ನವದೆಹಲಿ: ಜೆಇಇ ಎರಡನೇ ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಭಾನುವಾರದಿಂದಲೇ ಪ್ರಾರಂಭವಾಗಿದ್ದು ಮಾರ್ಚ್ 2ವರೆಗೆ ಇರಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ತಿಳಿಸಿದೆ.
ಏಪ್ರಿಲ್ 4 ರಿಂದ 15ರವರೆಗೆ ಜೆಇಇ ಎರಡನೇ ಹಂತದ (Session-2) ಪರೀಕ್ಷೆಗಳು ನಡೆಯಲಿವೆ.
ಮೊದಲ ಸೆಷನ್ ಅಲ್ಲಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದವರು ಎರಡನೇ ಸೆಷನ್‌ಗೆ ಅರ್ಜಿ ಸಲ್ಲಿಸುವ ವೇಳೆ ಮೊದಲ ಸೆಷನ್‌ನ ಅರ್ಜಿ ಸಂಖ್ಯೆ ಹಾಗೂ ಪಾಸ್‌ವರ್ಡ್ ನಮೂದಿಸಿ ಸಲ್ಲಿಸಬಹುದು ಎಂದು ತಿಳಿಸಿದೆ.
ಹೊಸದಾಗಿ ಅರ್ಜಿ ಸಲ್ಲಿಸುವವರು ನಿಗದಿತ ದಿನಾಂಕದೊಳಗೆ ಮಾರ್ಗಸೂಚಿ ಅನುಸಾರ ಹೊಸ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ.
ಕಳೆದ ವಾರ ಮುಕ್ತಾಯವಾದ ಜೆಇಇ ಮೇನ್ಸ್ ಮೊದಲ ಸೆಷನ್‌ನಲ್ಲಿ ಒಟ್ಟು ಅರ್ಜಿ ಸಲ್ಲಿಸಿದವರ ಪೈಕಿ ಶೇ 95.8 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಇದು ಎನ್‌ಟಿಎ ಜೆಇಇ ಪರೀಕ್ಷೆ ನಡೆಸುವಾಗಿನಿಂದ ಹೊಸ ದಾಖಲೆ ಎಂದು ಎನ್‌ಟಿಎದ ಪರೀಕ್ಷಾ ವಿಭಾಗದ ಹಿರಿಯ ನಿರ್ದೇಶಕಿ ಸಾಧನಾ ಪರಿಶಾರ್ ತಿಳಿಸಿದ್ದಾರೆ.
ಜೆಇಇ ಮೇನ್ಸ್ ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಇತರ 12 ಪ್ರಾದೇಶಿಕ ಭಾಷೆಗಳಲ್ಲಿ ನಡೆಯುತ್ತದೆ. ಭಾರತದ ಹೊರಗಿನ 21 ನಗರಗಳಲ್ಲೂ ಈ ಪರೀಕ್ಷೆ ಬರೆಯಲು ಅವಕಾಶ ಇದೆ.
ಜೆಇಇ ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ದೇಶದ ಪ್ರತಿಷ್ಟಿತ ಎನ್‌ಐಟಿ, ಐಐಟಿ ಹಾಗೂ ಕೇಂದ್ರದ ಅನುದಾನಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆ.
ಜೆಇಇ ಸೆಷನ್ 1, ಸೆಷನ್ 2 ಪ್ರತ್ಯೇಕ ಪರೀಕ್ಷೆಗಳಾಗಿದ್ದು ವಿದ್ಯಾರ್ಥಿಗಳು ತಮ್ಮ ತಮ್ಮ ಅಕಾಡೆಮಿಕ್ ಗುರಿಗಳಿಗೆ ಅನುಗುಣವಾಗಿ ಸೆಷನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.