l→ದಡಾರ ಮತ್ತು ರುಬೆಲ್ಲಾ ರೋಗಗಳ ವಿರುದ್ಧ ಹೋರಾಡಿದ ಭಾರತದ ಅವಿರತ ಪ್ರಯತ್ನಗಳನ್ನು ಗುರುತಿಸಿ, ಮಾರ್ಚ್ 6, 2024 ರಂದು USA, ವಾಷಿಂಗ್ಟನ್ D.C. ನಲ್ಲಿರುವ ಅಮೇರಿಕನ್ ರೆಡ್ ಕ್ರಾಸ್ ಪ್ರಧಾನ ಕಚೇರಿಯಲ್ಲಿ, ದಡಾರ ಮತ್ತು ರುಬೆಲ್ಲಾ ಪಾಲುದಾರಿಕಾ ಒಕ್ಕೂಟದಿಂದ, ಭಾರತವು ದಡಾರ ಮತ್ತು ರುಬೆಲ್ಲಾ ಚಾಂಪಿಯನ್ ಪ್ರಶಸ್ತಿಯನ್ನು ಗೌರವಿಸಿತು.
l→ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪರವಾಗಿ ವಾಷಿಂಗ್ಟನ್ ಡಿ.ಸಿನಲ್ಲಿರುವ ಭಾರತದ ರಾಯಭಾರ ಕಚೇರಿಯ ಉಪ ಮುಖ್ಯಸ್ಥರಾದ ರಾಯಭಾರಿ ಪ್ರಿಯಾ ರಂಗನಾಥನ್ ಪ್ರಶಸ್ತಿಯನ್ನು ಸ್ವೀಕರಿಸಿದರು.
l→ದಡಾರ ಮತ್ತು ರುಬೆಲ್ಲಾ ಪಾಲುದಾರಿಕೆಯು ಅಮೇರಿಕನ್ ರೆಡ್ ಕ್ರಾಸ್, BMGF, GAVI, US CDC, UNF, UNICEF ಮತ್ತು WHO ಸೇರಿದಂತೆ ಬಹು-ಏಜೆನ್ಸಿ ಯೋಜನಾ ಸಮಿತಿಯನ್ನು ಒಳಗೊಂಡಿದೆ. ಇವೆಲ್ಲವೂ ಜಾಗತಿಕವಾಗಿ ದಡಾರ ಸಾವುಗಳನ್ನು ಕಡಿಮೆ ಮಾಡಲು ಮತ್ತು ರುಬೆಲ್ಲಾವನ್ನು ತಡೆಗಟ್ಟಲು ಒಗ್ಗೂಡಿ ನಿಂತ ಸಂಸ್ಥೆಗಳಾಗಿವೆ.
l→ದಡಾರ ಮತ್ತು ರುಬೆಲ್ಲಾ ಪ್ರಾಥಮಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಎರಡು ಸಾಂಕ್ರಾಮಿಕ ವೈರಲ್ ಸೋಂಕು ರೋಗಗಳಾಗಿವೆ.
lಎರಡೂ ಕಾಯಿಲೆಗಳು ಕೂಡಾ ನ್ಯುಮೋನಿಯಾ, ಎನ್ಸೆಫಾಲಿಟಿಸ್, ಮತ್ತು ಜನ್ಮಜಾತ ರುಬೆಲ್ಲಾ ಸಿಂಡ್ರೋಮ್ (CRS) ಸೇರಿದಂತೆ ಗಂಭೀರ ಶಿಶು ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು.
lಇದು ಪ್ರಪಂಚದಾದ್ಯಂತ ಸಾರ್ವಜನಿಕ ಆರೋಗ್ಯದ ಬಗ್ಗೆಗಿನ ಕಾಳಜಿಯ ವಿಚಾರವಾಗಿದೆ.
lದಡಾರ ಮತ್ತು ರುಬೆಲ್ಲಾ ಲಸಿಕೆ ತಡೆಗಟ್ಟುವ ರೋಗಗಳು (VPDs) ಮತ್ತು MR ಲಸಿಕೆ 2017 ಇವುಗಳು ಭಾರತದ ಸಾರ್ವತ್ರಿಕ ಪ್ರತಿರಕ್ಷಣೆ ಕಾರ್ಯಕ್ರಮದ ಭಾಗವಾಗಿದೆ.
ದಡಾರ
lಸೋಂಕಿಗೆ ಕಾರಣ :ದಡಾರವು ಪ್ಯಾರಾಮಿಕ್ಸೊವೈರಸ್ ಕುಟುಂಬದ ಸದಸ್ಯ ಎಂದು ಪರಿಗಣಿಸಲ್ಪಟ್ಟ ದಡಾರ ವೈರಸ್‌ನಿಂದ ಉಂಟಾಗುತ್ತದೆ.
ಪ್ರಸರಣ: ವೈರಸ್ ಉಸಿರಾಟದ ಹನಿಗಳ ಮೂಲಕ ಹರಡುತ್ತದೆ ಮತ್ತು ಹೆಚ್ಚು ಸಾಂಕ್ರಾಮಿಕವಾಗಿದೆ. ವಿಶೇಷವಾಗಿ ಜನನಿಬಿಡ ಪ್ರದೇಶಗಳಲ್ಲಿ ಇದು ಹೆಚ್ಚಿನ ಪ್ರಸರಣಕ್ಕೆ ಕಾರಣವಾಗುತ್ತದೆ.
lರೋಗ ಲಕ್ಷಣಗಳು: ರೋಗಲಕ್ಷಣಗಳು ಸಾಮಾನ್ಯವಾಗಿ ಜ್ವರ, ಕೆಮ್ಮು, ಮೂಗಿನಲ್ಲಿ ನೆಗಡಿ ಸ್ರಾವ, ಕಾಂಜಂಕ್ಟಿವಿಟಿಸ್ ಮತ್ತು ಚರ್ಮದಲ್ಲಿ ವಿಶಿಷ್ಟವಾದ ಕೆಂಪು ದದ್ದುಗಳು ಬೀಳುವುದು ಮುಂತಾದ ಲಕ್ಷಣಗಳನ್ನು ಒಳಗೊಂಡಿರುತ್ತದೆ.
lನ್ಯುಮೋನಿಯಾ, ಎನ್ಸೆಫಾಲಿಟಿಸ್ ಮತ್ತು ಕಿವಿಯ ಉರಿಯೂತದಂಥ ಆರೋಗ್ಯ ಸಮಸ್ಯೆಗಳು ಕೂಡಾ ಉಂಟಾಗಬಹುದು.
l ತಡೆಗಟ್ಟುವಿಕೆ : ದಡಾರ-ಮಂಪ್ಸ್-ರುಬೆಲ್ಲಾ (MMR) ಲಸಿಕೆಯೊಂದಿಗೆ ವ್ಯಾಕ್ಸಿನೇಷನ್ ನೀಡುವುದು ಅತ್ಯಂತ ಪರಿಣಾಮಕಾರಿ ತಡೆಗಟ್ಟುವ ಕ್ರಮವಾಗಿದೆ.
lಹೆಚ್ಚಿನ ವ್ಯಾಕ್ಸಿನೇಷನ್ ಕವರೇಜ್ ನೀಡಿದರೆ ಸಾಮಾನ್ಯವಾಗಿ ಶೇ 95ಕ್ಕಿಂತಲೂ ಹೆಚ್ಚು ಪ್ರತಿರಕ್ಷೆ ಮತ್ತು ರೋಗ ನಿಯಂತ್ರಣಕ್ಕೆ ಕಾರಣವಾಗಬಹುದು.
lಚಿಕಿತ್ಸೆ: ದಡಾರಕ್ಕೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳು ಮತ್ತು ತೊಡಕುಗಳನ್ನು ನಿರ್ವಹಿಸಲು ಮಾನಸಿಕ ಬೆಂಬಲ ಮತ್ತು ಆರೈಕೆ ಅತ್ಯಗತ್ಯ.
–––
ಜಾಗತಿಕ ಪ್ರಯತ್ನಗಳು
ದಡಾರ ಮತ್ತು ರುಬೆಲ್ಲಾ ಎರಡನ್ನೂ ಲಸಿಕೆ ಕಾರ್ಯಕ್ರಮಗಳು ಮತ್ತು ಹೆಚ್ಚಿನ ನಿಗಾ ಇಡುವ ಮೂಲಕ ನಿರ್ಮೂಲನೆ ಮಾಡುವ ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಹೊಂದಿದೆ. WHO, UNICEF, CDC, ಮತ್ತು ಇತರ ಪಾಲುದಾರರನ್ನು ಒಳಗೊಂಡಿರುವ ದಡಾರ ಮತ್ತು ರುಬೆಲ್ಲಾ ಇನಿಶಿಯೇಟಿವ್ ಎಂಬ ಹೆಸರಿನ ಪ್ರಯತ್ನವು ಜಾಗತಿಕವಾಗಿ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಗೆ ಟೊಂಕಕಟ್ಟಿ ನಿಂತಿವೆ.
ಮಿಷನ್ ಇಂದ್ರಧನುಷ್ - ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮ
ಭಾರತದ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ಕಾರ್ಯಕ್ರಮವಾಗಿದ್ದು, ವಾರ್ಷಿಕವಾಗಿ ಇದು 26.5 ಮಿಲಿಯನ್ ಶಿಶುಗಳು ಮತ್ತು 29 ಮಿಲಿಯನ್ ಗರ್ಭಿಣಿಯರಿಗೆ ಈ ಕಾರ್ಯಕ್ರಮದ ಮುಲಕ ಲಸಿಕೆ ನೀಡಲಾಗುತ್ತದೆ.
ಆರಂಭದಲ್ಲಿ ರಾಷ್ಟ್ರದಾದ್ಯಂತ ಲಸಿಕೆ ಹಾಕದ ಮತ್ತು ಭಾಗಶಃ ಲಸಿಕೆ ಹಾಕಿದ ಮಕ್ಕಳಿಗೆ ಪ್ರತಿರಕ್ಷಣೆ ನೀಡುವುದನ್ನು ಗುರಿಯಾಗಿಟ್ಟುಕೊಂಡು, ಈ ಕಾರ್ಯಕ್ರಮವು ಏಳು ಲಸಿಕೆಯ ಮೂಲಕ-ತಡೆಗಟ್ಟಬಹುದಾದ ರೋಗಗಳಾದ ಡಿಫ್ತೀರಿಯಾ, ನಾಯಿಕೆಮ್ಮು, ಧನುರ್ವಾಯು, ಪೋಲಿಯೊ, ಕ್ಷಯ, ದಡಾರ ಮತ್ತು ಹೆಪಟೈಟಿಸ್-ಬಿ ವಿರುದ್ಧ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
ಕಾಲಾನಂತರದಲ್ಲಿ ಕೆಲವು ಜಿಲ್ಲೆಗಳಲ್ಲಿ ಪೆರ್ಟುಸಿಸ್, ಮೆನಿಂಜೈಟಿಸ್, ನ್ಯುಮೋನಿಯಾ (ಹಿಮೋಫಿಲಸ್ ಇನ್ಫ್ಲುಯೆನ್ಸ ಟೈಪ್ ಬಿ ಸೋಂಕುಗಳು), ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ಸೇರಿದಂತೆ ಒಟ್ಟು 12 ರೋಗಗಳನ್ನು ಒಳಗೊಳ್ಳುವಂತೆ ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವಿಸ್ತರಿಸಲಾಯಿತು. ಈ ವಿಸ್ತರಣೆಯು ರೋಟವೈರಸ್ ಲಸಿಕೆ, ನಿಷ್ಕ್ರಿಯಗೊಂಡ ಪೋಲಿಯೊ ಲಸಿಕೆ (IPV), ವಯಸ್ಕ JE ಲಸಿಕೆ, ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ (PCV) ಮತ್ತು ದಡಾರ-ರುಬೆಲ್ಲಾ (MR) ಲಸಿಕೆಗಳಂತಹ ಹೊಸ ಲಸಿಕೆಗಳ ಪರಿಚಯಿಸಲಾಯಿತು.
ದಡಾರ ಮತ್ತು ರುಬೆಲ್ಲಾ ರೋಗಗಳು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ದೊಡ್ಡ ಬೆದರಿಕೆಯಾಗಿ ಉಳಿದಿದ್ದು, ವಿಶೇಷವಾಗಿ ಅಸಮರ್ಪಕ ವ್ಯಾಕ್ಸಿನೇಷನ್ ವ್ಯಾಪ್ತಿಯ ಪ್ರದೇಶಗಳಲ್ಲಿ, ರೋಗನಿರೋಧಕ ಕಾರ್ಯಕ್ರಮಗಳನ್ನು ಬಲಪಡಿಸುವುದು, ಕಣ್ಗಾವಲು ಹೆಚ್ಚಿಸುವುದು ಮತ್ತು ವ್ಯಾಕ್ಸಿನೇಷನ್‌ನ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ರೋಗಗಳನ್ನು ನಿಯಂತ್ರಿಸಲು ಮತ್ತು ಅಂತಿಮವಾಗಿ ತೊಡೆದುಹಾಕಲು ಅಗತ್ಯವಾದ ತಂತ್ರಗಳಾಗಿವೆ. ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯ ಗುರಿಯನ್ನು ಸಾಧಿಸಲು ಮತ್ತು ಎಲ್ಲರಿಗೂ ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಮುದಾಯಗಳ ನಡುವೆ ಉತ್ತಮ ಮಾದರಿಯ ಸಹಯೋಗವು ಅತ್ಯವಶ್ಯಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.