ADVERTISEMENT

ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ: ಮಾದರಿ ಪ್ರಶ್ನೋತ್ತರಗಳು

ಪ್ರಜಾವಾಣಿ ವಿಶೇಷ
Published 16 ಆಗಸ್ಟ್ 2023, 11:07 IST
Last Updated 16 ಆಗಸ್ಟ್ 2023, 11:07 IST
ಮಾದರಿ ಪ್ರಶ್ನೋತ್ತರಗಳು
ಮಾದರಿ ಪ್ರಶ್ನೋತ್ತರಗಳು   ಪ್ರಾತಿನಿಧಿಕ ಚಿತ್ರ

ಯುಪಿಎಸ್‌ಸಿ -ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ- 2, ಕೆಪಿಎಸ್‌ಸಿ –ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆ-2 ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

******************

1. ಸೂರ್ಯನ ಕುರಿತು ಅನ್ವೇಷಣೆ ನಡೆಸಿದ ಪ್ರಮುಖ ನೌಕೆಗಳಾವುವು?

ADVERTISEMENT

ಎ. ಸೋಲಾರ್ ಆರ್ಬಿಟರ್ ಬಿ. ಪಾರ್ಕರ್ ಸೋಲಾರ್ ಪ್ರೋಬ್

ಸಂಕೇತ ಬಳಸಿ ಸರಿ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿ

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪು

ಉತ್ತರ: ಸಿ

2. ರಾಷ್ಟ್ರೀಯ ಆಯುಷ್ ಅಭಿಯಾನದ ಅನುದಾನದ ಅನುಪಾತವನ್ನು ಗುರುತಿಸಿ

1. ಈಶಾನ್ಯ ರಾಜ್ಯಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಶೇ 90ರಷ್ಟು ಅನುದಾನವನ್ನು ಕಲ್ಪಿಸುತ್ತದೆ.

2. ಉತ್ತರಕಾಂಡ ಮತ್ತು ಹಿಮಾಚಲ ಪ್ರದೇಶದ ವಿಚಾರದಲ್ಲಿ ಕೇಂದ್ರ ಸರ್ಕಾರ ಶೇ 70 ರಷ್ಟು ಅನುದಾನವನ್ನು ಕಲ್ಪಿಸುತ್ತದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ

ಎ. 1 ಮಾತ್ರ

ಬಿ. 2 ಮಾತ್ರ

ಸಿ. 1 ಮತ್ತು 2

ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪು.

ಉತ್ತರ: ಎ

3. ಸಾರ್ವಜನಿಕ ಮಾನವ ಸಂಪನ್ಮೂಲ ಮಂಡಳಿಯಲ್ಲಿ ಕೆಳಗಿನ ಯಾವ ಹುದ್ದೆಗಳು ಸ್ಥಾನಮಾನವನ್ನು ಪಡೆದುಕೊಂಡಿವೆ?

1. ಕೇಂದ್ರ ಸಚಿವರು

2. ರಾಜ್ಯಗಳ ಮುಖ್ಯಮಂತ್ರಿಗಳು.

3. ಮಾನವ ಸಂಪನ್ಮೂಲ ಅಭಿವೃದ್ಧಿ ವಲಯದ ಪರಿಣತರು.

4. ವಿವಿಧ ವಲಯಗಳ ಚಿಂತಕರು.

ಕೋಡ್ ಬಳಸಿ ಸರಿಯಾದ ಉತ್ತರ ಗುರುತಿಸಿ

ಎ. 1 ಮಾತ್ರ

ಬಿ. 2 ಮಾತ್ರ

ಸಿ. 1, 2, 3 ಮತ್ತು 4

ಡಿ. 2 ಮತ್ತು 4

ಉತ್ತರ : ಸಿ

4. ಇತ್ತೀಚೆಗೆ ಇಸ್ರೇಲ್ ಕೆಳಗಿನ ಯಾವ ರಾಷ್ಟ್ರಕ್ಕೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಹಸ್ತಾಂತರಿಸಲು ಮುಂದಾಗಿದೆ?

ಎ. ಸ್ವೀಡನ್

ಬಿ. ಸ್ವಿಟ್ಜರ್‌ಲ್ಯಾಂಡ್‌

ಸಿ. ಫಿನ್‌ಲ್ಯಾಂಡ್‌

ಡಿ. ಉಕ್ರೇನ್

ಉತ್ತರ : ಸಿ

5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.

ಎ. ಸಾಗರ ಅಥವಾ ಸಮುದ್ರದ ಅಂಚಿನ ಹೆಚ್ಚು ಆಳವಿಲ್ಲದ ಭಾಗವನ್ನೇ ಖಂಡಾವರಣ ಪ್ರದೇಶ ಎನ್ನುವರು.

ಬಿ. ಖಂಡಾವರಣ ಪ್ರದೇಶವು ಮೀನುಗಾರಿಕೆ, ಜಲಚರ ಕೃಷಿ, ನೌಕಾಯಾನ ಹಾಗೂ ಕಚ್ಚಾತೈಲಗಳ ಉತ್ಪಾದನೆಗೆ ಪ್ರಾಮುಖ್ಯತೆ ಪಡೆದಿದೆ.

ಸಂಕೇತ ಬಳಸಿ ಸರಿ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡು ಹೇಳಿಕೆಗಳೂ ಸರಿ.

ಡಿ. ಮೇಲಿನ ಎರಡು ಹೇಳಿಕೆಗಳೂ ತಪ್ಪು.

ಉತ್ತರ: ಸಿ

6. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.

ಎ. ಗ್ರೀಕರ ಕಾಲದಲ್ಲಿ ಪೌರತ್ವ ಎಂಬುದು ಸಂಕುಚಿತ ಅರ್ಥವನ್ನು ಹೊಂದಿತ್ತು.

ಬಿ. ಆಧುನಿಕ ಕಾಲದ ಪೌರತ್ವದ ಪರಿಕಲ್ಪನೆ ವಿಶಾಲಾರ್ಥವನ್ನು ಹೊಂದಿದೆ.

ಸಂಕೇತ ಬಳಸಿ ಸರಿ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡು ಹೇಳಿಕೆಗಳೂ ಸರಿ.

ಡಿ. ಮೇಲಿನ ಎರಡು ಹೇಳಿಕೆಗಳೂ ತಪ್ಪು.

ಉತ್ತರ: ಸಿ

7. ಈ ಕೆಳಗಿನ ಯಾವವು ಮಾಲಿನ್ಯಕಾರಕಗಳಿಂದ ಉಂಟಾಗುವ ಪರಿಣಾಮಗಳಾಗಿವೆ.

ಎ. ಮಾನವನ ಉಸಿರಾಟ ವ್ಯವಸ್ಥೆಯಲ್ಲಿ ತೊಂದರೆಗಳಾಗುವುದು

ಬಿ. ಹವಾಮಾನ ಮತ್ತು ವಾಯುಗುಣ ಪರಿಸ್ಥಿತಿ ವ್ಯತ್ಯಾಸವಾಗುವುದು

ಕೋಡ್‌ ಬಳಸಿ ಸರಿ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ

ಸಿ. ಮೇಲಿನ ಎರಡು ಹೇಳಿಕೆಗಳೂ ಸರಿಯಾಗಿವೆ

ಡಿ. ಮೇಲಿನ ಎರಡು ಹೇಳಿಕೆಗಳೂ ತಪ್ಪಾಗಿವೆ

ಉತ್ತರ: ಸಿ

8. ಇತ್ತೀಚೆಗೆ ಕೆಳಗಿನ ಯಾವ ಒಕ್ಕೂಟ ಶ್ರೀಲಂಕಾ ಅಧ್ಯಕ್ಷರ ಪ್ರಸ್ತಾಪವನ್ನು ತಿರಸ್ಕರಿಸಿದೆ?

ಎ. ತಮಿಳು ರಾಷ್ಟ್ರೀಯ ಒಕ್ಕೂಟ

ಬಿ. ತಮಿಳು ಪ್ರಾದೇಶಿಕ ಒಕ್ಕೂಟ

ಸಿ. ತಮಿಳು ರಾಷ್ಟ್ರೀಯ ಸ್ವಗೌರವ ಒಕ್ಕೂಟ

ಡಿ. ತಮಿಳು ಅಂತರರಾಷ್ಟ್ರೀಯ ಒಕ್ಕೂಟ

ಉತ್ತರ : ಎ

9. ಹವಾಮಾನ ವೈಪರೀತ್ಯಕ್ಕೆ ಕಾರಣಗಳಾವುವು?

ಎ. ಭೂಮಿಯಲ್ಲಿ ಇಂಗಾಲಾಮ್ಲದ ಪ್ರಮಾಣ ದಶಲಕ್ಷಕ್ಕೆ 400ರ ಮಟ್ಟ ತಲುಪಿರುವುದು.

ಬಿ. ಪಳಯುಳಿಕೆ ಇಂಧನಗಳ ಅತಿಯಾದ ಬಳಕೆ ಮಾಡುತ್ತಿರುವುದು.

ಸಂಕೇತ ಬಳಸಿ ಸರಿ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ.

10. ಭಾರತದಲ್ಲಿ ಅಕ್ಕಿಯ ಬೆಲೆ ಏರಿಕೆಯಾಗಲು ಪ್ರಮುಖ ಕಾರಣಗಳೇನು?

ಎ. ಚಳಿಗಾಲದ ಋತುವಿನಲ್ಲಿ ಭತ್ತದ ಕೊಯ್ಲು ಕಳಪೆಯಾಗಿರುವುದು.

ಬಿ. ದಕ್ಷಿಣ ಭಾರತದಲ್ಲಿ ಮಳೆಯ ಕೊರತೆ ಮತ್ತು ಉತ್ತರ ಭಾರತದಲ್ಲಿ ಪ್ರವಾಹ ಉಂಟಾಗಿರುವುದು.

ಸಂಕೇತ ಬಳಸಿ ಸರಿ ಉತ್ತರ ಗುರುತಿಸಿ

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.