ಬೆಂಗಳೂರು: ಬ್ರಿಟನ್ ಸರ್ಕಾರವು ಜಾಗತಿಕಮಟ್ಟದ ತನ್ನ ಪ್ರಮುಖ ಯೋಜನೆ ‘ಶಿವ್ನಿಂಗ್ ವಿದ್ಯಾರ್ಥಿ ವೇತನ ಮತ್ತು ಶಿಷ್ಯ ವೇತನ’ದ 2024–25ನೇ ಸಾಲಿನ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ಶುದ್ಧ ಇಂಧನ, ಹಣಕಾಸು ಸೇವೆಗಳು, ಸೈಬರ್ ಭದ್ರತೆ, ತಂತ್ರಜ್ಞಾನ, ಯಾಂತ್ರಿಕ ಬುದ್ಧಿಮತ್ತೆ, ನಾವಿನ್ಯ, ನಗರಾಭಿವೃದ್ಧಿ, ಲಿಂಗಸಮಾನತೆ, ಶಿಕ್ಷಣ, ಸಾರ್ವಜನಿಕ ನೀತಿ, ಕಾನೂನು, ವಿದೇಶಾಂಗ ನೀತಿ, ಅಭಿವೃದ್ಧಿ, ಅಂತರರಾಷ್ಟ್ರೀಯ ಸಂಬಂಧಗಳು, ಮಾಧ್ಯಮ, ಬಿಕ್ಕಟ್ಟು, ರಕ್ಷಣಾ ಅಧ್ಯಯನಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಲು ಈ ಯೋಜನೆ ಅನುವು ಮಾಡಿಕೊಡಲಿದೆ.
ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿನ ವೃತ್ತಿಪರರು, ಅಧಿಕಾರಶಾಹಿಗಳು, ಮಾಧ್ಯಮ ಪ್ರತಿನಿಧಿಗಳು, ಶಿಕ್ಷಣ ತಜ್ಞರು, ವಿಜ್ಞಾನಿಗಳು, ಉದ್ಯಮಿಗಳು, ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ವಯೋಮಿತಿಯ ನಿರ್ಬಂಧವಿಲ್ಲ.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವವರಿಗೆ ಯಾವುದೇ ಕೆಲಸದಲ್ಲಿ ಎರಡು ವರ್ಷದ ಅನುಭವದ ಅಗತ್ಯವಿದ್ದು, ಇವರು ಬ್ರಿಟನ್ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದು. ಶಿಷ್ಯ ವೇತನಕ್ಕೆ ಆಯ್ಕೆಯಾಗುವ ವೃತ್ತಿಪರರಿಗೆ ಕೆಲಸದಲ್ಲಿ 7 ವರ್ಷಗಳ ಅನುಭವದ ಅವಶ್ಯಕತೆಯಿದೆ. ನಿರ್ದಿಷ್ಟ ಕೆಲಸದ ಕ್ಷೇತ್ರದಲ್ಲಿ ತಮ್ಮ ಜ್ಞಾನ ಮತ್ತು ಪರಿಣತಿ ವಿಸ್ತರಿಸಲು ಬಯಸುತ್ತಿರುವ ವೃತ್ತಿಪರರು ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ 8ರಿಂದ11 ವಾರಗಳ ಅವಧಿಯ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಅವಕಾಶ ಸಿಗಲಿದೆ.
ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ https://www.chevening.org/scholarship/india/ ಭೇಟಿ ನೀಡಬಹುದು ಎಂದು ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಬ್ರಿಟನ್ ಡೆಪ್ಯುಟಿ ಹೈಕಮಿಷನ್ ಅವರ ಆರ್ಥಿಕ, ರಾಜಕೀಯ ಸಲಹೆಗಾರ ಮಂಜುನಾಥ್ ಕೆ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.