ನಾಮಪದದೊಂದಿಗೆ ಇರುವ ಸಂಬಂಧವನ್ನು ಸೂಚಿಸುವ ಪದವನ್ನು ಸಂಬಂಧ ಸೂಚಕ ವಿಶೇಷಣವೆಂದು ತಿಳಿಯಲಾಗುತ್ತದೆ. ಸಂಬಂಧ ಸೂಚಕ ವಿಶೇಷಣವು ವ್ಯಕ್ತಿ ಅಥವಾ ವ್ಯಕ್ತಿಗಳ, ವಸ್ತು ಅಥವಾ ವಸ್ತುಗಳ, ವಿಷಯ ಅಥವಾ ವಿಷಯಗಳ ಮಾಲೀಕತ್ವವನ್ನು ವಿವರಿಸುತ್ತದೆ. ಅಂದರೆ, ಯಾರ, ಅಥವಾ ಯಾವುದರ ಎಂದು ಪ್ರಶ್ನಿಸಿದಾಗ ಬರುವ ಉತ್ತರವೇ ಸಂಬಂಧ ಸೂಚಕ ವಿಶೇಷಣವಾಗಿರುತ್ತದೆ.
ಉದಾಹರಣೆಗಳು:
ನನ್ನ ತಂದೆಯು ಅರ್ಥಶಾಸ್ತ್ರವನ್ನು ಬೋಧಿಸುತ್ತಾರೆ.
My father teaches economics.
ನಿನ್ನ ಚೀಲವು ಪುಸ್ತಕಗಳನ್ನು ಹೊಂದಿರುತ್ತದೆ.
Your bag contains books.
ಅವನ ಮನೆಯು ಕೋಟಿಗಳಷ್ಟು ಬೆಲೆ ಬಾಳುತ್ತದೆ.
His house costs crores.
ಅವಳ ತಾಯಿಯು ಪದ್ಯಗಳನ್ನು ಬರೆಯುತ್ತಾಳೆ.
Her mother writes poems.
ಅದರ ಹಲ್ಲುಗಳು ಹಣ್ಣುಗಳನ್ನು ಕಚ್ಚುತ್ತವೆ.
Its teeth bite fruits.
ಕಲಿಯುವ ಪದಗಳು
(ಸಂಬಂಧ ಸೂಚಕ ವಿಶೇಷಣಗಳು/Possessive Adjectives)
1) ನನ್ನ My,
2) ನಮ್ಮ Our
3) ನಿನ್ನ Your
4) ನಿಮ್ಮ Your
5) ಅವನ His
6) ಆವಳ Her
7) ಅದರ Its
8) ಆವುಗಳ Their
9) ಅವರ Their
(ಸಕರ್ಮಕ ಕ್ರಿಯಾಪದಗಳು / Transitive verbs)
ಬೇಡು Demand,
ರಕ್ಷಿಸು Protect
ಮದುವೆಯಾಗು Marry,
ಬೆಳೆ Grow
ಮಾರು Sell,
ಯಾಚಿಸು Request
ಹೀರು Suck,
ಖರ್ಚುಮಾಡು Spend
ಅಭ್ಯಾಸಮಾಡು Practice
ಆಚರಿಸು Celebrate
ರೂಢನಾಮಗಳು/Common Nouns
ಅಪಹರಣಕಾರ/Abductor,
ಒತ್ತೆಹಣ/Ransome,
ದೇಶ/Country,
ನಿರಾಶ್ರಿತ/Refugee,
ತಂಗಿ/Sister,
ಬಡವ/Poor,
ಹೊಲ/Field,
ಹತ್ತಿ/Cotton,
ಅಣ್ಣ/Brother,
ಹೂವು/Flower,
ಗಂಡ/Husband,
ಆಶ್ರಯ/Shelter,
ಸೊಂಡಿಲು/Trunk,
ನೀರು/Water,
ಮಾಲೀಕ/Owner,
ಹಣ/Money,
ಮಗಳು/Daughter,
ಕಾನೂನು/Law,
ನಿವಾಸಿ/Resident,
ವಾರ್ಷಿಕೋತ್ಸವ/ Anniversary.
"ಅಭ್ಯಾಸ: ಭಾಷಾಂತರ ಪಾಠ"
ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ
ನನ್ನ ಅಪಹರಣಕಾರನು ಒತ್ತೆ ಹಣವನ್ನು ಬೇಡುತ್ತಾನೆ.
ನಮ್ಮ ದೇಶವು ನಿರಾಶ್ರಿತರನ್ನು ರಕ್ಷಿಸುತ್ತದೆ.
ನಿನ್ನ ತಂಗಿಯು ಒಬ್ಬ ಬಡವನನ್ನು ಮದುವೆಯಾಗುವುದಿಲ್ಲ.
ನಿಮ್ಮ ಹೊಲಗಳು ಹತ್ತಿಯನ್ನು ಬೆಳೆಯುವುದಿಲ್ಲ.
ಅವನ ಅಣ್ಣನು ಹೂವುಗಳನ್ನು ಮಾರುತ್ತಾನೆ.
ಅವಳ ಗಂಡನು ಆಶ್ರಯವನ್ನು ಯಾಚಿಸುತ್ತಾನೆ.
ಅದರ ಸೊಂಡಿಲು ನೀರನ್ನು ಹೀರುತ್ತದೆ.
ಅವುಗಳ ಮಾಲೀಕನು ಹಣವನ್ನು ಖರ್ಚುಮಾಡುತ್ತಾನೆ.
ಅವರ ಮಗಳು ಕಾನೂನನ್ನು ಅಭ್ಯಾಸ ಮಾಡುತ್ತಾಳೆ.
ನಮ್ಮ ನಿವಾಸಿಗಳು ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ.
ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ
My car consumes petrol.
Our residence requires a repair.
Your partner employs a salesman.
Your uniforms contain neckties.
His story does not have a hero.
Her patients do not want injections.
Its tonque secretes saliva.
Their branches bear nests.
Their collegues do not speak kannada.
My friend refuses a reward.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.