ಭೂಮಿ ಫೆಲೋಶಿಪ್ ಪ್ರೋಗ್ರಾಂ ಇನ್ ಇಂಡಿಯಾ 2024-26
ವಿವರ: ಶಿಕ್ಷಣದಲ್ಲಿ ಭವಿಷ್ಯದ ನಾಯಕರನ್ನು ರೂಪಿಸಲು ವಿನ್ಯಾಸಗೊಳಿಸಲಾದ ಎರಡು ವರ್ಷದ, ಪೂರ್ಣ ಸಮಯದ ಪಾವತಿಸಹಿತ ಕಾರ್ಯಕ್ರಮ.
ಅರ್ಹತೆ: ಎರಡು ವರ್ಷಗಳ ಪೂರ್ಣ ಸಮಯದ ಫೆಲೋಶಿಪ್‌ಗೆ ಬದ್ಧರಾಗಲು ಸಿದ್ಧರಿರುವ, ಸೋಷಿಯಲ್ ವರ್ಕ್, ಎಜುಕೇಶನ್ ಅಥವಾ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರುವ 20-30ರೊಳಗಿನ ವಯಸ್ಸಿನ ವ್ಯಕ್ತಿಗಳಿಗೆ ಮುಕ್ತವಾಗಿದೆ.
ಆರ್ಥಿಕ ಸಹಾಯ: ಮಾಸಿಕ ₹ 25,500
ಅರ್ಜಿ ಸಲ್ಲಿಸಲು ಕೊನೆ ದಿನ: 30-05-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/THBF5
ಯುನಿವರ್ಸಿಟಿ ಆಫ್ ಬಾತ್ ಗ್ರೇಟ್ ಸ್ಕಾಲರ್‌ಶಿಪ್, ಇಂಡಿಯಾ 2024
ವಿವರ: ಬ್ರಿಟಿಷ್ ಕೌನ್ಸಿಲ್‌ನ ಸ್ಟಡಿ ಯುಕೆ ಅಭಿಯಾನದ ಸಹಯೋಗದೊಂದಿಗೆ ಬಾತ್ ವಿಶ್ವವಿದ್ಯಾಲಯವು ನೀಡುವ ಅವಕಾಶವಾಗಿದೆ. ಭಾರತ ಸೇರಿ 15 ದೇಶಗಳ ವಿದ್ಯಾರ್ಥಿಗಳಿಗೆ ಯುಕೆಯಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಮುಂದುವರಿಸಲು ಹಣಕಾಸಿನ ನೆರವು ನೀಡಲಾಗುತ್ತದೆ.
ಅರ್ಹತೆ: ಬಾತ್ ವಿಶ್ವವಿದ್ಯಾಲಯದಲ್ಲಿ ಪೂರ್ಣ ಸಮಯದ, ಸ್ನಾತಕೋತ್ತರ ಕಲಿಕೆಯ ಮಾಸ್ಟರ್ಸ್ ಕೋರ್ಸ್‌ಗೆ ಅವಕಾಶ ಮತ್ತು ಮಾನ್ಯವಾದ ಪಾಸ್‌ಪೋರ್ಟ್ ಹೊಂದಿರುವ ಭಾರತೀಯ ನಾಗರಿಕರಿಗೆ ಮುಕ್ತವಾಗಿದೆ. ಬೋಧನಾ ಶುಲ್ಕದ ಉದ್ದೇಶಗಳಿಗಾಗಿ ಅಭ್ಯರ್ಥಿಗಳು ಅಂತರರಾಷ್ಟ್ರೀಯ ವಿದ್ಯಾರ್ಥಿಗಳೆಂದು ವರ್ಗೀಕರಿಸಲಾಗಿರಬೇಕು ಮತ್ತು ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರಬೇಕು.
ಆರ್ಥಿಕ ಸಹಾಯ: ವರ್ಷದ ಅಧ್ಯಯನಕ್ಕಾಗಿ £10,000 ಭಾಗಶಃ ಬೋಧನಾ ಶುಲ್ಕ
ಅರ್ಜಿ ಸಲ್ಲಿಸಲು ಕೊನೆ ದಿನ: 20-05-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/UBG01
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.