ADVERTISEMENT

ಎಸ್‌ಡಿಎ ಸಾಮಾನ್ಯ ಪರೀಕ್ಷೆಯಲ್ಲಿ ಮೆಂಟಲ್‌ ಎಬಿಲಿಟಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 2:02 IST
Last Updated 9 ಸೆಪ್ಟೆಂಬರ್ 2021, 2:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಎಸ್‌ಡಿಎಸಾಮಾನ್ಯಪರೀಕ್ಷೆಯಲ್ಲಿ
ಮೆಂಟಲ್‌ಎಬಿಲಿಟಿ

ಭಾಗ–2

ಕರ್ನಾಟಕ ಲೋಕ ಸೇವಾ ಆಯೋಗವು ದ್ವಿತೀಯ ದರ್ಜೆ ಸಹಾಯಕರ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಇದೇ ಸೆ. 18ರಂದು ನಡೆಸಲಿದೆ.ಎಸ್‌ಡಿಎಪರೀಕ್ಷೆಯಲ್ಲಿಸಾಮಾನ್ಯಕನ್ನಡ ಪತ್ರಿಕೆಯ ಸಿದ್ಧತೆಗೆ ಕೆಲವು ಮಾದರಿ ಪ್ರಶ್ನೆಗಳನ್ನು ನೀಡಲಾಗಿದೆ.

ಕೆಳಗೆ ಕೊಡಲಾಗಿರುವ ಶಬ್ದಗಳನ್ನು ಓದಿ ಸರಿಯಾದ ಅರ್ಥಗ್ರಹಿಸಿ, ಸೂಕ್ತ ಉತ್ತರವನ್ನು ಗುರುತಿಸಿ

ADVERTISEMENT

1) ಇಂಗಳಗಣ್ ಎಂದರೆ _____________

ಎ) ರಾತ್ರಿ ಮಾತ್ರ ಕಣ್ಣು ಕಾಣುವವ

ಬಿ) ಬೆಂಕಿಕಾರುವ ಕಣ್ಣಿನವ

ಸಿ) ವಿಷ್ಣುವಿನ ಕಣ್ಣು

ಡಿ) ಒಂದು ಬಗೆಯ ಮುಳ್ಳುಗಿಡ

2) ಸ್ಥಾನಪಲ್ಲಟ ಎಂದರೆ _____________

ಎ) ಜಯಿಸುಬಿ) ಸ್ಥಳಾಂತರ ಮಾಡು

ಸಿ) ವರ್ಗ ಮಾಡುಡಿ) ಅಗೌರವಿಸು

3) ಒಡ್ಡಂತಿ ಎಂದರೆ _____________

ಎ) ಹುಟ್ಟಿದ ದಿನಬಿ) ವಿನ್ಯಾಸ

ಸಿ) ವಜ್ರಸಿ) ಹೆಣ್ಣು

4) ಕೆಯ್ಮಸಕ ಎಂದರೆ _____________

ಎ) ಕೈಯಿಂದ ಉಜ್ಜುಬಿ) ಕೈ ತಾಗು

ಸಿ) ನೋಡುಡಿ) ಕಪಟ

5) ಗುಂದ ಎಂದರೆ _____________

ಎ) ಬೆಟ್ಟಬಿ) ಮರದ ದಿಣ್ಣೆ

ಸಿ) ಚಾಮರಡಿ) ಕುಂದ

6) ಗುಟಿಕೆ ಎಂದರೆ _____________

ಎ) ಗುಟುಕುಬಿ) ಗುಮ್ಮ

ಸಿ) ಗುಳಿಗೆಡಿ) ಸಿಹಿ ಪದಾರ್ಥ

7) ಘೋಣಿ ಎಂದರೆ_____________

ಎ) ಚೀಲಬಿ) ಚಾಮರ

ಸಿ) ಹಂದಿಡಿ) ಕೆಮ್ಮರ

8) ದ್ವೀಪ ಎಂದರೆ _____________

ಎ) ಧರೆಬಿ) ಆನೆ

ಸಿ) ದೀಪಡಿ) ಯಾವುದೂ ಅಲ್ಲ

9) ಧಡಿಯ ಎಂದರೆ _____________

ಎ) ದಾಂಡಿಗಬಿ) ದಿವ್ಯ ಮರ

ಸಿ) ಧಮನಿಡಿ) ಜ್ಯೋತಿ ಹಚ್ಚುವವ

10) ಪ್ರಹರಿ ಎಂದರೆ _____________

ಎ) ಕಾವಲುಗಾರಬಿ) ಬೆಳ್ಳಿ ಹಬ್ಬ

ಸಿ) ಭೂಮಿಡಿ) ಯಾವುದೂ ಅಲ್ಲ

ಉತ್ತರ: 1) ಬಿ, 2) ಬಿ, 3) ಎ, 4) ಡಿ, 5 ) ಎ,
6 )ಸಿ, 7) ಸಿ, 8) ಬಿ, 9) ಎ, 10) ಎ.

ಪ್ಯಾರಾ ಓದಿ, ಅರ್ಥಗ್ರಹಿಸಿ
ಪ್ರಶ್ನೆಗಳಿಗೆ ಉತ್ತರಿಸಿ

ಯಾವ ಪ್ರಾಣಿಗಳು ನೀರು ಮತ್ತು ಭೂಮಿ ಎರಡರಲ್ಲೂ ವಾಸಿಸಬಲ್ಲವೋ ಅಂಥವುಗಳನ್ನು ಉಭಯವಾಸಿಗಳೆನ್ನುವರು. ಉಭಯವಾಸಿಗಳಲ್ಲಿ ಜೀರ್ಣಾಂಗವ್ಯೂಹವು ಚೆನ್ನಾಗಿ ಅಭಿವೃದ್ಧಿ ಹೊಂದಿದ್ದು ಜೀರ್ಣನಾಳಗಳನ್ನು ಪಡೆದಿರುತ್ತವೆ. ಅಂದರೆ ಜಠರ, ಪಿತ್ತಕೋಶ, ಕರುಳು ಮೇದೋಜೀರಕಾಂಗ, ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

ಉಸಿರಾಟವು ಕಿವಿಗಳು, ಶ್ವಾಸಕೋಶಗಳು, ಚರ್ಮ ಮತ್ತು ಬಾಯಿಯ ಅಂಗಗಳ ಮೂಲಕ ನಡೆಯುತ್ತದೆ. ರಕ್ತ ಪರಿಚಲನಾಮಂಡಲದಲ್ಲಿ ಮೂರು ಕೋಣೆಗಳ ಹೃದಯವು ಕಂಡುಬರುತ್ತದೆ. ಸಾಮಾನ್ಯವಾಗಿ ಉಭಯವಾಸಿ ಪ್ರಾಣಿಗಳು ಶೀತರಕ್ತದ ಪ್ರಾಣಿಗಳಾಗಿವೆ. ನರಮಂಡಲವು ಉತ್ತಮವಾಗಿ ರೂಪಗೊಂಡು ಮೆದುಳು, ಸ್ಪೈನಲ್ ನರಹುರಿ ಮತ್ತು ಹತ್ತು ಜೊತೆ ಮೆದುಳಿನ ನರಗಳು, ಸ್ವಯಂ ನಿಯಂತ್ರಿತ ನರಮಂಡಲ ಇವುಗಳನ್ನು ಉಭಯವಾಸಿಗಳು ಹೊಂದಿರುತ್ತವೆ.

ಉಭಯವಾಸಿಗಳು ಏಕ ಲಿಂಗಿಗಳಾಗಿದ್ದು, ಲೈಂಗಿಕ ರೀತಿಯಲ್ಲಿ ಸಂತಾನೋತ್ಪತ್ತಿಯನ್ನು ನಡೆಸುತ್ತವೆ. ಇವುಗಳಲ್ಲಿ ಬಾಹ್ಯಗರ್ಭಧಾರಣೆ ಇದ್ದು, ನಿಂತ ನೀರಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಇವುಗಳ ಜೀವನಚರಿತ್ರೆಯಲ್ಲಿ ಸಾಮಾನ್ಯವಾಗಿ ರೂಪ ಪರಿವರ್ತನೆ ಕಂಡುಬರುತ್ತದೆ.

ಉಭಯವಾಸಿಗಳಲ್ಲಿ ಲಾರ್ವ ಅವಸ್ಥೆಯಿಂದ ಪ್ರಾರಂಭವಾಗಿ ಪ್ರೌಢಾವಸ್ಥೆಗೆ ತಲುಪುವವರೆಗಿನ ಬದಲಾವಣೆಗಳಿಗೆ ಒಟ್ಟಾಗಿ ರೂಪಪರಿವರ್ತನೆ ಎಂದು ಹೆಸರು.

ಪ್ರಶ್ನೆಗಳು :

1) ಯಾವ ಪ್ರಾಣಿಗಳನ್ನು ಉಭಯವಾಸಿಗಳೆಂದು ಕರೆಯುವರು?

ಎ) ಭೂಮಿ ಮತ್ತು ಆಕಾಶ ಎರಡರಲ್ಲೂ ವಾಸಿಸುವ ಪ್ರಾಣಿಗಳನ್ನು ಕರೆಯುವರು

ಬಿ) ಆಕಾಶ ಮತ್ತು ಸಮುದ್ರ ಎರಡರಲ್ಲೂ ವಾಸಿಸುವ ಪ್ರಾಣಿಗಳು

ಸಿ) ಭೂಮಿ ಮತ್ತು ನೀರು ಇವೆರಡರಲ್ಲೂ ವಾಸಿಸುವ ಪ್ರಾಣಿಗಳನ್ನು ಕರೆಯುವರು

ಡಿ) ಯಾವುದೂ ಅಲ್ಲ

2) ಉಭಯವಾಸಿಗಳಲ್ಲಿ ಇರುವ ಹೃದಯಕ್ಕೆ ಎಷ್ಟು ಕೋಣೆಗಳಿರುತ್ತವೆ?

ಎ) ಎರಡುಬಿ) ಮೂರು

ಸಿ) ಐದುಡಿ) ನಾಲ್ಕು

3) ಸಾಮಾನ್ಯವಾಗಿ ಉಭಯವಾಸಿ ಪ್ರಾಣಿಗಳು ಶೀತ ರಕ್ತದ ಪ್ರಾಣಿಗಳಾಗಿರುತ್ತವೆ. ಈ ಹೇಳಿಕೆ....

ಎ) ಸರಿಯಾಗಿದೆಬಿ) ತಪ್ಪಾಗಿದೆ

ಸಿ) ಯಾವುದೆಂದು ನಿರ್ಧರಿಸಲಾಗದು

ಡಿ) ಮೇಲಿನ ಎಲ್ಲವೂ ಸತ್ಯಕ್ಕೆ ಹತ್ತಿರವಾಗಿದೆ

4) ಉಭಯವಾಸಿಗಳಲ್ಲಿ ಎಷ್ಟು ಜೊತೆ ಮೆದುಳಿನ ನರಗಳಿವೆ?

ಎ) ಹತ್ತುಬಿ) ಇಪ್ಪತ್ತು

ಸಿ) ಮೂವತ್ತುಡಿ) ಎರಡು

5) ಉಭಯವಾಸಿಗಳು …… ಲಿಂಗಿಗಳಾಗಿವೆ.

ಎ) ಏಕಬಿ) ದ್ವಿ

ಸಿ) ಚತುರಡಿ) ಯಾವುದೂ ಇಲ್ಲ

6) ಬಾಹ್ಯ ಗರ್ಭಧಾರಣೆಯನ್ನು ಎಲ್ಲಿ ಕಾಣುವಿರಿ?

ಎ) ಮಾನವರಲ್ಲಿಬಿ) ಸಸ್ಯಗಳಲ್ಲಿ

ಸಿ) ಉಭಯವಾಸಿಗಳಲ್ಲಿಡಿ) ಯಾವುದರಲ್ಲೂ ಇಲ್ಲ

7) ಉಭಯವಾಸಿಗಳಲ್ಲಿ ಲಾರ್ವ ಅವಸ್ಥೆಯಿಂದ ಪ್ರಾರಂಭವಾಗಿ ಪ್ರೌಢಾವಸ್ಥೆಗೆ ತಲುಪುವವರೆಗಿನ ಬದಲಾವಣೆಗಳಿಗೆ ಏನೆಂದು ಹೆಸರು?

ಎ) ಗುಣ ಪರಿವರ್ತನೆ ಬಿ) ರೂಪ ಪರಿವರ್ತನೆ

ಸಿ) ಬಾಹ್ಯ ಪರಿವರ್ತನೆ ಡಿ) ಆಂತರಿಕ ಪರಿವರ್ತನೆ

ಉತ್ತರಗಳು: 1-ಸಿ, 2-ಬಿ, 3-ಎ, 4-ಎ,
5-ಎ, 6-ಸಿ, 7-ಬಿ

ಸಾಮಾನ್ಯವಾಗಿ ಮೇಲೆ ನೀಡಲಾದ ವರ್ಬಲ್ ರೀಸನಿಂಗ್ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಅಂದರೆ ಒಂದು ಸಣ್ಣ ಪ್ಯಾರಾ ನೀಡಿ ಅದರ ಕೆಳಗೆ ಆ ಪ್ಯಾರಾಕ್ಕೆ ಸಂಬಂಧಿಸಿದ ಪ್ರಶ್ನೆಗಳಿದ್ದು ನಾಲ್ಕು ಉತ್ತರಗಳನ್ನು ಸಹ ನೀಡಿರುತ್ತಾರೆ. ಹಾಗೆ

ನೀಡಲಾದ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆ ನಾಲ್ಕು ಉತ್ತರಗಳಿಂದಲೇ ಆರಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.