ನಾನು ಬಿಎಸ್ಸಿ(ಪಿಸಿಎಂ) ಮುಗಿಸಿದ್ದೇನೆ. ನಾನು ಸದ್ಯ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದೇನೆ. ನಾನು ದೂರಶಿಕ್ಷಣದ ಮೂಲಕ ಬಿಎಡ್ ಮಾಡಬೇಕು ಎಂಬ ಆಸೆಯಿದೆ. ಆದರೆ ಅವರು ನನಗೆ ಡಿಎಡ್ ಅಥವಾ ಟಿಸಿಎಚ್ ಕೇಳುತ್ತಿದ್ದಾರೆ. ಆದರೆ ನಾನು ಆ ಡಿಗ್ರಿಗಳನ್ನು ಮುಗಿಸಿಲ್ಲ. ನನಗೆ ಟೀಚಿಂಗ್ ವೃತ್ತಿಯಲ್ಲಿ ತುಂಬಾ ಆಸಕ್ತಿ ಇದೆ. ನಾನು ಬಿಎಡ್ ಮಾಡಲು ಏನು ಮಾಡಬೇಕು? ಬಿಎಡ್ ಡಿಗ್ರಿ ಪಡೆಯಲು ಬೇರೆ ಯಾವ ದಾರಿಗಳಿವೆ.
→⇒ಹೆಸರು, ಊರು ಬೇಡ
ನೀವು ಈಗಾಗಲೇ ಪದವೀಧರರಾಗಿರುವುದರಿಂದ ಬಿಎಡ್ ಮಾಡಲು ಡಿಎಡ್ ಅಥವಾ ಟಿಸಿಎಚ್ ಕೋರ್ಸುಗಳನ್ನು ಮಾಡಬೇಕಾಗಿಲ್ಲ. ನೀವು ನೇರವಾಗಿ ಬಿಎಡ್ ಪದವಿಗೆ ಸೇರಬಹುದು. ಪೂರ್ಣ ಪ್ರಮಾಣದ ಪದವಿಯನ್ನು ನೀಡುವ ಅಥವ ದೂರಶಿಕ್ಷಣದ ಮೂಲಕ ಪದವಿಯನ್ನು ನೀಡುವ ಒಂದು ಉತ್ತಮ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿದರೆ ಒಳ್ಳೆಯದು.
ನಾನುಬಿಸಿಎ ಓದುತ್ತಿದ್ದು, ನನ್ನ ಆರೋಗ್ಯ ಸಮಸ್ಯೆಯಿಂದ ಕೊನೆಯ ವರ್ಷದಲ್ಲಿ ಬಿಡಬೇಕಾಯಿತು. ಮತ್ತೆ ಅದನ್ನು ಓದಲು ಇಷ್ಟವಿಲ್ಲ. ನನಗೀಗ25ವರ್ಷ. ಯಾವುದಾದರೂ ಒಳ್ಳೆಯ ಒಂದು ವರ್ಷದ ಕೋರ್ಸ್ ಇದ್ದರೆ ತಿಳಿಸಿ.
⇒ಅರುಣ್ ಕುಮಾರ್, ಊರು ಬೇಡ
ನಿಮ್ಮ ಈಗಿನ ಸಮಸ್ಯೆಯನ್ನು ಮತ್ತು ಯಾವ ಕೋರ್ಸ್ ತೆಗೆದುಕೊಂಡರೆ ಒಳ್ಳೆಯದು ಎನ್ನುವುದನ್ನು ತೀರ್ಮಾನ ಮಾಡಲು ಒಬ್ಬ ಸೂಕ್ತ, ಅನುಭವಿ ವೃತ್ತಪರ ಮಾರ್ಗದರ್ಶನ ಮಾಡುವವರ ಸಲಹೆ ಪಡೆಯಿರಿ ಮತ್ತು ನಿಮ್ಮ ಆಸಕ್ತಿ, ವ್ಯಕ್ತಿತ್ವ, ಮತ್ತು ಉದ್ದೇಶಗಳ ಬಗ್ಗೆ ವಿವರವಾದ ಸಲಹೆ ಪಡೆದ ನಂತರ ನಿಮ್ಮ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಿರಿ.
ಪ್ಯಾರಾಮೆಡಿಕಲ್,ಪಿ.ಯು.ಸಿ. ಆದ ಮೇಲೆ ಡಿ.ಎಂ.ಎಲ್.ಟಿ. ಎರಡು ವರ್ಷ ಇರುತ್ತದೆ. ಇದಾದ ನಂತರ ಯಾವ - ಯಾವ ಕೋರ್ಸ್‌ಗಳಿರುತ್ತವೆ? ಅದನ್ನು ಮಾಡಿದರೆ ಏನು ಪ್ರಯೋಜನ ವಿವರಣೆ ಕೊಡಿ.
⇒ಅನಮೋಲ್,ಚಿಟಗುಪ್ಪ ಬೀದರ್
ಡಿಪ್ಲೊಮೊ ಎಂ. ಎಲ್. ಟಿ (ಡಿ .ಎಂ.ಎಲ್ .ಟಿ ) ಆದನಂತರದಲ್ಲಿ ಬ್ಯಾಚುಲರ್ ಲೆವೆಲ್ ಕೋರ್ಸುಗಳು
* ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
* ಬ್ಯಾಚುಲರ್ ಆಫ್ ಸೈನ್ಸ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.
* ಬ್ಯಾಚುಲರ್ ಆಫ್ ಸೈನ್ಸ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
ಡಿಪ್ಲೊಮ ಪೋಸ್ಟ್ ಗ್ರ್ಯಾಜುಯೆಟ್ ಕೋರ್ಸುಗಳು
* ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೊಮ ಲ್ಯಾಬೋರೇಟರಿ ಸರ್ವಿಸಸ್ .
* ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೊಮ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ.
* ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೊಮ ಕ್ಲಿನಿಕಲ್ ಜೆನೆಟಿಕ್ಸ್ ಅಂಡ್ ಮೆಡಿಕಲ್ ಲ್ಯಾಬೋರೇಟರಿ.
ಸರ್ಟಿಫಿಕೇಟ್ ಕೋರ್ಸುಗಳು
* ಸರ್ಟಿಫಿಕೇಟ್ ಕೋರ್ಸ್ ಅನಸ್ತೀಶಿಯ ಟೆಕ್ನಿಷಿಯನ್.
* ಸರ್ಟಿಫಿಕೇಟ್ ಕೋರ್ಸ್ ಬ್ಲಡ್ ಬ್ಯಾಂಕ್ ಟೆಕ್ನಿಷಿಯನ್.
* ಸರ್ಟಿಫಿಕೇಟ್ ಕೋರ್ಸ್ ಡಾರ್ಕ್ ರೂಮ್ ಅಸಿಸ್ಟೆಂಟ್.
* ಸರ್ಟಿಫಿಕೇಟ್ ಕೋರ್ಸ್ ರೇಡಿಯಾಲಜಿ ಅಂಡ್ ಇಮೇಜಿಂಗ್ ಟೆಕ್ನಿಕ್.
* ಸರ್ಟಿಫಿಕೇಟ್ ಕೋರ್ಸ್ ಟ್ರೇನಿಂಗ್ ಆಫ್ ಲ್ಯಾಬೋರೇಟರಿ ಅಸ್ಸಿಸ್ಟಂಟ್ಸ್.
* ಸರ್ಟಿಫಿಕೇಟ್ ಕೋರ್ಸ್ ಕ್ಯಾಥ್‌ಲ್ಯಾಬ್ ಟೆಕ್ನಿಷಿಯನ್.
* ಸರ್ಟಿಫಿಕೇಟ್ ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ .
* ಸರ್ಟಿಫಿಕೇಟ್ ಕೋರ್ಸ್ ಕ್ಲಿನಿಕಲ್ ಡಯಾಗ್ನೊಸ್ಟಿಕ್ ಟೆಕ್ನಿಕ್ಸ್.
ಡಿ .ಎಂ.ಎಲ್ .ಟಿ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದು ವಿಶೇಷತೆಯನ್ನು ಪಡೆದುಕೊಂಡರೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ.
ನನಗೆ ಕಾನೂನು ಅಭ್ಯಾಸ ಮಾಡಲು ಆಸಕ್ತಿ ಇದೆ. ನನಗೀಗ 62 ವರ್ಷ ವಯಸ್ಸು. ಬಿ.ಕಾಂ ಮತ್ತು ಡಿ.ಫಾರ್ಮ್ ಮಾಡಿದ್ದೇನೆ. ಎಲ್.ಎಲ್.ಬಿ. ಮಾಡಲು ಯಾವುದಾದರೂ ಕರಸ್ಪಾಂಡನ್ಸ್ ಕೋರ್ಸ್ ಇದೆಯಾ?
⇒ಹೆಸರು, ಊರು ಬೇಡ
ಭಾರತದ ಅಡ್ವೊಕೆಟ್ಸ್ ಆಕ್ಟ್ - ಇದರ ಅಡಿಯಲ್ಲಿ ನೀವು ಎಲ್.ಎಲ್.ಬಿ ಪದವೀಧರರಾಗಿದ್ದರೆ ಮಾತ್ರ ಅಡ್ವೋಕೇಟ್ ಆಗಿ ದಾಖಲು ಮಾಡಬಹುದು.ಅದೂ ಪೂರ್ಣ ಪ್ರಮಾಣದ ಡಿಗ್ರಿ ಮನ್ನಣೆ ಪಡೆದ ವಿಶ್ವವಿದ್ಯಾಲಯದಿಂದಲೇ ಮಾಡಿರಬೇಕು.
ದೂರಶಿಕ್ಷಣ ಪಡೆದ ಪದವೀಧರರನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಕೀಲರನ್ನರಾಗಿ ಪರಿಗಣಿಸುವುದಿಲ್ಲ
ನಾನು ಎಂ.ಎಸ್ಸಿ (ಕೆಮಿಸ್ಟ್ರಿ) ಮುಗಿಸಿದ್ದೇನೆ. ನನ್ನ ಪ್ರಶ್ನೆ ಏನೆಂದರೆಎಂಎಸ್ಸಿ (ಕೆಮಿಸ್ಟ್ರಿ) ನಂತರ ದೀರ್ಘ ಅಥವಾ ಅಲ್ಪಾವಧಿಯ ವೃತ್ತಿಪರ ಕೋರ್ಸ್‌ಗಳಿವೆಯೇ? ಆಗ ನಾನು ಉತ್ತಮ ಉದ್ಯೋಗ ಪಡೆಯಕೊಳ್ಳಬಹುದಲ್ಲವೇ?
⇒ವಿಕಾಸ್, ಊರು ಬೇಡ
ನೀವು ಎಂ.ಎಸ್ಸಿ ಕೆಮಿಸ್ಟ್ರಿ ಪದವೀಧರರಾಗಿರುವುದರಿಂದ ನಿಮಗೆ ಆರ್ & ಡಿ ಲ್ಯಾಬ್ಸ್, ಕೆಮಿಕಲ್ಸ್ ಮತ್ತು ಫರ್ಟಿಲೈಸರ್, ಪ್ಲಾಸ್ಟಿಕ್, ಫಾರ್ಮಸ್ಯೂಟಿಕಲ್ಸ್, ಮೆಟಲರ್ಜಿ ಮುಂತಾದ ಇಂಡಸ್ಟ್ರೀಸ್ ಅಥವ ಬಯೋಕಾನ್ ತರಹದ ಲೈಫ್‌ಸೈನ್ಸ್‌ನಂತಹ ಕಂಪನಿಗಳಲ್ಲಿ ಮತ್ತು ಸ್ಕೂಲ್, ಕಾಲೇಜುಗಳಲ್ಲಿ ಶಿಕ್ಷಕರಾಗಿ ಉದ್ಯೋಗಾವಕಾಶ ಇರುತ್ತದೆ. ಇದರ ಜೊತೆಗೆ ಮೇಲ್ಕಂಡ ಕ್ಷೇತ್ರಗಳಲ್ಲಿ ಸಂಶೋಧನೆ, ತಯಾರಿಕೆ, ಗುಣಮಟ್ಟವನ್ನು ಕಾಪಾಡಿಕೊಳ್ಳುವ ಅಥವಾ ಮಾರಾಟ ವಿಭಾಗದಲ್ಲಿ ಉದ್ಯೋಗಾವಕಾಶಗಳಿರುತ್ತವೆ. ಹಾಗಾಗಿ ಮೊದಲು ನಿಮ್ಮ ಆಸಕ್ತಿ ಯಾವ ವಿಭಾಗದಲ್ಲಿ ಮತ್ತು ಯಾವ ಕ್ಷೇತ್ರದಲ್ಲಿ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ.ತದನಂತರ ಸೂಕ್ತವಾದ ಕೋರ್ಸ್ ಅನ್ನು ಆಯ್ಕೆ ಮಾಡಿ.
ಒಂದು ಉದಾಹರಣೆ ಎಂದರೆ ನೀವು ಫಾರ್ಮಾ ವಿಷಯದಲ್ಲಿ ಎಂಬಿಏ ಕೋರ್ಸ್ ಮಾಡಿದರೆ, ಸಾಕಷ್ಟು ಫಾರ್ಮಾ ಕಂಪನಿಗಳಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್‌ಗೆ ಸಂಬಂಧಪಟ್ಟ ಉದ್ಯೋಗಾವಕಾಶಗಳು ಹೆಚ್ಚಾಗಿರುತ್ತವೆ. ಸೇಲ್ಸ್ ಮತ್ತು ಮಾರ್ಕೆಟಿಂಗ್‌ನಲ್ಲಿ ಡಿಗ್ರಿ ಅಥವಾ ಡಿಪ್ಲೊಮೊ ನೀಡುವ ಶಿಕ್ಷಣ ಸಂಸ್ಥೆಗಳ ಒಂದೆರಡು ಉದಾಹರಣೆಯಂದರೆ: (ನೈಪೆರ್) ಮೊಹಾಲಿ, ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆ ಫಾರ್ಮಸಿಟಿಕಲ್ ಮಾರ್ಕೆಟಿಂಗ್ (ಐಐಪಿಎಂ) ಲಕ್ನೋ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ರೆಪ್ರೆಸೆಂಟಿವ್ (ಐಐಎಂಆರ್).
ಇಷ್ಟೇ ಅಲ್ಲದೆ ನೀವು ಕ್ಲಿನಿಕಲ್ ರಿಸರ್ಚ್ ವಿಭಾಗದಲ್ಲಿ ಕೂಡ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು.
ನನಗೆ ಲೋಕಾಯುಕ್ತ ಕಚೇರಿಯಲ್ಲಿ ದಲಾಯತ್ ಗ್ರೂಪ್ ಡಿ ನೌಕರಿ ಸಿಕ್ಕಿದೆ. ಈ ಕೆಲಸದ ಬಗ್ಗೆ ಮಾಹಿತಿ ತಿಳಿದಿಲ್ಲ. ನಾನು ಈಗ ಬಿಎಸ್ಸಿ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಡಿಗ್ರಿ ಮುಗಿಸುವುದು ಹೇಗೆ?
⇒ಹೆಸರು, ಊರು ಬೇಡ
ದಲಾಯತ್ ಕೆಲಸವೆಂದರೆ ಯಾವುದಾದರು ಇಲಾಖೆಯಲ್ಲಿ ಸಹಾಯಕರಾಗಿ ಮಾಡುವ ಹುದ್ದೆ. ಅವರು ಫೈಲುಗಳನ್ನು ರವಾನಿಸುವ ಅಥವಾ ಬೇರೆ ಬೇರೆ ರೀತಿಯ ಮೂಲ ಕೆಲಸಗಳನ್ನು ಮಾಡಿಕೊಡುತ್ತಾರೆ. ನಿಮಗೆ ಈಗಾಗಲೇ ಈ ಕೆಲಸ ಸಿಕ್ಕಿರುವುದರಿಂದ ನೀವು ನಿಮ್ಮ ಬಿಎಸ್‌ಸಿ ಪದವಿಯನ್ನು ಮುಂದುವರೆಸಿ. ಪ್ರೂರ್ಣ ಪ್ರಮಾಣದ ಪದವಿಧರರಾದ ಮೇಲೆ ದಲಾಯತ್ ಕೆಲಸಕ್ಕೆ ಸೇರಿಕೊಳ್ಳುವುದು ಒಳ್ಳೆಯದು. ಏಕೆಂದರೆ ನಿಮ್ಮಡಿಗ್ರಿ ನಿಮ್ಮ ಮುಂದಿನ ಉದ್ಯೋಗಾವಕಾಶಗಳಿಗೆ ಬಹಳ ಸಹಾಯ ಮಾಡುತ್ತದೆ. ಡಿಗ್ರಿ ಮುಗಿಸಿದ ಮೇಲೆ ನೀವು ಇನ್ನೂ ಉತ್ತಮವಾದ ಉದ್ಯೋಗಗಳಿಗೆ ಅರ್ಹತೆಯನ್ನು ಪಡೆಯುತ್ತೇರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.