸಮ್ಮತಿಯನ್ನು ನೀಡಲಾಗಿತ್ತು?
ಎ. 49ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ.
ಬಿ. 48ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ.
ಸಿ. 53ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ.
ಡಿ. 55ನೇ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ.
ಉತ್ತರ: ಎ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.