ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿನ(RRB) ಖಾಲಿ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದೆ. ನೇಮಕಾತಿ ಆಯ್ಕೆಗಾಗಿ ನಡೆಯುವ ಪರೀಕ್ಷೆ ಗಳು ಮತ್ತು ಅಧ್ಯಯನ ಸಿದ್ಧತೆ ಕುರಿತ ಮಾಹಿತಿ ಇಲ್ಲಿದೆ.
ಬ್ಯಾಂಕ್‌ನಲ್ಲಿ ಉದ್ಯೋಗ ಮಾಡುವವರು ಲೆಕ್ಕಾಚಾರದಲ್ಲಿ ಪಕ್ಕಾ ಇರಬೇಕು ಹಾಗೇ ಚುರುಕಾಗಿರಬೇಕು. ಸಂಯಮದಿಂದ ಗ್ರಾಹಕರನ್ನು ನಿರ್ವಹಿಸಬೇಕು. ಕಾನೂನು, ನೀತಿ–ನಿಯಮಗಳನ್ನು ಚೆನ್ನಾಗಿ ಅರಿತಿರಬೇಕು. ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ, ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕೌಶಲವಿರಬೇಕು.
ಇದೇ ಆಗಸ್ಟ್–ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ನೇಮಕಾತಿ ಪರೀಕ್ಷೆಗಳಲ್ಲೂ ಇಂಥದ್ದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿನ 8,106 ವಿವಿಧ ಹುದ್ದೆಗಳಿಗಾಗಿ ನಡೆಯುವ ಈ ನೇಮಕಾತಿಗಾಗಿ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಮೊದಲನೆಯದ್ದು ಪೂರ್ವಭಾವಿ ಪರೀಕ್ಷೆ. ಎರಡನೆಯದು ಮುಖ್ಯ ಪರೀಕ್ಷೆ. ಮೂರನೆಯದು ಸಂದರ್ಶನ.
ಪೂರ್ವಭಾವಿ ಪರೀಕ್ಷೆ: ಈ ಪರೀಕ್ಷೆಯಲ್ಲಿ 80 ಅಂಕಗಳ 80 ಪ್ರಶ್ನೆಗಳು ಇರುತ್ತವೆ. ಪರೀಕ್ಷಾ ವಿವರ ಈ ಕೆಳಗಿನ ಕೋಷ್ಠಕದಲ್ಲಿದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಮೊದಲನೆಯದು ರೀಸನಿಂಗ್, ಎರಡನೆಯದು ನ್ಯೂಮರಿಕಲ್ ಎಬಿಲಿಟಿ (ಅಂಕಿ–ಸಂಖ್ಯೆ ಸಾಮರ್ಥ್ಯ).
ರೀಸನಿಂಗ್ ಪತ್ರಿಕೆ
ಆರ್‌ಆರ್‌ಬಿ ಈ ಪತ್ರಿಕೆಗೆ ನಿಗದಿಪಡಿಸಿರುವ ಪಠ್ಯಕ್ರಮದಲ್ಲಿ ಗುಂಪಿಗೆ ಸೇರದ್ದನ್ನು ತೆಗೆದು ಹಾಕಿ (Odd man out), ಕೋಡಿಂಗ್-ಡಿಕೋಡಿಂಗ್, ಕಾರಣಗಳು ಮತ್ತು ಪರಿಣಾಮಗಳು(Reasoning and Effects), ತೀರ್ಮಾನ ಮಾಡುವಿಕೆ (Decision Making), ಸಮರ್ಥನೆ ಮತ್ತು ಕಾರಣ(Asserting and Reasoning) ಸೇರಿದಂತೆ 23 ವಿವಿಧ ವಿಷಯಗಳಿವೆ.
ಅಧ್ಯಯನ ಗ್ರಂಥಗಳು: ಈ ಪತ್ರಿಕೆಗೆ ಉತ್ತರಿ ಸುವ ಸಂಬಂಧಯಾವುದೇ ಆಕರ ಪುಸ್ತಕಗಳನ್ನ ಓದುವ ಮೊದಲು, ಈ ಪರೀಕ್ಷೆಯ ಹಿಂದಿನ ವರ್ಷ ಗಳಪ್ರಶ್ನೆಪತ್ರಿಕೆಗಳನ್ನು ಬಿಡಿಸಬೇಕು.
ಇದರ ಜೊತೆ ಜೊತೆಗೆ ಆರ್.ಎಸ್. ಅಗರವಾಲ್ ಅವರ ‘ಸಬ್ಜೆಕ್ಟಿವ್ ಮತ್ತು ಆಬ್ಜೆಕ್ಟಿವ್ ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್’, ಎಂ. ಟೈರಾ ಅವರ ‘ಕ್ವಿಕರ್ ಮ್ಯಾಥೆಮೆಟಿಕ್ಸ್’ ಪರಾಮರ್ಶಿಸಬಹುದು. ಇದಲ್ಲದೇ ಬ್ಯಾಂಕ್ ಎಕ್ಸಾಂ ಪ್ರಿಪರೇಶನ್ ಡಾಟ್ ಕಾಮ್ (exampreparation.com), ಬ್ಯಾಂಕ್ ಇಂಡಿಯಾ ಡಾಟ್ ಕಾಂ(bankindia.com), ಎಕ್ಸಾಂ ಫಂಡಾ ಡಾಟ್ ಕಾಮ್(examfunda.com) ಮತ್ತಿತರ ವೆಬ್‌ಸೈಟ್‌ಗಳಲ್ಲಿ ಸಾಕಷ್ಟು ಸಾಮಗ್ರಿಗಳಿವೆ ಅದನ್ನೂ ಓದಬಹುದು.
ನ್ಯೂಮರಿಕಲ್ ಎಬಿಲಿಟಿ ಪತ್ರಿಕೆಯ ವಿಷಯಗಳು
ಈ ಪತ್ರಿಕೆಯಲ್ಲಿ ಹೆಚ್ಚಾಗಿ ಗಣಿತಕ್ಕೆ ಸಂಬಂಧಿಸಿದ ವಿಷಯಗಳಿರುತ್ತವೆ. ಅವುಗಳೆಂದರೆ; ಸಂಖ್ಯಾ ಪದ್ಧತಿ(Number System), ದಶಮಾಂಶ ಭಿನ್ನರಾಶಿಗಳು(Decimal Fractions), ಸಮಯ ಮತ್ತು ಕೆಲಸ(Time and Work), ವಯಸ್ಸಿಗೆ ಸಂಬಂಧಿಸಿದ ಲೆಕ್ಕಗಳು (Age Problems), ಶೇಕಡಾವಾರು (Percentage), ಸಂಯೋಜನೆ ಮತ್ತು ವಿಕಲ್ಪ (Permutation and Combination), ಲಘುತ್ತಮ ಸಾಮಾನ್ಯ ಅಪವರ್ತನ ಮತ್ತು ಮಹತ್ತಮ ಸಾಮಾನ್ಯ ಅಪವರ್ತನ(HCF and LCM), ಸರಳ ಬಡ್ಡಿ(Simple Interest), ಕಾಲ ಮತ್ತು ದೂರ (Time and Distance), ಸರಳೀಕರಣ(Simplification), ಅನುಪಾತ ಮತ್ತು ಸಮಾನುಪಾತ (Ratio and Proportion), ಸಂಭವನೀಯತೆ, ಲಾಭ ಮತ್ತು ನಷ್ಟ (Probability Profit and Loss),ಚಕ್ರಬಡ್ಡಿ (Compound Interest), ಸರಾಸರಿ ಪಾಲುದಾರಿಕೆ(Average Partnership), ದತ್ತಾಂಶ ವ್ಯಾಖ್ಯಾನ (Data Interpretation), ವರ್ಗ ಸಮೀಕರಣ(Quadratic Equations)
ಆಕರ ಗ್ರಂಥಗಳು: ಈ ವಿಭಾಗದಲ್ಲೂ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಆದ್ಯತೆ ನೀಡಬೇಕು. ನಂತರ, ಪಠ್ಯಕ್ರಮ ಆಧರಿಸಿ ಪುಸ್ತಕಗಳನ್ನು ಓದಬೇಕು.
ಈ ಪತ್ರಿಕೆಯ ಪರೀಕ್ಷೆಗೂ ಆರ್.ಎಸ್ ಅಗರವಾಲ್ ಅವರು ಕೃತಿ ‘ವರ್ಬಲ್ ಅಂಡ್ ನಾನ್ ವರ್ಬಲ್ ರಿಸನಿಂಗ್‘ , ಅರಿಹಂತ್ ಪ್ರಕಾಶನದ ವಿವಿಧ ರೀಸನಿಂಗ್ ಪುಸ್ತಕಗಳು ಸಹಕಾರಿಯಾಗುತ್ತವೆ. ಇದಲ್ಲದೇ `ಆರ್‌ಆರ್‌ಬಿ 2022-23 ರೀಸನಿಂಗ್ ಚಾಪ್ಟರ್ ವೈಸ್ ಸಾಲ್ವಡ್ ಪೇಪರ್ಸ್’(RRB 2022-23 REASONING CHATPERWISE SOLVED PAPER ) ಪುಸ್ತಕಗಳನ್ನು ಪರಾಮರ್ಶಿಸಬಹುದು.
ಪರೀಕ್ಷಾ ತಯಾರಿಗೆ ಸಲಹೆಗಳು
ಈ ಹಂತದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುವವರು, ಗಣಿತದಲ್ಲಿ ಹೆಚ್ಚು ಹೆಚ್ಚು ಪ್ರಾಬ್ಲಮ್‌ಗಳನ್ನು ಬಿಡಿಸುವ ಅಭ್ಯಾಸ ಮಾಡಬೇಕು.
ಆನ್‌ಲೈನ್‌ಲ್ಲಿ ಹೆಚ್ಚು ಪರೀಕ್ಷಾ ಸರಣಿಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಪರೀಕ್ಷೆಯ ನೈಜ ಅನುಭವಗಳು ಆಗುತ್ತವೆ. ಪರೀಕ್ಷೆಯಲ್ಲಿ ಎಲ್ಲಿ ಎಡವುತ್ತೇವೆಂಬ ಅರಿವಾಗುತ್ತದೆ.
ಮೊದಲಿಗೆ ರೀಸನಿಂಗ್ ಹಾಗೂ ನ್ಯೂಮರಿಕಲ್ ಎಬಿಲಿಟಿಯ ಮೂಲ ಪರಿಕಲ್ಪನೆ ಅರ್ಥೈಸಿಕೊಳ್ಳಿ. 8, 9 ಮತ್ತು 10ನೇ ತರಗತಿಯ ಗಣಿತದ ಪುಸ್ತಕಗಳನ್ನು ಓದಿ. ಜೊತೆಗೆ, ಆರ್‌ಆರ್‌ಬಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀಡಲಾದ ಪಠ್ಯಕ್ರಮದ ಪಾಠಗಳನ್ನು ಓದಿ. ನಂತರ ಆಕರ ಗ್ರಂಥಗಳಲ್ಲಿರುವ ಪ್ರಶ್ನೆಗಳನ್ನು ಬಿಡಿಸಿ. ವಾರಕ್ಕೊಮ್ಮೆ ಆನ್‌ಲೈನ್ ಟೆಸ್ಟ್ ಸೀರಿಸ್‌ಗಳನ್ನು ತೆಗೆದುಕೊಳ್ಳಿ (ವಾರಕ್ಕೆ 2-3 ತೆಗೆದುಕೊಂಡರೆ ಅತ್ಯುತ್ತಮ).
ಹಾಂ! ಗಣಿತದ ಪುಸ್ತಕಗಳು ನಿಮಗೆ ನ್ಯೂಮರಿಕಲ್ ಎಬಿಲಿಟಿ ವಿಭಾಗಕ್ಕೆ ಮಾತ್ರ ಸಹಾಯ ಮಾಡಬಲ್ಲವು. ರೀಸನಿಂಗ್ ವಿಭಾಗದ ಮೂಲ ಪರಿಕಲ್ಪನೆ ತಿಳಿಯಲು ಸ್ಪರ್ಧಾತ್ಮಕ ಪರೀಕ್ಷೆಗೆ ಮೀಸಲಾದ ಮಾಸ ಪತ್ರಿಕೆಗಳು ಹಾಗೂ ಜಾಲತಾಣಗಳೇ ಹೆಚ್ಚು ಉಪಯುಕ್ತ.
ಪತ್ರಿಕೆಯಲ್ಲಿರುವ ಎಲ್ಲಾ ಪ್ರಶ್ನೆಗಳನ್ನು ಬಿಡಿಸುವುದಕ್ಕಾಗಿ ಹೆಚ್ಚು ಒತ್ತು ನೀಡಬೇಡಿ. ಆದರೆ, ಉತ್ತರಿಸಿರುವ ಎಲ್ಲ ಪ್ರಶ್ನೆಗಳು ನಿಖರವಾಗಿರುವಂತೆ ನೋಡಿಕೊಳ್ಳಿ. ಏಕೆಂದರೆ ತಪ್ಪಾದ ಉತ್ತರಗಳಿಗೆ ಅಂಕಗಳನ್ನು ಕಳೆಯುತ್ತಾರೆ. ಪ್ರಶ್ನೆ ಪತ್ರಿಕೆಯಲ್ಲಿ ಬಂದ ಪ್ರಶ್ನೆಗಳ ಪೈಕಿ ಶೇ 60 ರಿಂದ 70 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೂ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರಿ.
ರೀಸನಿಂಗ್‌ನಲ್ಲಿ ಎರಡು ಬಗೆ. ಒಂದು ವರ್ಬಲ್ ರೀಸನಿಂಗ್, ಇನ್ನೊಂದು ನಾನ್ ವರ್ಬಲ್ ರೀಸನಿಂಗ್. ಇದರಲ್ಲಿ ದೀರ್ಘವಾದ ಸಮಸ್ಯೆಗಳನ್ನು ನೀಡಿರುತ್ತಾರೆ. ಹೆಚ್ಚು ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಸ್ವರೂಪದ ಪ್ರಶ್ನೆಗಳಿರುತ್ತವೆ. ಚಿತ್ರಗಳ ಸಹಾಯದಿಂದ ನಿಖರ ಉತ್ತರಗಳನ್ನು ಆಯ್ಕೆ ಮಾಡಬೇಕು. ಇದಕ್ಕಾಗಿ, ಈಗಿನಿಂದಲೇ ಪ್ರತಿ ದಿನ ಅಂಥ ಕಠಿಣ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಬೇಕು.
ನ್ಯೂಮರಿಕಲ್ ಎಬಿಲಿಟಿ ಪರೀಕ್ಷೆಯಲ್ಲಿ, ತರಹೇವಾರಿ ಲೆಕ್ಕಗಳನ್ನು ಕೇಳುತ್ತಾರೆ. ಪ್ರಶ್ನೆ ಉದ್ದವಿದ್ದು, ಅದನ್ನು ಓದಿ ಅರ್ಥೈಸಿಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ಆದ್ದರಿಂದ ಅಭ್ಯಾಸದ ವೇಳೆಯಲ್ಲಿ ಇಂಥ ಮಾದರಿಯ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಬೇಕು. ವೇದಿಕ್ ಗಣಿತದ ಅಭ್ಯಾಸವಿದ್ದವರಿಗೆ ಈ ಪ್ರಶ್ನೆ ಪತ್ರಿಕೆಗೆ ಉತ್ತರಿಸುವುದಕ್ಕೆ ಪೂರಕವಾಗುತ್ತದೆ.
(ಲೇಖಕರು: ನಿರ್ದೇಶಕರು, ಜ್ಞಾನಭಾರತಿ ಸ್ಪರ್ಧಾಪರೀಕ್ಷಾ ಕೇಂದ್ರ, ಬೆಂಗಳೂರು)
(ಮುಂದಿನವಾರ: ಪ್ರಾದೇಶಿಕ ಗ್ರಾಮೀಣ ಬ್ಯಂಕ್ ಪರೀಕ್ಷೆ ಕುರಿತ ಇನ್ನಷ್ಟು ವಿವರಗಳು ಹಾಗೂ ಮಾದರಿ ಪ್ರಶ್ನೆ ಪತ್ರಿಕೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.