ಬೆಂಗಳೂರು:ಬಳ್ಳಾರಿ ನಗರದಲ್ಲಿ ಕೆಂದ್ರ ಕಚೇರಿಯನ್ನು ಹೊಂದಿರುವ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ 29ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಹುದ್ದೆಗಳ ವಿವರ
ಸಾರ್ವಜನಿಕ ಸಂಪರ್ಕ ಅಧಿಕಾರಿ, ಡೇರಿ ಮೇಲ್ವಿಚಾರಕ, ಆಡಳಿತ ಸಹಾಯಕ, ಲೆಕ್ಕ ಸಹಾಯಕ, ಕಿರಿಯ ತಾಂತ್ರಿಕ, ಕೆಮಿಸ್ಟ್ ಅಧಿಕಾರಿ ಹಾಗೂ ಮಾರುಕಟ್ಟೆ ಸಹಾಯಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು.
ವಿದ್ಯಾರ್ಹತೆ ಹಾಗೂ ವೇತನ: ಸಂಬಂಧಿತ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿಗಾಗಿ ಅಧಿಸೂಚನೆಯನ್ನು ನೋಡಿ ತಿಳಿಯಬಹುದು.
ವಯಸ್ಸು
ಸಾಮಾನ್ಯ ಅಭ್ಯರ್ಥಿಗಳು: ಕನಿಷ್ಠ 18, ಗರಿಷ್ಠ 35
ಒಬಿಸಿ ಅಭ್ಯರ್ಥಿಗಳು: ಕನಿಷ್ಠ 18, ಗರಿಷ್ಠ 38
ಪ.ಜಾತಿ/ಪ.ಪಂಗಡಅಭ್ಯರ್ಥಿಗಳು: ಕನಿಷ್ಠ 18, ಗರಿಷ್ಠ 40
ಅರ್ಜಿ ಶುಲ್ಕ: ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳು ₹800,ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳು ₹400 ಅರ್ಜಿ ಶುಲ್ಕವನ್ನು ಪಾವತಿಸಬೇಕು. ಇದರಲ್ಲಿ ಬ್ಯಾಂಕ್ ವೆಚ್ಚ ಪ್ರತ್ಯೇಕವಾಗಿರುತ್ತದೆ.
ನೇಮಕಾತಿ ವಿಧಾನ
200 ಅಂಕಗಳಿಗೆ ನಡೆಸುವ ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಕನ್ನಡ ಭಾಷೆ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಸಹಕಾರ, ಸಹಕಾರಿ ಕಾನೂನು, ಭಾರತೀಯ ಸಂವಿಧಾನ, ಕಂಪ್ಯೂಟರ್, ಹಾಲು ಒಕ್ಕೂಟಕೆ ಸಂಬಂಧಿಸಿದ ವಿಷಯಗಳ ಮೇಲಿನ ಪ್ರಶ್ನೆಪತ್ರಿಕೆಯನ್ನು ನೀಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು, ಒಕ್ಕೂಟದ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿಯನ್ನು ಭರ್ತಿ ಮಾಡಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡುವಾಗ ತಾಂತ್ರಿಕ ಸಮಸ್ಯೆ ಎದುರಾದರೆ ಸಹಯವಾಣಿ ಸಂಖ್ಯೆ 9538161839ಕ್ಕೆ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಕೆ ಕಡೆ ದಿನಾಂಕ: 08–11–2019 ( ಸಂಜೆ 6 ಗಂಟೆ)
ಅಧಿಸೂಚನೆಯ ಲಿಂಕ್:https://bit.ly/2JvPTRi
ಒಕ್ಕೂಟದ ಅಧಿಕೃತ ವೆಬ್ ಸೈಟ್:http://recruitapp.in/rbkmul2019/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.