ನಿರ್ದೇಶನಾರ್ಥಕ ವಿಶೇಷಣಗಳು
ನಾಮಪದವೊಂದನ್ನು ಬೆರಳು ತೋರಿಸಿ ನಿರ್ದೇಶಿಸುವಂತಹ ಪದವನ್ನು ಅಥವಾ ಯಾವ ಅಥವಾ ಯಾವುದು ಎಂದು ಪ್ರಶ್ನಿಸಿದಾಗ ಬರುವ ಉತ್ತರವನ್ನು ನಿರ್ದೇಶನಾರ್ಥಕ ವಿಶೇಷಣವೆಂದು ಹೆಸರಿಸಲಾಗುತ್ತದೆ.
ಉದಾಹರಣೆಗಳು
ಈ ಬೆಕ್ಕು ಬೆಕ್ಕಿನ ಮರಿಯನ್ನು ಪೋಷಿಸುತ್ತದೆ. This cat feeds kitten.
ಆ ನಾಯಿಯು ಚೆಂಡನ್ನು ಹಿಡಿಯುತ್ತದೆ.
That dog catches a ball.
ಈ ಎತ್ತುಗಳು ಹೊಲಗಳನ್ನು ಉಳುತ್ತವೆ.
These oxen plough fields..
ಆ ಪಾರಿವಾಳಗಳು ಕಾಳುಗಳನ್ನು ತಿನ್ನುತ್ತದೆ. Those doves eat corns
ಅಂತಹ ಕತ್ತೆಗಳು ಭಾರಗಳನ್ನು ಹೊರುತ್ತವೆ. Such asses carry loads..
ಈ ಮೇಲಿನ ವಾಕ್ಯಗಳಲ್ಲಿ ಅಡಿಗೆರೆ/Under line ಗಳಿಂದ ಗುರ್ತಿಸಿರುವ This, That, These, Those ಮತ್ತು Such ಎಂಬ ಪದಗಳು ನಿರ್ದೇಶನಾರ್ಥಕ ವಿಶೇಷಣಗಳಾಗಿರುತ್ತವೆ. ಇವು ಸಂಬಂಧಪಟ್ಟ ನಾಮಪದದ ಮೊದಲಿಗೆ ಬರುತ್ತವೆ.
ವಿಶೇಷ ಸೂಚನೆ: ಮೇಲೆ ಸೂಚಿಸಿರುವ ಪದಗಳು ನಿರ್ದೇಶನಾರ್ಥಕ ಸರ್ವನಾಮಗಳೂ ಹೌದು. ಸರ್ವನಾಮಗಳ ಸಮಗ್ರ ಮಾಹಿತಿಯನ್ನು ಮುಂದಿನ ಪಾಠಗಳಲ್ಲಿ ಕೊಡಲಾಗುವುದು.
ಕಲಿಯುವ ಪದಗಳು Learning words
(ನಿರ್ದೇಶನಾರ್ಥಕ ವಿಶೇಷಣಗಳು /Demonstrative Adjectives)
01 ಈ, ಇದು This
02 ಆ, ಅದು That
03 ಈ, ಇವು These
04 ಆ, ಅವು Those
05 ಅಂತಹ Such
06 ಆಚೆಯ, ಅತ್ತಕಡೆಯ Yonder
ಕಲಿಯುವ ಪದಗಳು (ಅಕರ್ಮಕ ಕ್ರಿಯಾಪದಗಳು)
01 ಬೀಳು Fall
02 ಪ್ರವಹಿಸು Flow
03 ಪ್ರಕಾಶಿಸು Glow
04 ಬೆಳೆ Grow
05 ದಿಟ್ಟಿಸಿ ನೋಡು Gaze
06 ನೆಗೆ, ಹಾರು Hop
07 ಶಂಕಿಸು, ಹಿಂಜರಿ Adj Hesitate
08 ಕೇಳು, ಆಲಿಸು Hear
09 ಬೆಂಕಿಹಚ್ಚು Ignite
10 ತಲೆಹಾಕು Interfere
11) ಕಾರ್ಮಿಕರು Labourers
12) ದನಕರು Cattle
13) ರೈತ Farmer
14) ಎತ್ತುಗಳು Oxen
15) ರೋಗಿ Patient
16) ಹಾಲು Milk
17) ಗ್ರಾಹಕ Customer
18) ಖರೀದಿ Purchase
19) ಇಲಾಖೆ Department
20) ವಾರ್ಷಿಕೋತ್ಸವ Anniversary
21) ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ Professor
22) ಉದಾಹರಣೆ Example
23) ನಗರಸಭಾ ಸದಸ್ಯ Carporator
24) ದೇಣಿಗೆ Donation
25) ಗಂಡ Husband
26) ಹೆಂಡತಿ Wife
27) ಮಾಲೀಕ Owner
28) ರಜಾದಿನ Holiday
29) ನ್ಯಾಯಾಧೀಶ Judge
30) ಆಜ್ಞಾಪತ್ರ Warrant
31) ಮಗ Son
32) ಆಸ್ತಿ Property
33) ಪುರುಷ Man
35) ಮಗು Child
35) ಮಹಿಳೆ Lady
36) ಚಿತ್ರ Picture
37) ಹೂಡಿಕೆದಾರರು Investors
38) ಸಂಸ್ಥೆ Company
39) ಪ್ರೇಕ್ಷಕರು Spectators
40) ನಾಯಕ,ವೀರ Hero
ಅಭ್ಯಾಸ
ಭಾಷಾಂತರ ಪಾಠ ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸಿ
1)ನಾಲ್ಕು ಕಳ್ಳರು ದನಕರುಗಳನ್ನು ಅಪಹರಿಸುತ್ತಾರೆ.
2)ಮೂರನೇ ಶಿಕ್ಷಣಾರ್ಥಿಯು ಬುದ್ಧಿವಾದವನ್ನು ಸ್ವೀಕರಿಸುತ್ತಾನೆ.
3)ಯಾವ ವ್ಯಕ್ತಿಯೂ ನಿಧಿಯನ್ನು ಕೂಡಿಸಲಿಲ್ಲ.
4)ಕೆಲವು ಗಾಯಕರು ಕೇಳುಗರನ್ನು ವಿಸ್ಮಯಗೊಳಿಸುತ್ತಾರೆ.
5)ಎಲ್ಲಾ ಆಟಗಾರರೂ ಆಜ್ಞೆಗಳನ್ನು ಬಹಿಷ್ಕರಿಸಲಿಲ್ಲ.
6)ಅನೇಕ ಕಾರ್ಮಿಕರು ಹಸುಗಳನ್ನು ಕಟ್ಟುತ್ತಾರೆ.
7)ಕೆಲವು ರೈತರು ಎತ್ತುಗಳನ್ನು ಹೊಡೆಯುವುದಿಲ್ಲ.
8)ಇಬ್ಬರಲ್ಲೊಬ್ಬರು ಹಾಲನ್ನು ಕಾಯಿಸುವುದಿಲ್ಲ.
9)ಪ್ರತಿಯೊಬ್ಬ ಗ್ರಾಹಕನೂ ಖರೀದಿಯನ್ನು ರದ್ದುಮಾಡುತ್ತಾನೆ.
10)ಪ್ರತಿಯೊಂದು ಇಲಾಖೆಯು ವಾರ್ಷಿಕೋತ್ಸವವನ್ನು ಆಚರಿಸುತ್ತದೆ.
ಅಭ್ಯಾಸ
ಭಾಷಾಂತರ ಪಾಠ ಇಂಗ್ಲೀಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ
1)One professor cites an example.
2) Sixth carporator does not collect donationas.
3) Any husband does not deceive his wife
4) Many owners declare a holiday..
5) Each judge dictates a warrant.
6) Neither son divides a property.
7) Another man encourages a child.
8) Other lady erases a picture
9) Several investors establish a company.
10) Some students expect donations.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.