ಆರ್ಕಿಟೆಕ್ಚರ್‌ಗೆ ಇರುವ ಅವಕಾಶಗಳೇನು?
-ಹೆಸರು, ಊರು ತಿಳಿಸಿಲ್ಲ.
ಆರ್ಕಿಟೆಕ್ಚರ್‌ಗೆ ಇರುವ ಅವಕಾಶಗಳ ಬಗ್ಗೆ ತಿಳಿಸಿ.
ದೇಶದ ತ್ವರಿತವಾದ ಬೆಳವಣಿಗೆ ಮತ್ತು ಅಭಿವೃದ್ಧಿಯಿಂದ, ಆರ್ಕಿಟೆಕ್ಚರ್ ಕ್ಷೇತ್ರಕ್ಕೆ ಉತ್ತಮವಾದ ಬೇಡಿಕೆಯಿದೆ. ಸೃಜನಶೀಲತೆ, ಕಲ್ಪನಾ ಶಕ್ತಿ, ವಿನ್ಯಾಸದ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಯೋಜನೆಯ ನಿರ್ವಹಣೆ, ಸಂವಹನ, ಅಂತರ್-ವೈಯಕ್ತಿಕ ನೈಪುಣ್ಯ ಹಾಗೂ ಆರ್ಕಿಟೆಕ್ಚರ್ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಪಿಯುಸಿ ನಂತರ ಬ್ಯಾಚೆಲರ್ ಆರ್ಕಿಟೆಕ್ಚರ್ (ಬಿ.ಆರ್ಕ್) ಕೋರ್ಸ್ ಅನ್ನು ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ನಾಟಾ) ಪ್ರವೇಶ ಪರೀಕ್ಷೆಯ ಮೂಲಕ ಮಾಡಬಹುದು.
ಈ ಕೋರ್ಸ್ ನಂತರ ಆರ್ಕಿಟೆಕ್ಟ್, ಅರ್ಬನ್ ಪ್ಲಾನಿಂಗ್, ಇಂಟಿರಿಯರ್ ಡಿಸೈನಿಂಗ್, ಲ್ಯಾಂಡ್‌ಸ್ಕೇಪ್ ಡಿಸೈನಿಂಗ್, ಪ್ರಾಪರ್ಟಿ ಡೆವಲಪ್‌ಮೆಂಟ್ ಮುಂತಾದ ಕ್ಷೇತ್ರಗಳ ಪ್ರಮುಖ ಸಂಸ್ಥೆಗಳಲ್ಲಿ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಉನ್ನತ ಶ್ರೇಣಿಯ ಕಾಲೇಜುಗಳಲ್ಲಿ ಕ್ಯಾಂಪಸ್ ನೇರ ನೇಮಕಾತಿಯ ಸೌಲಭ್ಯವಿರುತ್ತದೆ. ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ವಲಯದಲ್ಲಿಯೂ ಅವಕಾಶಗಳಿವೆ. ಈ ಕ್ಷೇತ್ರದಲ್ಲಿ ಅನುಭವವನ್ನು ಗಳಿಸಿದ ನಂತರ ಸ್ವಂತವಾಗಿ ಪ್ರಾಕ್ಟೀಸ್ ಮಾಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.