ADVERTISEMENT

ಗ್ರಾಮೀಣ ಬ್ಯಾಂಕ್‌ ಕೆಲಸ ಖಾಲಿ ಇದೆ; ಪರೀಕ್ಷೆಗೆ ಈಗಲೇ ಸಿದ್ಧರಾಗಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 0:53 IST
Last Updated 9 ಜೂನ್ 2022, 0:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೇಶದಾದ್ಯಂತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಗಳಲ್ಲಿ ಖಾಲಿಯಿರುವ 8106 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ, ಪರೀಕ್ಷಾ ಸಿದ್ಧತೆಯ ಪ್ರಾಥಮಿಕ ಮಾಹಿತಿ ಇಲ್ಲಿದೆ.

ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಸೇರಿದಂತೆ ದೇಶದಾದ್ಯಂತವಿರುವ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 8106 ವಿವಿಧ ಹುದ್ದೆಗಳ ಭರ್ತಿಗಾಗಿಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಅರ್ಜಿ ಆಹ್ವಾನಿಸಿದೆ.

ಕರ್ನಾಟಕದ ಎರಡು ಗ್ರಾಮೀಣ ಬ್ಯಾಂಕ್‌ಗಳಾದ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಮತ್ತು ‘ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್’ಗಳಲ್ಲಿ 832 ವಿವಿಧ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತಿದೆ.

ADVERTISEMENT

ಒಟ್ಟು ಹುದ್ದೆಗಳಲ್ಲಿ ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್‌( ವಿವಿಧೋದ್ದೇಶ)) (ಗ್ರೂಪ್ ಬಿ) 173,ಆಫೀಸರ್ ಸ್ಕೇಲ್-1 (ಅಸಿಸ್ಟೆಂಟ್ ಮ್ಯಾನೇಜರ್) (ಗ್ರೂಪ್ ‘ಎ’) 429 ಹಾಗೂ ಜನರಲ್ ಬ್ಯಾಂಕಿಂಗ್ ಅಧಿಕಾರಿ (ಮ್ಯಾನೇಜರ್ ಕೇಡರ್–ಗ್ರೂಪ್ ಎ–ಸ್ಕೇಲ್ II) 230 ಹುದ್ದೆಗಳಿವೆ.

ವಿದ್ಯಾರ್ಹತೆ, ವಯಸ್ಸು: ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜೂನ್‌ 27, 2022 ಅರ್ಜಿ ಸಲ್ಲಿಕೆಗೆ ಕೊನೆ ದಿನ.

ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹850, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹175.

ಆಯ್ಕೆ ವಿಧಾನ:ಆನ್‌ಲೈನ್ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ಹುದ್ದೆಗಳಿ ಗಾಗಿ 80 ಅಂಕಗಳ ಪ್ರಿಲಿಮಿನರಿ ಪರೀಕ್ಷೆ ಆಗಸ್ಟ್ 2022ರಂದು ನಡೆಯಲಿದೆ. 200 ಅಂಕಗಳ ಮುಖ್ಯ ಪರೀಕ್ಷೆ ಸೆಪ್ಟೆಂಬರ್/ಅಕ್ಟೋಬರ್ 2022ರಲ್ಲಿ ನಡೆಯುವ ಸಾಧ್ಯತೆ ಇದೆ.

ಸಂದರ್ಶನ:ಈ ಆಯ್ಕೆ ಪ್ರಕ್ರಿಯೆ ಅಧಿಕಾರಿಗಳ ಹುದ್ದೆಗೆ ಮಾತ್ರ ಅನ್ವಯಿಸುತ್ತದೆ (ಸ್ಕೇಲ್ I, II ಮತ್ತು III) ಅಸಿಸ್ಟೆಂಟ್ ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ.

ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಸಂದರ್ಶನ /ಅಂತಿಮ ಮೆರಿಟ್ ಲಿಸ್ಟಿಂಗ್ ಗಾಗಿ ಶಾರ್ಟ್ ಲಿಸ್ಟ್ ಮಾಡಲು ಪರಿಗಣಿಸಲಾಗುತ್ತದೆ.

ಪರೀಕ್ಷೆಯ ಪಠ್ಯ ವಿಷಯಗಳು

ತಾರ್ಕಿಕತೆ ಸಾಮರ್ಥ್ಯ

ಆಂಗ್ಲ ಭಾಷೆ

ಸಾಂಖ್ಯಿಕ ಸಾಮರ್ಥ್ಯ

ಸಾಮಾನ್ಯ ಅರಿವು (ಬ್ಯಾಂಕಿಂಗ್ ಉದ್ಯಮದ ವಿಶೇಷ ಉಲ್ಲೇಖದೊಂದಿಗೆ)

ಕಂಪ್ಯೂಟರ್ ಜ್ಞಾನ

ಕನ್ನಡದಲ್ಲಿ ಬರೆಯಬಹುದು: ಕಚೇರಿ ಸಹಾಯ ಕರು (ವಿವಿಧೋದ್ದೇಶ) ಮತ್ತು ಆಫೀಸರ್ ಸ್ಕೇಲ್ I ಹುದ್ದೆಗಳಿಗಾಗಿ ಪರೀಕ್ಷೆ ಬರೆಯುವ ಕರ್ನಾಟಕದ ಅಭ್ಯರ್ಥಿಗಳಿಗೆ, ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಕೊಂಕಣಿ ಭಾಷೆ ಗಳಲ್ಲಿ ಪರೀಕ್ಷೆ ಬರೆಯುವ ಅವಕಾಶವಿದೆ.

ಪರೀಕ್ಷೆ ಸಿದ್ಧತೆಗೆ ಸಲಹೆಗಳು

ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಅಭ್ಯರ್ಥಿಗಳಿಗೆ ಸೂಕ್ತ ಉತ್ತರ ನಿರ್ಧರಿಸುವ ಕೌಶಲ ಹಾಗೂ ಚುರುಕುತನ ವಿರಬೇಕು. ಈ ಕೌಶಲ ಕಲಿಯಲು ಸತತ ಅಭ್ಯಾಸದಿಂದ ಮಾತ್ರ ಸಾಧ್ಯ. ಇದಕ್ಕಾಗಿ ಅಭ್ಯರ್ಥಿಗಳು ಸಾಧ್ಯವಾದಷ್ಟು ‘ಅಣಕು ಪರೀಕ್ಷೆ’ ಗಳನ್ನು ಎದುರಿಸಬೇಕು.

ಹಿಂದಿನ ವರ್ಷ ನಡೆದಿರುವ ವಿವಿಧ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದನ್ನು ಅಭ್ಯಾಸ ಮಾಡಬೇಕು.

ಮುಖ್ಯವಾಗಿ, ತಾರ್ಕಿಕ ಪ್ರತಿಪಾದನೆ (Logical Reasoning), ಇಂಗ್ಲಿಷ್ ಭಾಷೆ (ವ್ಯಾಕರಣ, ಶಬ್ದಭಂಡಾರ, ಗ್ರಹಣಶಕ್ತಿ ಮತ್ತಿತರ ವಿಷಯಗಳು), ದತ್ತಾಂಶಗಳು (Quantitative Analysis) ಹಾಗೂ ಅರ್ಥವಿವರಣೆ (Data Interpretation) ವಿಷಯಗಳಲ್ಲಿ ಬಹಳಷ್ಟು ಅಧ್ಯಯನ ಮಾಡಬೇಕು. ಇದರೊಟ್ಟಿಗೆ ಸಾಮಾನ್ಯ ಜ್ಞಾನ /ಬ್ಯಾಂಕಿಂಗ್ ವಿಷಯಗಳ ಬಗ್ಯೆ ಮಾಹಿತಿ ಸಂಗ್ರಹಿ, ಪರಾಮರ್ಶಿಸುತ್ತಿರಬೇಕು.

ಕಂಪ್ಯೂಟರ್ ಜ್ಞಾನದ ಪ್ರಾಥಮಿಕ ಜ್ಞಾನದ ಜೊತೆಗೆ, ಕಂಪ್ಯೂಟರ್ ತಂತ್ರಾಂಶಗಳಾದ DOS, ಮೈಕ್ರೊಸಾಫ್ಟ್ ವಿಂಡೋಸ್, ವಿಷುಯಲ್ ಬೇಸಿಕ್, ಎಂಎಸ್‌ ಆಫೀಸ್, ನೆಟ್ ವರ್ಕ್‌ ಜ್ಞಾನ ಹೊಂದಿದ್ದರೆ ಈ ವಿಷಯದಲ್ಲಿ ಹೆಚ್ಚುಅಂಕಗಳಿಸುವ
ಸಾಧ್ಯ.

ಹೆಚ್ಚಿನ ಮಾಹಿತಿಗೆ: https://www.ibps.in/crp-rrb-xi ಐಬಿಪಿಎಸ್‌ ಜಾಲತಾಣಕ್ಕೆ ಭೇಟಿ ನೀಡಿ.

(ಮಾಹಿತಿ: ಬ್ರೆಟ್‌ ಸಲ್ಯೂಷನ್ಸ್‌ (www.brets.in), ಸ್ಪರ್ಧಾತ್ಮಕ ತರಬೇತಿ ಕೇಂದ್ರ, ಬೆಂಗಳೂರು)

(ಮುಂದಿನ ವಾರ: ಬ್ಯಾಂಕಿಂಗ್ ಪರೀಕ್ಷೆಗೆ ಅಧ್ಯಯನ ಸಿದ್ಧತೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.