ADVERTISEMENT

ಪರಿಮಾಣ ಸೂಚಕ ವಿಶೇಷಣ ವಿವರ

ಇಂಗ್ಲಿಷ್‌ ವ್ಯಾಕರಣ

ಟಿ.ಜಿ.ಶಿವರಾಜ್‌
Published 6 ಮಾರ್ಚ್ 2016, 19:49 IST
Last Updated 6 ಮಾರ್ಚ್ 2016, 19:49 IST
ಪರಿಮಾಣ ಸೂಚಕ ವಿಶೇಷಣ ವಿವರ
ಪರಿಮಾಣ ಸೂಚಕ ವಿಶೇಷಣ ವಿವರ   

2.ಪರಿಮಾಣ ಸೂಚಕ ವಿಶೇಷಣಗಳು/Adjectives of quantity 

ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.

ನಾನು ಸಣ್ಣ ನಿವೇಶನವನ್ನು ಕೊಳ್ಳುತ್ತೇನೆ.
I buy a small site.

ನಾವು ಪೂರ್ತಿ ಪದ್ಯವನ್ನು ಪಠಿಸುತ್ತೇವೆ.
We recite whole poem.

ನೀನು ಹೆಚ್ಚು ಸುಳ್ಳನ್ನು ಹೇಳುತ್ತೀಯ.
You tell much lie.

ಅವನು ಯಾವ ಸಿಹಿಯನ್ನು ತಿನ್ನುವುದಿಲ್ಲ.
He does not eat any sweet.

ರೋಜಾಳು ಎಲ್ಲಾ ಆದಾಯವನ್ನು ಖರ್ಚು ಮಾಡುತ್ತಾಳೆ.
Roja spends all income.

ಈ ಮೇಲಿನ ಎಲ್ಲಾ ವಾಕ್ಯಗಳಲ್ಲಿ ಕಂಡು ಬರುವ ನಾಮಪದಗಳಿಗೆ, ಅವುಗಳ ಪರಿಮಾಣ ಎಷ್ಟು ಎಂದು ಪ್ರಶ್ನಿಸಿದಾಗ ದೊರಕುವ ಉತ್ತರವು ಪರಿಮಾಣ ಸೂಚಕ ವಿಶೇಷಣವೆನಿಸಿಕೊಳ್ಳುತ್ತದೆ.

ಎಷ್ಟು ಅಳತೆಯ ನಿವೇಶನ ಎಂಬ ಪ್ರಶ್ನೆಗೆ ಸಣ್ಣ, ಎಷ್ಟು ಪದ್ಯ ಎಂಬ ಪ್ರಶ್ನೆಗೆ ಪೂರ್ತಿ, ಎಷ್ಟು ಸುಳ್ಳು ಎಂಬ ಪ್ರಶ್ನೆಗೆ ಹೆಚ್ಚು, ಎಷ್ಟು ಹಣ ಎಂಬ ಪ್ರಶ್ನೆಗೆ ಸಾಕಷ್ಟು ಮತ್ತು ಎಷ್ಟು ಆದಾಯ ಎಂಬ ಪ್ರಶ್ನೆಗೆ ಎಲ್ಲಾ ಎಂಬ ಉತ್ತರಗಳು ಬರುತ್ತವೆ. ಈ ಎಲ್ಲಾ ಉತ್ತರಗಳೂ ಪರಿಮಾಣ ಸೂಚಕ ವಿಶೇಷಣಗಳಾಗಿರುತ್ತವೆ.

ಕಲಿಯುವ ಪದಗಳು /Learning words
(ಪರಿಮಾಣ ಸೂಚಕ ವಿಶೇಷಣಗಳು/Adjectives of quantity)

1) ಸಾಕಾದಷ್ಟು Adequate 
2) ಎಲ್ಲ/ಎಲ್ಲರೂ All
3) ಯಾವುದು ಆದರೂ  Any
4) ದೊಡ್ಡ Big 
5) ಅಗಲವಾದ Broad
6) ಸಾಕಷ್ಟು Enough
7) ಸರಿಸಮ Equal
8) ಸ್ವಲ್ಪ Few
9) ಪೂರ್ತಿ Full
10) ಪ್ರಖ್ಯಾತ Great
11) ಎತ್ತರವಾದ High
12) ಸಾಕಾಗದ Inadequate
13) ಉದ್ದವಾದ Long
14) ಬಹಳ Many
15) ಶೂನ್ಯ/  Nil
16) ಏನೂ ಇಲ್ಲದ / ಇಲ್ಲ No
17) ಚಿಕ್ಕದು Small
18) ಬೇಕಾದಷ್ಟು Sufficient
19) ಎತ್ತರವಾದ Tall
20) ದಟ್ಟ/ನಿಬಿಡ Thick

ಕಲಿಯುವ ಪದಗಳು/Learning words
(ರೂಢನಾಮಗಳು/Common nouns)

01 ಆಹಾರ  Food 
02 ಕೆಲಸ Work
03 ಒಂದು One
04 ತೋಟ Garden
05 ನದಿ River
06 ನೀರು Water
07 ಪಾಲುದಾರರು Partners
08 ಮಾಂಸ Meat
09 ಸಂಬಳ Salary
10 ಗಾಯಕ Singer
11 ಗೋಪುರ Tower
12 ಕಾಲುದಾರಿ Foot path
13 ರೈಲು Train
14 ರೋಗಿಗಳು Patient
15 ಆದಾಯ Income
16 ಚುಟ್ಟಾ Cigar
17 ಉದ್ಯಮಿ Entrepreneur
18 ಭತ್ತ Paddy
19 ಕುಸ್ತಿ ಪಟು Wrestler
20 ಕಾಡು Forest

ಭಾಷಾಂತರ ಪಾಠ?ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸಿ
01 ನಾನು ಸಾಕಾದಷ್ಟು ಆಹಾರವನ್ನು ತಿನ್ನುತ್ತೇನೆ.
02 ನಾವು ಎಲ್ಲ ಕೆಲಸವನ್ನು ಮುಗಿಸುತ್ತೇವೆ.
03 ನೀನು ಯಾವುದಾದರೂ ಒಂದನ್ನು ಒಪ್ಪುತ್ತೀಯ.
04 ನೀವು ಒಂದು ದೊಡ್ಡ ತೋಟವನ್ನುಕೊಳ್ಳುತ್ತೀರಿ.
05 ಅವನು ಒಂದು ಅಗಲವಾದ ನದಿಯನ್ನು ನೋಡುತ್ತಾನೆ.
06  ಅವಳು ಸಾಕಷ್ಟು ನೀರನ್ನು ಸಂಗ್ರಹಿಸುತ್ತಾಳೆ.
07 ಅವರು ಸರಿಸಮವಾದ ಪಾಲುದಾರರು ಆಗಿರುತ್ತಾರೆ.
08 ಹಾವು ಸ್ವಲ್ಪ ಮಾಂಸವನ್ನು ನುಂಗುತ್ತದೆ.
09 ಕಲ್ಯಾಣಿಯು ಪೂರ್ತಿ ಸಂಬಳವನ್ನು ಇಟ್ಟುಕೊಳ್ಳುತ್ತಾಳೆ.
10 ಬಾಲಮುರುಳೀಕೃಷ್ಣ ಒಬ್ಬ ಪ್ರಖ್ಯಾತ  ಗಾಯಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT