ಪ್ರೌಢಶಾಲಾ ಹಂತದ ಸಮಾಜವಿಜ್ಞಾನ ವಿಷಯದ ಬೋಧನೆ ಮಾಡಲು ಶಿಕ್ಷಕರಿಗೆ ಉದಾಸೀನ ಹೆಚ್ಚು. ಇಂಥ ಮನಃಸ್ಥಿಯನ್ನು ಬದಲಿಸಲು ಪ್ರೌಢಶಾಲೆಯ ಸಮಾಜ ವಿಜ್ಞಾನ ವಿಷಯಕ್ಕಾಗಿ ಡಿಜಿಟಲ್ ಸಂಪನ್ಮೂಲವೊಂದನ್ನು ಸಿದ್ಧಪಡಿಸಲಾಗಿದೆ.
ಪ್ರೌಢಶಾಲೆಯ ಶೈಕ್ಷಣಿಕ ವರ್ಷದ ಪಠ್ಯವಿಷಯಗಳಿಗೆ ಡಿಜಿಟಲ್ ಸ್ಪರ್ಶ ನೀಡಿ, ಪಿಪಿಟಿ ತಯಾರಿಸಿ, ಕಲಿಕಾ ಪ್ರಕ್ರಿಯೆಯನ್ನು ಆಧುನಿಕಗೊಳಿಸುವುದು ಇದರ ಉದ್ದೇಶ.
ಇದು ಸಾಧ್ಯವಾಗಿರುವುದು ಶಿಕ್ಷಕರ ಸೇವಾಭಾವದ ಪರಿಶ್ರಮದ ಫಲ. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಸುಲಭವಾಗಲಿ ಮತ್ತು ಮಕ್ಕಳಿಗೆ ಪರಿಕಲ್ಪನೆ ಸ್ಪಷ್ಟವಾಗಿ ಅರ್ಥವಾಗಲಿ ಎಂಬುದು ಇದರ ಉದ್ದೇಶ. ಶಿಕ್ಷಕರು ಇದಕ್ಕಾಗಿ ಅಮೂಲ್ಯದ ಸಮಯದ ಜೊತೆಗೆ ಪರಿಶ್ರಮವನ್ನೂ ಪಟ್ಟಿದ್ದಾರೆ. ಇದರ ಸದುಪಯೋಗವನ್ನು ಮಕ್ಕಳು ಪಡೆಯುವುದು ಅಗತ್ಯ. ಎಲ್ಲ ಪ್ರೌಢಶಾಲೆಗಳಿಗೆ ಉಚಿತವಾಗಿ ಇದನ್ನು ಒದಗಿಸಲಾಗುತ್ತದೆ.
ರಾಜ್ಯದ ಪ್ರತಿ ಶಿಕ್ಷಕರ ನಡುವೆ ಸಂಪರ್ಕವನ್ನು ಸಾಧಿಸುವ ಉದ್ದೇಶದಿಂದ ವಾಟ್ಸ್ಆ್ಯಪ್‌ಗಳಲ್ಲಿ ಸಮಾಜವಿಜ್ಞಾನ ಶಿಕ್ಷಕರಿಗಾಗಿಯೇ ‘ಗ್ರೂಪ್’ ಮಾಡಲಾಗಿದೆ. ಇಲ್ಲಿ ಪಠ್ಯದ ವಿಷಯಗಳನ್ನು ಕುರಿತು ಚರ್ಚೆ ನಡೆಸಬಹುದು. ಮಾಹಿತಿಗೆ: 9980900810
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.