ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್‌ಆರ್‌ಬಿ)ಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಐಬಿಪಿಎಸ್ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಎರಡು ಸಂಚಿಕೆಗಳಲ್ಲಿ ವಿವರವಾದ ಮಾಹಿತಿ ಪ್ರಕಟಿಸಲಾಗಿತ್ತು.
ಈ ಸ್ಪರ್ಧಾತ್ಮಕ ಪರೀಕ್ಷೆಗೆ ಇಪ್ಪತ್ತಕ್ಕೂ ಹೆಚ್ಚು ವಿಷಯಗಳನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಯ ವಿಷಯಗಳಿಗೆ ಸಂಬಂಧಿಸಿದಂತೆ ಕಳೆದ ಸಂಚಿಕೆಯಲ್ಲಿ ಒಂದಷ್ಟು ವಿಷಯಗಳಿಗೆ ಪೂರಕವಾದ ಮಾದರಿ ಪ್ರಶ್ನೋತ್ತರಗಳನ್ನು ಪ್ರಕಟಿಸಲಾಗಿತ್ತು. ಈ ಸಂಚಿಕೆಯಲ್ಲಿ ಇನ್ನಷ್ಟು ವಿಷಯಗಳಿಗೆ ಸಂಬಂಧಿಸಿದ ಒಂದೊಂದು ಮಾದರಿ ಪ್ರಶ್ನೋತ್ತರವನ್ನು ನೀಡಲಾಗಿದೆ.
* ಕೋಡಿಂಗ್ ಡಿಕೋಡಿಂಗ್(Coding Decoding)
1) ಇಂಗ್ಲಿಷ್‌ನಲ್ಲಿರುವ NOIDA ಪದವನ್ನು OPJEB ಎಂದು ಕೋಡ್ ಮಾಡಿದರೆ, ಅದೇ ಭಾಷೆಯಲ್ಲಿ DELHI ಯನ್ನು ಹೇಗೆ ಕೋಡ್ ಮಾಡಲಾಗುತ್ತದೆ?
ಎ) CDKGH
ಬಿ) EFMIJ
ಸಿ) FGNJK
ಡಿ) IHLED
ಉತ್ತರ: ಬಿ
ವಿವರಣೆ: NOIDA ಪದವನ್ನು OPJEB ಎಂಬ ಕೋಡ್ ಆಗಿ ರೂಪಿಸಲು, ಮೂಲ ಪದದ ಪ್ರತಿ ಒಂದು ವರ್ಣ ಮಾಲೆಯ ಮುಂದಿನ ಅಕ್ಷರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಂದರೆ N ನಂತರ O, O ನಂತರ P ಅಕ್ಷರ, ಅದೇ ರೀತಿ I ನಂತರ J, ಮತ್ತೆ D ನಂತರ E ಹಾಗೂ ಕೊನೆಯ ಅಕ್ಷರ A, ಅದರ ಮುಂದಿನ ಅಕ್ಷರ B. ಹೀಗೆ,DELHI ಪದಲ್ಲಿ, D ನಂತರ E, Eಗೆ ಬದಲಾಗಿ F, L ನಂತರವಿರುವ M, H ಮುಂದಿನ ಅಕ್ಷರ I, I ನಂತರದ ಅಕ್ಷರ J – ಎಂದು ಹೀಗೆ ಕೋಡ್ ಮಾಡಿದಾಗ EFMIJ ಪದ ಸಿಗುತ್ತದೆ. ಆದ್ದರಿಂದ ಮೇಲಿನ ಆಯ್ಕೆಗಳಲ್ಲಿ ಸರಿಯಾದ ಉತ್ತರ B.
* ಸಮರ್ಥನೆ ಮತ್ತು ಕಾರಣ(Assertion and Reason)
ಸಮರ್ಥನೆ (A): ಜೇಮ್ಸ್ ವ್ಯಾಟ್ ಸ್ಟೀಮ್ ಎಂಜಿನ್ ಕಂಡುಹಿಡಿದರು.
ಕಾರಣ (R): ಪ್ರವಾಹಕ್ಕೆ ಒಳಗಾದ ಗಣಿಗಳಿಂದ ನೀರನ್ನು ಪಂಪ್ ಮಾಡಲು ಇದನ್ನು ಕಂಡುಹಿಡಿಯಲಾಯಿತು.
ಎ) A ಮತ್ತು R ಎರಡೂ ನಿಜ ಮತ್ತು R ಎಂಬುದು A ಯ ಸರಿಯಾದ ವಿವರಣೆಯಾಗಿದೆ.
ಬಿ) A ಮತ್ತು R ಎರಡೂ ನಿಜ, ಆದರೆ A ಗೆ ಸರಿಯಾದ ವಿವರಣೆ R ಅಲ್ಲ.
ಸಿ) A ನಿಜ, ಆದರೆ R ಸುಳ್ಳು.
ಡಿ) A ಸುಳ್ಳು, ಆದರೆ R ನಿಜ.
ಇ) A ಮತ್ತು R ಎರಡೂ ಸುಳ್ಳು.
ಉತ್ತರ: ಎ
ವಿವರಣೆ: ಮುಖ್ಯವಾಗಿ ಸಮರ್ಥನೆಗೆ ಇರುವ ಕಾರಣ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಬೇಕು. ಪ್ರವಾಹಕ್ಕೆ ಒಳಗಾದ ಗಣಿಗಳಿಂದ ನೀರನ್ನು ಪಂಪ್ ಮಾಡಲು ಸ್ವಯಂ-ಕೆಲಸ ಮಾಡುವ ಎಂಜಿನ್ ಅಗತ್ಯವನ್ನು ಮನಗಂಡ ಜೇಮ್ಸ್ ವ್ಯಾಟ್ ಅವರಿಗೆ ಉಗಿ ಯಂತ್ರವನ್ನು ಆವಿಷ್ಕರಿಸಲು ಕಾರಣವಾಯಿತು.
* ಅಗತ್ಯ ಭಾಗ (Essential Part)
ಉದಾಹರಣಗೆಗೆ: ಪುಸ್ತಕ
ಎ) ಶಿಕ್ಷಣ
ಬಿ) ಚಿತ್ರಗಳು
ಸಿ) ಪುಟಗಳು
ಡಿ) ಜ್ಞಾನ
ಉತ್ತರ: ಸಿ
ವಿವರಣೆ: ಪುಸ್ತಕದೊಳಗೆ ಚಿತ್ರಗಳಿರುತ್ತವೆ, ನಿಜ. ಹಾಗೆಯೇ, ಪುಸ್ತಕ ಓದುವುದರಿಂದ ಶಿಕ್ಷಣ, ಜ್ಞಾನವೂ ಸಿಗುತ್ತದೆ. ಆದರೆ ಪುಟಗಳಿಲ್ಲದಿದ್ದರೆ ಪುಸ್ತಕ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಆದ್ದರಿಂದ ಆಯ್ಕೆ ಉತ್ತರ : C
* ತಾರ್ಕಿಕ ಸಮಸ್ಯೆಗಳು (Logical Problems)
I. ಪೂಜಾ(ಪಿ) ಮುಕೇಶ್(ಎಂ)ಗಿಂತ ಹಿರಿಯಳು.
II. ಸುರೇಶ್ (ಎಸ್) ಅವರು ಪೂಜಾ(ಪಿ) ಅವರಿಗಿಂತ ಹಿರಿಯರು.
III. ಮುಕೇಶ್ ಸುರೇಶ್ ಗಿಂತ ಹಿರಿಯರು.
ಮೊದಲ ಎರಡು ಹೇಳಿಕೆಗಳು ನಿಜವಾಗಿದ್ದರೆ, ಮೂರನೇ ಹೇಳಿಕೆ ಏನು?
ಎ) ಸುಳ್ಳು
ಬಿ) ನಿಜ
ಸಿ) ಅನಿಶ್ಚಿತ
ಉತ್ತರ: ಎ
ವಿವರಣೆ: ಹೇಳಿಕೆ l) P>M, ಹೇಳಿಕೆ ll) S>P, ಹೇಳಿಕೆ III) S>P>M ಹೇಳಿಕೆ IV) lll ರ ಪ್ರಕಾರ M>S
ಮೊದಲೆರಡು ಹೇಳಿಕೆಗಳಿಂದ ಮುಕೇಶ್ ಮೂವರಲ್ಲಿ ಕಿರಿಯ ವ್ಯಕ್ತಿ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಮೂರನೇ ಹೇಳಿಕೆ ಸುಳ್ಳು.
* ಕ್ರಿಯೆಯ ಕೋರ್ಸ್ (Course of Action)
1) ಹೇಳಿಕೆ: ದೇಶದ ಹಲವು ರಾಜ್ಯಗಳಲ್ಲಿ ಭೀಕರ ಬರಗಾಲ ಎಂದು ವರದಿಯಾಗಿದೆ.
ಕ್ರಿಯೆಯ ಕೋರ್ಸ್‌ಗಳು;
I. ಸಂತ್ರಸ್ತ ರಾಜ್ಯಗಳ ಜನರಿಗೆ ಸರ್ಕಾರ ಕೂಡಲೇ ಆರ್ಥಿಕ ನೆರವು ನೀಡಬೇಕು.
II. ಜನ ಮತ್ತು ಜಾನುವಾರುಗಳನ್ನು ಉಳಿಸಲು ಸರ್ಕಾರವು ಬರ ಪೀಡಿತ ರಾಜ್ಯಗಳಿಗೆ ಆಹಾರ, ನೀರು ಮತ್ತು ಮೇವನ್ನು ತಕ್ಷಣ ಕಳುಹಿಸಬೇಕು.
ಎ) ಕೇವಲ I ನೇ ಹೇಳಿಕೆ ಅನುಸರಿಸುತ್ತದೆ.
ಬಿ) ಕೇವಲ II ನೇ ಹೇಳಿಕೆ ಅನುಸರಿಸುತ್ತದೆ
ಸಿ) I ಅಥವಾ II ಹೇಳಿಕೆಯನ್ನು ಅನುಸರಿಸುತ್ತದೆ
ಡಿ) I ಅಥವಾ II ಹೇಳಿಕೆಯನ್ನು ಅನುಸರಿಸುವುದಿಲ್ಲ
ಇ) I ಮತ್ತು II, ಎರಡೂ ಹೇಳಿಕೆಗಳನ್ನು ಅನುಸರಿತ್ತದೆ.
ಉತ್ತರ: ಬಿ
ವಿವರಣೆ: ಇಂತಹ ಸಂದರ್ಭದಲ್ಲಿ ಆಹಾರ, ನೀರು ಮತ್ತಿತರ ಮೂಲ ಸೌಕರ್ಯಗಳನ್ನು ಕಲ್ಪಿಸಿ ಜನ-ಜಾನುವಾರುಗಳ ಜೀವ ಉಳಿಸುವ ನಿಟ್ಟಿನಲ್ಲಿಸರ್ಕಾರ ಚಿಂತನೆ ನಡೆಸಬೇಕು. ಹಣಕಾಸಿನ ನೆರವು ನೀಡುವು ದರಿಂದ ತಕ್ಷಣದ ಪರಿಹಾರ ದೊರೆಯುವುದಿಲ್ಲ ಮತ್ತು ನಿಧಿಯ ಮೇಲೆ ಹೆಚ್ಚುವರಿ ಹೊರೆ ಬೀಳುತ್ತದೆ.
* ಹೊಂದಾಣಿಕೆಯ ವ್ಯಾಖ್ಯಾನಗಳು(Matching Definitions)
1) ನೀವು ಯಾರಿಗಾದರೂ ಅವನ ಅಥವಾ ಅವಳ ಆಸ್ತಿಯನ್ನು ಭಾಗಶಃ ಹಾನಿಗೊಳಿಸಿದಾಗ ಮತ್ತೆ ನಷ್ಟ ತುಂಬಿ ಕೊಡುವದನ್ನು ಮರುಪಾವತಿ ಎಂದು ಕರೆಯಲಾಗುತ್ತದೆ. ಈ ಕೆಳಗಿನ ಯಾವ ಸನ್ನಿವೇಶವು ಮರುಸ್ಥಾಪನೆಯ (Restitution) ಅತ್ಯುತ್ತಮ ಉದಾಹರಣೆಯಾಗಿದೆ?
ಎ) ಬಾಲು ತನ್ನ ಸ್ನೇಹಿತನ ಕಾರನ್ನು ಎರವಲು ಪಡೆದು ಪೆಟ್ರೋಲ್ ಪೂರ್ಣ ಉಪಯೋಗಿಸಿ ಖಾಲಿ ಟ್ಯಾಂಕ್‌ನೊಂದಿಗೆ ಕಾರನ್ನು ಹಿಂತಿರುಗಿಸುತ್ತಾನೆ. ಅವನು ಕ್ಷಮೆಯಾಚಿಸಿ ನಾಳೆ ಟ್ಯಾಂಕ್ ತುಂಬಿಸುತ್ತೇನೆ ಎಂದು ತನ್ನ ಸ್ನೇಹಿತನಿಗೆ ಹೇಳುತ್ತಾನೆ.
ಬಿ) ಬಾಲು ತನ್ನ ಸ್ನೇಹಿತನ ಕ್ಯಾಮೆರಾವನ್ನು ಎರವಲು ಪಡೆಯುತ್ತಾನೆ. ಬಾಲು ಕವರ್‌ನಿಂದ ಕ್ಯಾಮೆರಾ ತೆಗೆಯಲು ವೇಳೆ ಕೈತಪ್ಪಿ ಕ್ಯಾಮೆರಾ ನೆಲದ ಮೇಲೆ ಬೀಳುತ್ತದೆ. ಲೆನ್ಸ್ ಒಡೆದುಹೋಗುತ್ತದೆ. ಬಾಲು ಕ್ಯಾಮೆರಾ ಹಿಂತಿರುಗಿಸುವಾಗ, ಕ್ಯಾಮೆರಾಗಾದ ಹಾನಿಯ ಹಣವನ್ನು ಪಾವತಿಸುವುದಾಗಿ ಅವನು ತನ್ನ ಸ್ನೇಹಿತನಿಗೆ ಹೇಳುತ್ತಾನೆ.
ಸಿ) ಬಾಲು, ಗಣೇಶ ಪಟ್ಟಣದಿಂದ ಹೊರ ಹೋಗುವಾಗ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಉಳಿಯಲು ಹೇಳುತ್ತಾನೆ. ಒಂದು ದಿನ ಬಾಲು ಉಳಿಯಲು ಆಗಮಿಸುತ್ತಾನೆ. ಈ ವೇಳೆ ಪೈಪ್ ಒಡೆದು ಅಪಾರ್ಟ್‌ಮೆಂಟ್ ನೀರಿನಿಂದ ತುಂಬಿರುವುದನ್ನು ನೋಡಿ ಪೈಪ್ ರಿಪೇರಿ ಮಾಡಲು ಪ್ಲಂಬರ್‌ಗೆ ಕರೆ ಮಾಡಿ ರಿಪೇರಿಗೆ ಹಣ ಕೊಡುತ್ತಾನೆ.
ಡಿ) ಬಾಲು ಕಂಪನಿಯ ಪಾರ್ಕಿಂಗ್‌ನಲ್ಲಿರುವ ಗುಂಡಿಯ ಕಾರಣದಿಂದಾಗಿ ಅವನ ಟೈರ್ ಫ್ಲಾಟ್ ಆಗಲು ಕಾರಣವಾಯಿತು. ಹೀಗಾಗಿ ಅವನು ತನ್ನ ಬಾಸ್‌ಗೆ ತಿಳಿಸುತ್ತಾನೆ ಮತ್ತು ಕಂಪನಿಯು ತನ್ನ ಟೈರ್ ದುರಸ್ತಿಗಾಗಿ ಹಣ ಪಾವತಿಸಬೇಕೆಂದು ನಿರೀಕ್ಷಿಸುತ್ತಾನೆ.
ಉತ್ತರ: ಬಿ
ವಿವರಣೆ: ಬಾಲು ತನ್ನ ಸ್ನೇಹಿತನಿಂದ ಪಡೆದುಕೋಂಡಿದ್ದ ಕ್ಯಾಮರಾವನ್ನು ಹಾನಿಗೊಳಿಸಿರುತ್ತಾನೆ ಮತ್ತು ಅದರ ದುರಸ್ತಿಗೆ ತಗಲುವ ವೆಚ್ಚವನ್ನು ಪಾವತಿಸಲು ಒಪ್ಪಿಕೊಳ್ಳುತ್ತಾನೆ. ಹಾಗಾಗಿ, ಹೊಂದಾಣಿಕೆಯ ವ್ಯಾಖ್ಯಾನಕ್ಕೆ ಬಿ ಉತ್ತರ ಸೂಕ್ತವಾಗುತ್ತದೆ.
* ಹೇಳಿಕೆ ಮತ್ತು ಊಹೆಗಳು(Statement and Assumptions)
1) ಹೇಳಿಕೆ: ‘ನೀವು ಆರು ತಿಂಗಳ ಪರೀಕ್ಷಾ ಅವಧಿಯೊಂದಿಗೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ನೇಮಕಗೊಂಡಿದ್ದೀರಿ. ದೃಢೀಕರಣಕ್ಕಾಗಿ ನಿಮ್ಮ ಕೌಶಲ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಾ ಅವಧಿಯ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ‘ – ನೇಮಕಾತಿ ಪತ್ರದಲ್ಲಿ ಬರೆದ ಸಾಲುಗಳು ಇವು.
ಊಹೆಗಳು:
I. ನೇಮಕಾತಿ ಸಮಯದಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆ ತಿಳಿದಿಲ್ಲ.
II. ಪರೀಕ್ಷೆಯ ಅವಧಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಮೌಲ್ಯವನ್ನು ಸಾಬೀತುಪಡಿಸುವ ಸಾಧ್ಯತೆಯಿದೆ.
ಎ) ಕೆವಲ I ಮಾತ್ರ ಸೂಚ್ಯವಾಗಿದೆ
ಬಿ) ಕೇವಲ II ಸೂಚ್ಯವಾಗಿದೆ
ಸಿ) I ಅಥವಾ II ಸೂಚ್ಯವಾಗಿದೆ
ಡಿ) I ಅಥವಾ II ಸೂಚ್ಯವಾಗಿಲ್ಲ
ಇ) I ಮತ್ತು II ಎರಡೂ ಸೂಚ್ಯವಾಗಿವೆ
ಉತ್ತರ: ಇ
ವಿವರಣೆ: ಹೊಸ ಉದ್ಯೋಗಿಯ ಕಾರ್ಯಕ್ಷಮತೆಯನ್ನು ಸಾಮಾನ್ಯವಾಗಿ ಕೆಲಸದ ಅವಧಿಯಲ್ಲಿ ಪರೀಕ್ಷಿಸಲಾ ಗುತ್ತದೆ. ಹಾಗಾಗಿ, ಹೇಳಿಕೆ l ಸೂಚ್ಯವಾಗಿದೆ. ದೃಢೀಕರಣದ ಮೊದಲು ಪರೀಕ್ಷಾ ಅವಧಿಯಲ್ಲಿ ವ್ಯಕ್ತಿಯ ಮೌಲ್ಯವನ್ನು ಪರಿಶೀಲಿಸಲಾಗುವುದು ಎಂದು ಎರಡನೇಯ ಹೇಳಿಕೆಯು ತಿಳಿಸುತ್ತಿದೆ. ಆದ್ದರಿಂದ II ಸಹ ಸೂಚ್ಯವಾಗಿದೆ.
*******
ಆರ್‌ಆರ್‌ಬಿ ನೇಮಕಾತಿ ಪರೀಕ್ಷೆಗೆ ನಿಗದಿಪಡಿಸಿರುವ ವಿಷಯಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಆರ್. ಕೆ. ಬಾಲಚಂದ್ರ – 9449148705 ಸಂಪರ್ಕಿಸಬಹುದು.
(ಮುಗಿಯಿತು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.