ADVERTISEMENT

ನಕಾರಾತ್ಮಕ ವಿಶೇಷಣ

ಸರಣಿ–43

ಟಿ.ಜಿ.ಶಿವರಾಜ್‌
Published 10 ಏಪ್ರಿಲ್ 2016, 19:30 IST
Last Updated 10 ಏಪ್ರಿಲ್ 2016, 19:30 IST
ನಕಾರಾತ್ಮಕ  ವಿಶೇಷಣ
ನಕಾರಾತ್ಮಕ ವಿಶೇಷಣ   

ನಾಮಪದವನ್ನು  ವಿಶೇಷಣವನ್ನಾಗಿ ರೂಪಿಸಲು ಕಾರಣವಾದ ಪ್ರತ್ಯಯಗಳು ಬಹಳಷ್ಟಿವೆ. ಇಂತಹ ಪ್ರತ್ಯಯಗಳ ಸಂಖ್ಯೆ ಅಧಿಕವಾಗಿರುವುದರಿಂದ,  ಆ ಎಲ್ಲಾ ಪ್ರತ್ಯಯಗಳಲ್ಲಿ ಕೆಲವನ್ನು ಈ ಕೆಳಗೆ ಕಾಣಿಸಲಾಗಿದೆ.  ವಿದ್ಯಾಕಾಂಕ್ಷಿಗಳು ಇಂಗ್ಲಿಷ್ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಾಸ ಮಾಡುತ್ತಾ ಹೋದಾಗ ಇಂತಹ ಅನೇಕ ಪ್ರತ್ಯಯಗಳು ಗಮನಕ್ಕೆ ಬರುತ್ತವೆ. ಇಂತಹ ಸಂದರ್ಭದಲ್ಲಿ ಇಂತಹ  ಪ್ರತ್ಯಯಗಳನ್ನು ಹೆಚ್ಚು ಆಸಕ್ತಿಯಿಂದ ಗಮನಿಸಿ ಜೋಡಿಪದಗಳಾದ ನಾಮಪದ ಮತ್ತು ವಿಶೇಷಣವನ್ನು ಕೂಲಂಕಷವಾಗಿ ಅವಲೋಕಿಸಿ, ಸಾಧ್ಯವಾದಷ್ಟು ನೆನಪಿನಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು.

ವಿಶೇಷ ಸೂಚನೆ-1    

ಕೆಲವೊಮ್ಮೆ ಪದವೊಂದು ನಾಮಪದ ಮತ್ತು ವಿಶೇಷಣ ಆಗಿದ್ದಾಗ  ಇಂತಹ ಕೆಲವು ಪದಗಳಿಗೆ  ಪ್ರತ್ಯೇಕವಾದ ವಿಶೇಷಣ ರೂಪವಿರುತ್ತದೆ. ಉದಾಹರಣೆಗೆ:  Magic ಎಂಬ ಪದವನ್ನು  ನಾಮಪದವನ್ನಾಗಿ ಕಂಡಾಗ, ಅದರ ಕನ್ನಡ ಅರ್ಥ ‘ತಂತ್ರ’ ಎಂದು ಗೊತ್ತಾಗುತ್ತದೆ. ಈ ಪದವು ವಿಶೇಷಣವಾದಾಗ Magical  ಎಂಬ ಪದವು  Magic  ಎಂಬ ಪದಕ್ಕೆ  ಸಮಾನಾಂತರವಾಗಿರುತ್ತದೆ. ನಿಮ್ಮ ಅಧ್ಯಯನದ ಉದ್ದಕ್ಕೂ ಇಂತಹ ಸೂಕ್ಷ್ಮಗಳು ನಿಮ್ಮ ಗಮನಕ್ಕೆ ಬಂದಾಗಲೆಲ್ಲಾ ಎಚ್ಚರಿಕೆಯಿಂದ ಗಮನಿಸಿ ಸ್ಪಷ್ಟತೆಯನ್ನು ಕಾಣುವುದು  ಅತಿ ಮುಖ್ಯ,  ಇದೇ ರೀತಿಯಾಗಿ  History ಎಂಬ ನಾಮಪದಕ್ಕೆ   Historic    ಮತ್ತು  Historical  ಎಂಬ ಎರಡು ವಿಧವಾದ ವಿಶೇಷಣ ರೂಪಗಳಿವೆ.

ವಿಶೇಷ ಸೂಚನೆ
ಸಕಾರಾತ್ಮಕ ವಿಶೇಷಣವನ್ನು ನಕಾರಾತ್ಮಕ ವಿಶೇಷಣವನ್ನಾಗಿ ರೂಪಾಂತರಿಸುವಾಗ, ಸಕಾರಾತ್ಮಕ ವಿಶೇಷಣದ ಮೊದಲಿಗೆ ಪೂರ್ವ ಪ್ರತ್ಯಯವನ್ನು ಸೇರಿಸುವಾಗ  ಕೆಲವೊಮ್ಮೆ, ಸಕಾರಾತ್ಮಕ ವಿಶೇಷಣದ ಪ್ರಾರಂಭದ ಒಂದೆರಡು  ಅಕ್ಷರಗಳು ಲುಪ್ತವಾಗುತ್ತದೆ. ಕೆಳಗಿನ ಉದಾಹರಣೆಗಳನ್ನು ಗಮನಿಸಿ.
ಲಗತ್ತಿಸಲಾದ/Attached    ಎಂಬುದು ಸಕಾರಾತ್ಮಕ  ವಿಶೇಷಣ ಇದಕ್ಕೆ    de ಎಂಬ ಪೂರ್ವ ಪ್ರತ್ಯಯವನ್ನು ಸೇರಿಸಿದಾಗ, ಆ ಸಕಾರಾತ್ಮಕ  ವಿಶೇಷಣದಲ್ಲಿರುವ  ಪ್ರಾರಂಭಿಕ ಎರಡು ಅಕ್ಷರಗಳಾದ  at   ಎಂಬ ಎರಡು ಬದಲು ಅಕ್ಷರಗಳು ಬೇರ್ಪಟ್ಟ ಎಂಬ ಅರ್ಥವನ್ನು ಕೊಡುವ detached ಎಂಬ ನಕಾರಾತ್ಮಕ  ವಿಶೇಷಣ ಉಂಟಾಗುತ್ತದೆ.

ಸಕಾರಾತ್ಮಕ ವಿಶೇಷಣಗಳನ್ನು  ನಕಾರಾತ್ಮಕ ವಿಶೇಷಣಗಳನ್ನಾಗಿ ರೂಪಾಂತರಿಸುವಾಗ, ಸಕಾರಾತ್ಮಕ ವಿಶೇಷಣಗಳ ಮೊದಲಿಗೆ ಕೆಲವು ವಿಭಿನ್ನ ಪೂರ್ವ ಪ್ರತ್ಯಯ/prefixಗಳನ್ನು ಸೇರಿಸುವುದರಿಂದ ಅವು ನಕಾರಾತ್ಮಕ ವಿಶೇಷಣಗಳಾಗೆ ರೂಪುಗೊಳ್ಳುತ್ತವೆ. ಇಂತಿಂತಹ ಸಕಾರಾತ್ಮಕ ವಿಶೇಷಣಗಳಿಗೆ  ಇಂತಿಂತಹ ಪೂರ್ವ ಪ್ರತ್ಯೇಯಗಳನ್ನು ಸೇರಿಸುವ ಕ್ರಮವಿರುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.