ADVERTISEMENT

ವಿದ್ಯಾರ್ಥಿ ವೇತನ: ಐಸಿಎಆರ್-ಐಎಆರ್‌ಐ ಸಿಎಸ್‌ಐಆರ್ ರಿಸರ್ಚ್ ಫೆಲೊಶಿಪ್ 2021

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 19:30 IST
Last Updated 5 ಡಿಸೆಂಬರ್ 2021, 19:30 IST
   

ಐಸಿಎಆರ್-ಐಎಆರ್‌ಐ ಸಿಎಸ್‌ಐಆರ್ ಜೂನಿಯರ್ / ಸೀನಿಯರ್ ರಿಸರ್ಚ್ ಫೆಲೊಶಿಪ್ 2021

ವಿವರ: ಐಸಿಎಆರ್-ಐಎಆರ್‌ಐ ಸಿಎಸ್‌ಐಆರ್ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಂದ ಜೂನಿಯರ್/ ಸೀನಿಯರ್ ರಿಸರ್ಚ್ ಫೆಲೊಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಯು ‘ಅಸೆಸ್‌ಮೆಂಟ್ ಆಫ್ ಓಲ್ಡ್ ಅಂಡ್ ನ್ಯೂ ವೀಟ್ ವೆರೈಟೀಸ್ ಫಾರ್ ಜನೆಟಿಕ್ ವೇರಿಯಬಿಲಿಟಿ ಇನ್ ಕ್ವಾಲಿಟಿ ಟ್ರೇಟ್ಸ್ ಅಂಡ್ ದೇರ್ ರಿಲೇಷನ್‌ಶಿಪ್ ವಿಥ್‌ ಪಿಜ್ಜಾ, ಎಕ್ಸ್‌‌‌ಟ್ರೂಡೆಡ್ ಅಂಡ್ ಬೇಕ್ಡ್ ಪ್ರಾಡಕ್ಟ್ ಮೇಕಿಂಗ್’ ಎನ್ನುವ ಶೀರ್ಷಿಕೆಯ ವಿಷಯದ ಮೇಲೆ ಕೆಲಸ ಮಾಡಬೇಕಾಗುತ್ತದೆ.

ಅರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಬಿಎಸ್‌–ಎಂಎಸ್‌, ಎಂಎಸ್‌ಸಿ, ಬಿಟೆಕ್‌ ಪದವಿಯನ್ನು ಶೇ 55 ಅಂಕಗಳೊಂದಿಗೆ ಮುಗಿಸಿರಬೇಕು. ನೆಟ್‌ ಅಥವಾ ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಅಭ್ಯರ್ಥಿಗಳನ್ನು ಜೆಆರ್‌ಎಫ್‌ಗೆ ಪರಿಗಣಿಸಲಾಗುತ್ತದೆ.

ADVERTISEMENT

ಆರ್ಥಿಕ ನೆರವು: ತಿಂಗಳಿಗೆ ₹ 35,000ದ ಜೊತೆಗೆ ಶೇ 24 ಮನೆ ಬಾಡಿಗೆ ಭತ್ಯೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 15, 2021

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/JSR4

ಕೃಪೆ: buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.