ADVERTISEMENT

‘ಮಣ್ಣು ‍‍ಪರೀಕ್ಷಾ ಕೇಂದ್ರ ತೆರೆಯುವ ಆಸೆ’

ಅನ್ನಪೂರ್ಣ ಮೂರ್ತಿ
Published 29 ಜನವರಿ 2019, 19:30 IST
Last Updated 29 ಜನವರಿ 2019, 19:30 IST
   

ನನಗೆ 30 ವರ್ಷ. ನಾನುಡಿಪ್ಲೊಮೊ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವ್ಯಾಸಂಗ ಮಾಡಿ ಈಗ ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇನೆ. ಅದರ ಜೊತೆಗೆ ನಮ್ಮ ತಾಲ್ಲೂಕು ಕೇಂದ್ರದಲ್ಲಿ ಮಣ್ಣು ಪರೀಕ್ಷಾ ಕೇಂದ್ರ (ಪ್ರಯೋಗಾಲಯ) ಆರಂಭಿಸಬೇಕೆಂದು ಕೊಂಡಿದ್ದೇನೆ. ಈ ಕುರಿತು ತರಬೇತಿ ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಗೊತ್ತಿಲ್ಲ. ದಯವಿಟ್ಟು ತಿಳಿಸಿ.

– ಹರ್ಷ, ಊರು ಬೇಡ

ನೀವು ಓದಿರುವುದಕ್ಕೂ ನೀವು ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ. ನೀವು ಕೃಷಿಗೆ ಸಂಬಂಧಿಸಿದ ಪದವಿ ಪಡೆದಿದ್ದರೆ ಚೆನ್ನಾಗಿತ್ತು. 3 ವರ್ಷದ ಅಧ್ಯಯನ ವ್ಯರ್ಥವಾಗುತ್ತಿರಲಿಲ್ಲ. ನಿಮ್ಮ ಮಹತ್ವಾಕಾಂಕ್ಷೆ ಪ್ರಯೋಗಾಲಯ ತೆಗೆಯುವುದು. ಮೊದಲೇ ಇದಕ್ಕೆ ಸಂಬಂಧಪ‍ಟ್ಟ ವ್ಯಾಸಂಗ ಇಲ್ಲ. ನೀವು ತರಬೇತಿ ತೆಗೆದುಕೊಂಡು ಪರಿಣಿತರಾದ ಮೇಲೆ ಈ ಯೋಜನೆಯ ಕಡೆ ದೃಷ್ಟಿ ಹರಿಸಿ.

ADVERTISEMENT

ಮಣ್ಣು ಪರೀಕ್ಷಾ ತರಬೇತಿಗೆ ಶಾರ್ಟ್‌ಟರ್ಮ್ ಕೋರ್ಸ್‌ಗಳಿವೆ. ಕೃಷಿ ವಿಜ್ಞಾನ ಪದವಿ ಅಥವಾ ಎಂಜಿನಿಯರಿಂಗ್ ಪದವಿ ಇದ್ದಲ್ಲಿ ಸ್ನಾತಕೋತ್ತರ ಕೋರ್ಸ್ ಬಗ್ಗೆ ಮಾಹಿತಿ ನೀಡಬಹುದಾಗಿತ್ತು.

ಈ ಕೋರ್ಸ್ ಮಾಡಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ದ್ವಿತೀಯ ಪಿಯುಸಿ ಸೈನ್ಸ್ ಅಥವಾ ಕೃಷಿ ವಿಜ್ಞಾನ ಇರಬೇಕು. ನಿಮಗಾಗಲೇ 38 ವರ್ಷ ವಯಸ್ಸಾಗಿದೆ ಈ ಕೆಳಕಂಡ ಕೆಲವು ತರಬೇತಿ ಕೇಂದ್ರದಲ್ಲಿ ನಿಮ್ಮ ವಯಸ್ಸಿನವರಿಗೆ ತರಬೇತಿ ಇದೆಯೇ ಅನ್ನುವುದನ್ನು ಕೇಳಿ.

1. RM Patel Institute of Technology

www.fetr.ac.in

2.Sant Gadge Baba Amravati University

www.sgbau.ac.in

3. Anand Agriculture University

www.aau.in

4. ICAR - Indian Institute of Social Science

www.iiss.nic.in

ಮತ್ತು ಇನ್ನೂ ಅನೇಕ....

ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಸಿ. ಮುಗಿಸಿದ್ದೇನೆ. ಪ್ರಸ್ತುತ ನಾನು ಆಕ್ಸ್‌ಫರ್ಡ್ ಸೈನ್ಸ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಮುಂದೆ ನನಗೆ ಪಿಎಚ್‌.ಡಿ. ಮಾಡುವ ಆಸೆ ಇದೆ. ಇದರ ಬಗ್ಗೆ ಗೈಡ್ ಮಾಡಿ ಎಂ.ಎಸ್. ಮಾಡುವ ಬಗ್ಗೆಯೂ ತಿಳಿಸಿ.

– ನಾಗಾರ್ಜುನ, ಬೆಂಗಳೂರು

ಮ್ಯಾಥ್‌ಮೆಟಿಕ್ಸ್ ಪಿಎಚ್.ಡಿ.ಯನ್ನು ಹಲವಾರು ವಿಶ್ವವಿದ್ಯಾಲಯಗಳಲ್ಲೂ, ಹೆಸರಾಂತ ಇನ್ಸ್‌ಟಿಟ್ಯೂಟ್‌ಗಳಲ್ಲಿಮಾಡಬಹುದು.

ಅರ್ಹತೆ: ಎಂ.ಎಸ್ಸಿ. ಇನ್ ಮ್ಯಾಥ್‌ಮ್ಯಾಟಿಕ್ಸ್, ಫಿಸಿಕಲ್ ಸೈನ್ಸ್, ಬಿ.ಟೆಕ್ ಪದವೀಧರರೂ ಅಪ್ಲೈ ಮಾಡಬಹುದು. ಕೆಲವು ಇನ್ಸ್‌ಟಿಟ್ಯೂಟ್‌ಗಳಲ್ಲಿ ನಿಮ್ಮ ಅಕಾಡೆಮಿಕ್ ರೆಕಾರ್ಡ್ ಅತ್ಯಂತ ಉತ್ತಮವಾಗಿದ್ದಲ್ಲಿ ಡೈರೆಕ್ಟ್ ಎಂಟ್ರಿ ಕೂಡ ಅವಕಾಶವಿದೆ.

ಪ್ರವೇಶ ಪರೀಕ್ಷೆಗಳು ಬೇರೆ ಬೇರೆ ಇರುತ್ತವೆ. ಸಿಎಸ್‌ಐಆರ್ – ಯುಜಿಸಿ (CSIR-UGC), ಜೆ.ಆರ್‌.ಎಫ್‌.ಗೆ (JRF), ಎನ್.ಬಿ.ಎಚ್.ಎಂ. (NBHM) ಸ್ಕ್ರೀನಿಂಗ್ ಟೆಸ್ಟ್ ಅಥವಾ INSPIRE PHD ಫೆಲೋಶಿಪ್‌ ಪಾಸಾದವರಿಗೆ. ಸರ್ಕಾರದಿಂದ ಸ್ಕಾಲರ್‌ಶಿಪ್‌ ಸಹ ಇದೆ. ಬೆಂಗಳೂರು ವಿಶ್ವವಿದ್ಯಾಲಯದ ಪಿ.ಎಚ್.ಡಿ. ದಾಖಲಿಸುವ ಪ್ರಕಟಣೆ, ಫೆಬ್ರವರಿ ಮೊದಲ ವಾರದಲ್ಲಿ ಬರುತ್ತದೆ. ಇಲ್ಲಿಂದಲೂ ಸ್ಕಾಲರ್‌ಶಿಪ್‌ ದೊರಕುತ್ತದೆ. ಎಸ್‌ಸಿ/ಎಸ್‌ಟಿ ನವರಿಗೂ ಸ್ಕಾಲರ್‌ಶಿಪ್‌ ಇದೆ. ನೀವು ಪಿ.ಎಚ್‌.ಡಿ.ಗೆ ಎನ್‌ರೋಲ್ ಆದ ಮೇಲೆ ನಿಮ್ಮ ಗೈಡ್‌ನ್ನು ಗುರುತಿಸಬಹುದು.
ನಿಮ್ಮ ಡೆಸರ್‌ಟೇಷನ್ ಯಾವ ವಿಷಯದಲ್ಲಿ ಅನ್ನುವುದನ್ನು ಮೊದಲೇ ಯೋಚಿಸಿರಬೇಕು. 3 ರಿಂದ 5 ವರ್ಷದ ಅವಧಿಯಲ್ಲಿ ನೀವು ಪಿಎಚ್‌.ಡಿ. ಮುಗಿಸಬಹುದು.

1.→CSIR - UGC NET ಅಪ್ಲಿಕೇಷನ್ಸ್ ಮಾರ್ಚ್ ಮೊದಲ ವಾರದಲ್ಲಿ ಶುರುವಾಗುತ್ತದೆ. ಹೆಚ್ಚಿನ ವಿವರಗಳಿಗೆ : csirhrdg.res.in

2.→NBHM– ಸ್ಕಾಲರ್‌ಶಿಫ್‌ಗಳಿಗೆ www.nbhm.dal.govin.

3.→INSPIRE Phd Fellowship www.inspire-dst. gov.in/ fellowship (ಮಿನಿಮಮ್‌ 70% ಇನ್ ಎಂ.ಎಸ್ಸಿ.)

ಹೆಸರಾಂತ ಕಂ‍ಪನಿಗಳಾದ:

1. TCS Innovation Lab

2. Weiz mann Institute

3. Ernst and Young

4. Tises Anslytics

ಇವರೆಲ್ಲಾ ಪಿಎಚ್‌.ಡಿ. ಮ್ಯಾಥ್‌ಮೆಟಿಕ್ಸ್ ಮಾಡಿದವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.