ADVERTISEMENT

ವ್ಯಕ್ತಿಯ ನಸೀಬನ್ನೇ ಬದಲಿಸಿದ ‘ವೈರಲ್ ಪೋಸ್ಟ್‌‘ !

ಕಾರ್ಪೆಂಟರ್ ಆಗಿದ್ದವರು ರೂಪದರ್ಶಿಯಾದ ಕಥೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 5:29 IST
Last Updated 17 ಜುಲೈ 2020, 5:29 IST
ವಕಸ್ ಮೊಹಮ್ಮದ್‌ (ಕೃಪೆ: ಟ್ವಿಟರ್  ಚಿತ್ರ)
ವಕಸ್ ಮೊಹಮ್ಮದ್‌ (ಕೃಪೆ: ಟ್ವಿಟರ್ ಚಿತ್ರ)   

ಇದು, ವೈರಲ್‌ ಟ್ವಿಟರ್ ಪೋಸ್ಟ್‌ವೊಂದು ಕಾರ್ಪೆಂಟರ್‌ ನಸೀಬ್‌ ಬದಲಿಸಿ, ರೂಪದರ್ಶಿಯನ್ನಾಗಿ ಮಾಡಿದ ಕುತೂಹಲಕಾರಿ ಕತೆ!

ನಾಲ್ಕು ವರ್ಷಗಳ ಹಿಂದೆ ನೌಕರಿ ಹುಡುಕಿಕೊಂಡು ಸೌದಿ ಅರೇಬಿಯಾಕ್ಕೆ ಹೋಗಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ‌ 24ರ ಹರೆಯದ ಮೊಹಮ್ಮದ್‌ ವಕಾಸ್‌ಗೆತಾನೊಬ್ಬ ರೂಪದರ್ಶಿಯಾಗಬೇಕು ಎಂಬ ಹಂಬಲವಿತ್ತು.

ಮನದೊಳಗಿದ್ದ ಈ ಆಸೆಯನ್ನು ಅವರು ಅನೇಕ ಬಾರಿ ಈಡೇರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರಾದರೂ, ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಎತ್ತರವಾದ ಮೈಕಟ್ಟು, ಅಂದವಾದ ಮುಖವುಳ್ಳ ಮೊಹಮ್ಮದ್‌ ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದರೂ,ರೂಪದರ್ಶಿಯಾಗಬೇಕೆಂಬ ಕನಸನ್ನು ಹಾಗೆ ಮನದಲ್ಲಿ ಬಚ್ಚಿಟ್ಟುಕೊಂಡಿದ್ದರು.

ADVERTISEMENT

ಒಮ್ಮೆ ಇವರ ಫೋಟೊಗ್ರಾಫರ್‌ ಗೆಳೆಯ ಫೈಸಲ್‌, ಫೋಟೊಶೂಟ್‌ನಲ್ಲಿ ಸೆರೆ ಹಿಡಿದ ಯಾರದ್ದೋ ಫೋಟೊಗಳನ್ನು ಎಡಿಟ್‌ ಮಾಡುತ್ತಿದ್ದರು. ಅದನ್ನು ನೋಡಿದ ಮೊಹಮ್ಮದ್‌, ‘ನನಗೆ ಬಾಲ್ಯದಿಂದಲೂ ರೂಪದರ್ಶಿಯಾಗಬೇಕೆಂಬ ಆಸೆ ಇದೆ. ನನ್ನದೂ ಫೋಟೊ ತೆಗೆದು, ಕಂಪನಿಗಳಿಗೆ ಕಳಿಸಿಕೊಡು’ ಎಂದು ಬೇಡಿಕೊಂಡ.

ಗೆಳೆಯನ ಮನವಿಗೆ ಸ್ಪಂದಿಸಿದ ಫೈಸಲ್, ಮೊಹಮ್ಮದ್ ವಕಾಸ್‌‌ ಫೋಟೊಗಳನ್ನು ತೆಗೆದು ಸಂಬಂಧಿಸಿದವರಿಗೆ ಕಳಿಸಿದ. ಹಾಗೆಯೇ, ಆ ಫೋಟೊಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ‘ಈ ಯುವಕನಿಗೆ ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇದೆ. ರೂಪದರ್ಶಿಯಾಗಲುಇತನಿಗೆ ಒಂದು ಅವಕಾಶಕೊಡಿ. ಈ ಸುಂದರ ವ್ಯಕ್ತಿಯನ್ನು ರೂಪದರ್ಶಿಯಾಗಿ ಸ್ವೀಕರಿಸುವ ಕಂಪನಿಗಳು ನನ್ನನ್ನು ಸಂಪರ್ಕಿಸಿ’ ಎಂದುಅಡಿಬರಹ ಬರೆದ.

ಆ ಪೋಸ್ಟ್‌ ತುಂಬಾ ವೈರಲ್ ಆಯಿತು. ಹತ್ತು – ಹದಿನೈದು ದಿನಗಳಲ್ಲಿ 33 ಸಾವಿರ ಮಂದಿ ಪೋಸ್ಟ್‌ ಇಷ್ಟಪಟ್ಟರು. ಕಂಪನಿಗಳು, ಮೊಹಮ್ಮದ್‌ ಅವರನ್ನು ರೂಪದರ್ಶಿಯಾಗುವಂತೆ ಆಹ್ವಾನ ನೀಡಿದವು. ‘ನಾನು ಸೌದಿಗೆ ಉದ್ಯೋಗಕ್ಕಾಗಿ ಬಂದಾಗ, ಜಾಹಿರಾತು ಕಂಪನಿಯ ರೂಪದರ್ಶಿಯಾಗುತ್ತೇನೆಂದು ಯೋಚಿಸಿಯೂ ಇರಲಿಲ್ಲ‘ ಎಂದು ತಮ್ಮ ಸಂಭ್ರಮವನ್ನು ಮಾಧ್ಯಮಗಳ ಜತೆ ಹಂಚಿಕೊಂಡಿದ್ದಾನೆ. ಇದನ್ನು ‘ಗಲ್ಫ್‌ ನ್ಯೂಸ್‘ ವರದಿ ಮಾಡಿದೆ.

ಈಗ ಮೊಹಮ್ಮದ್ ಅವರೇ ಟ್ವಿಟರ್‌ ಖಾತೆ ಮೂಲಕ ತಮ್ಮ ಮಾಡೆಲಿಂಗ್ ಫೋಟೊಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಸದ್ಯ ಸೌದಿ ಅರೇಬಿಯಾ ಮೂಲದ ವೆಸ್ಟ್‌ ಮೇಕಿಂಗ್ ಕಂಪನಿ ಜಾಹೀರಾತಿಗೆ ರೂಪದರ್ಶಿಯಾಗಿದ್ದಾರೆ.

ಈಗ ಅವರನ್ನು@MuhammadWaqas1 ಟ್ವಿಟರ್‌ ಖಾತೆಯಲ್ಲಿ ಫಾಲೊ ಮಾಡುವವರ ಸಂಖ್ಯೆ 19,300 ದಾಟಿದೆ. ಸಾಮಾಜಿಕ ಜಾಲತಾಣದಲ್ಲಿನ ಒಂದು ವೈರಲ್ ಆದ ಪೋಸ್ಟ್‌, ಹೇಗೆ ವ್ಯಕ್ತಿಯ ಭವಿಷ್ಯವನ್ನೇ ಬದಲಾಯಿಸಿತು ನೋಡಿ !

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.