1. ನಾನು ಬಿ. ಎ. ಪತ್ರಿಕೋದ್ಯಮ, ಐಚ್ಛಿಕ ಕನ್ನಡ, ಮನೋವಿಜ್ಞಾನ ವಿಷಯಗಳನ್ನು ಓದುತ್ತಿದ್ದೇನೆ. ಮನೋವಿಜ್ಞಾನ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಉದ್ಯೋಗದ ದೃಷ್ಟಿಯಿಂದ ಇದು ಯಾವ ರೀತಿ ಅನುಕೂಲವಾಗುತ್ತದೆ? ಎಲ್ಲಿ ಕೆಲಸ ಸಿಗುವುದು?
→ಮಮತಾ, ತುಮಕೂರು
ಇಂದು ಮನೋವಿಜ್ಞಾನದ ಬಳಕೆ ಇಲ್ಲದಿರುವ ಕ್ಷೇತ್ರವೇ ಇಲ್ಲ. ನಮ್ಮ ವೈಯಕ್ತಿಕ ಜೀವನ, ವೃತ್ತಿ, ನೆಂಟರು, ಸ್ನೇಹಿತರು – ಎಲ್ಲರ ಜೊತೆಯೂ ಮನೋವಿಜ್ಞಾನ ಬೇಕೇ ಬೇಕು.
ಮನೋವಿಜ್ಞಾನದ ಯಾವ ಕ್ಷೇತ್ರದಲ್ಲಿ ನೀವು ಓದಲು ಬಯಸುತ್ತೀರಾ? ಮಕ್ಕಳ ಮನೋವಿಜ್ಞಾನವ, ಕ್ಲಿನಿಕಲ್ ಸೈಕಾಲಜಿ, ಇಂಡಸ್ಟ್ರಿಯಲ್ ಸೈಕಾಲಜಿ, ಎಜುಕೇಷನಲ್ ಸೈಕಾಲಜಿ, ಕೌನ್ಸಿಲಿಂಗ್ ಸೈಕಾಲಜಿ, ಮ್ಯಾರೇಜ್ ಸೈಕಾಲಜಿ – ಈ ರೀತಿ ಅನೇಕ ಕ್ಷೇತ್ರಗಳಿವೆ. ಎಲ್ಲದರಲ್ಲೂ ಪಿಎಚ್.ಡಿ. ಪ್ರೋಗ್ರಾಮ್ ಇದೆ.
ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆಯಬಹುದು. ಎಂ.ಬಿ.ಎ. ಇನ್ ಹ್ಯೂಮನ್ ರಿಸರ್ಚ್ ಪ್ರೋಗ್ರಾಂ ಮಾಡಲು ಅವಕಾಶವಿದೆ.
ಸರಿಯಾದ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಿ, ಪ್ರವೇಶ ಪರೀಕ್ಷೆಯನ್ನು ಬರೆಯಿರಿ.
ಆಸ್ಪತ್ರೆ, ಕೈಗಾರಿಕೋದ್ಯಮಗಳು, ಶಿಕ್ಷಣಸಂಸ್ಥೆಗಳಲ್ಲದೆ ಸ್ವತಂತ್ರವಾಗಿ ಕೂಡ ವೃತ್ತಿಯನ್ನು ಮಾಡಬಹುದು. ನಮ್ಮ ದೇಶದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ, ವಿದೇಶಗಳಲ್ಲಿ ಪಿಎಚ್.ಡಿ.ಯನ್ನು ಮಾಡಬಹುದು. ಎಲ್ಲದರಲ್ಲೂ ಪರಿಣತಿ, ಆಸಕ್ತಿ ಬಹಳ ಮುಖ್ಯ. ಬೆಂಗಳೂರು, ಮೈಸೂರು, ಕರ್ನಾಟಕ ಯೂನಿರ್ವಸಿಟಿ ಹೀಗೆ ಎಂ.ಎ. ಪ್ರೋಗ್ರಾಮ್‌ಗಳನ್ನು ಮಾಡಲು ಅವಕಾಶವಿದೆ.ಎಂ.ಫಿಲ್., ಇನ್‌ಟಿಗ್ರೇಟೆಡ್ ಎಂ.ಫಿಲ್– ಪಿ. ಎಚ್.ಡಿ. ಪ್ರೋಗ್ರಾಮ್ ಸಹ ಇದೆ.
ಕ್ರಿಮಿನಲ್, ಫೊರೆನ್ಸಿಕ್ ಸೈಕಾಲಜಿ ಕೋರ್ಸ್‌ಗಳಲ್ಲಿ ಬೇಡಿಕೆ ಏರುತ್ತಿದೆ. ಉದ್ಯೋಗಾವಕಾಶಕ್ಕೆ ಕೊರತೆ ಇಲ್ಲ. ಯೋಚಿಸಿ ನಿಮಗೆ ಆಸಕ್ತಿ ಇರುವ ಕ್ಷೇತ್ರವನ್ನು ಆರಿಸಿ.
2. ನಾನು ಬಿ. ಎಸ್ಸಿ. (ಪಿ.ಸಿ.ಎಂ.) ಓದುತ್ತಿದ್ದೇನೆ. ನನಗೆ ಎಂ.ಎಸ್ಸಿ. ರಸಾಯನ ಶಾಸ್ತ್ರದ ಬಗ್ಗೆ ಮಾಹಿತಿ ನೀಡುತ್ತೀರಾ?
→ನಿಶ್ಚಿತಾ, ಉಪ್ಪಿನಂಗಡಿ
ಔಷಧ, ಆಹಾರಗಳ ಸಂಶೋಧನೆ, ರಸಗೊಬ್ಬರಗಳ ತಯಾರಿಕೆ, ಬಣ್ಣಗಳ ತಯಾರಿಕೆ, ಕಾಸ್‌ಮೆಟಿಕ್ – ಹೀಗೆ ನಾನಾ ಕ್ಷೇತ್ರಗಳಿಗೆ ರಸಾಯನಶಾಸ್ತ್ರ ಬಹಳ ಮುಖ್ಯ.
ನೀವು ಬಿ.ಎಸ್ಸಿ. ಮುಗಿದ ನಂತರ ಎಂ. ಎಸ್ಸಿ.ಯನ್ನು ಮಾಡಬೇಕು. ಯಾವ ಕ್ಷೇತ್ರದಲ್ಲಿಎಂ. ಎಸ್ಸಿ. ಮಾಡಬೇಕು ಅನ್ನುವುದನ್ನು ನಿರ್ಧರಿಸಿಕೊಳ್ಳಿ. ಈ ಪ್ಲಾನಿಂಗ್ ನಿಮ್ಮ ಅಂತಿಮ ವರ್ಷದ ಶುರುವಿನಲ್ಲೇ ನಿರ್ಧರಿಸಬೇಕು.
ಎಂ.ಎಸ್ಸಿ. ಎರಡು ವರ್ಷದ ಕೋರ್ಸ್
ರಸಾಯನಶಾಸ್ತ್ರದ ಕೆಲವು ಕ್ಷೇತ್ರಗಳು:
1. ಅಗ್ರೋಕೆಮಿಸ್ಟ್ರಿ ,2. ಅನಲಿಟಿಕಲ್ ಕೆಮಿಸ್ಟ್ರಿ
3. ಆಸ್ಟ್ರೋ ಕೆಮಿಸ್ಟ್ರಿ,4. ಬಯೋ ಕೆಮಿಸ್ಟ್ರಿ
5. ಕೆಮಿಕಲ್ ಎಂಜಿನಿಯರಿಂಗ್ ,6. ಕ್ಲಸ್ಟರ್ ಕೆಮಿಸ್ಟ್ರಿ
7. ಫುಡ್ ಕೆಮಿಸ್ಟ್ರಿ,8. ಎನ್ವಿರಾನ್‌ಮೆಂಟರ್ ಕೆಮಿಸ್ಟ್ರಿ
9. ಮೆಡಿಸಿನಲ್ ಕೆಮಿಸ್ಟ್ರಿ,10. ನ್ಯೂಕ್ಲಿಯರ್ ಕೆಮಿಸ್ಟ್ರಿ
ಇನ್ನೂ ಅನೇಕ.
ಎಂ.ಎಸ್ಸಿ., ಎಂ. ಫಿಲ್, ಪಿ.ಎಚ್‌ಡಿ. ಪ್ರೋಗ್ರಾಮ್‌ಗಳ ಕೋರ್ಸ್‌ಗಳು ಇವೆ.ಉದ್ಯೋಗಾವಕಾಶಕ್ಕೆ ಕೊರತೆ ಇಲ್ಲ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಇಸ್ರೋ, ಡಿಆರ್‌ಡಿಓ, ಬಾಬಾ ಆಟೊಮಿಕ್ ರಿಸರ್ಚ್ ಸೆಂಟರ್, ಕ್ಯಾನ್ಸರ್ ರಿಸರ್ಚ್ ಸೆಂಟರ್‌ಗಳಲ್ಲಿ, ಫಾರ್ಮಾ ಇಂಡಸ್ಟ್ರಿಗಳಲ್ಲಿ, ಫುಡ್ ಇಂಡಸ್ಟ್ರಿಗಳಲ್ಲಿ, ಪೆಟ್ರೋಲಿಯಂ ಇಂಡಸ್ಟ್ರಿಯಲ್ಲಿ, ಟೀಚಿಂಗ್ ಕ್ಷೇತ್ರದಲ್ಲಿ – ಇನ್ನೂ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.