ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 0:30 IST
Last Updated 23 ಸೆಪ್ಟೆಂಬರ್ 2024, 0:30 IST
   
ಡಿ-ನೋಟಿಫೈಡ್ ಟ್ರೈಬ್ಸ್ (ಡಿಎನ್‌ಟಿ), ಅಲೆಮಾರಿ ಬುಡಕಟ್ಟುಗಳು (ಎನ್‌ಟಿ) ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳಿಗೆ (ಎಸ್‌ಎನ್‌ಟಿ) ಸೇರಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ಗುಣಮಟ್ಟದ ತರಬೇತಿ ನೀಡಲಾಗುವುದು. 

ಅರ್ಹತೆ: ಡಿ-ನೋಟಿಫೈಡ್, ಅಲೆಮಾರಿ ಮತ್ತು ಅರೆ-ಅಲೆಮಾರಿ ಬುಡಕಟ್ಟುಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಮುಕ್ತ.

12ನೇ ತರಗತಿಯ ನಂತರ ಜೆಇಇ, ನೀಟ್, ಕ್ಲಾಟ್, ಎನ್‌ಡಿಎ, ನಾನ್-ಕಮಿಷನ್ಡ್ ಮಿಲಿಟರಿ ರ್‍ಯಾಂಕ್ಸ್‌, ಸಿಎ-ಸಿಪಿಟಿ, ಬ್ಯಾಂಕಿಂಗ್, ಇನ್ಶೂರೆನ್ಸ್, ಪಿಎಸ್‌ಯು, ಎಸ್‌ಎಸ್‌ಸಿ, ಆರ್‌ಆರ್‌ಬಿ, ರಾಜ್ಯ ಮತ್ತು ಕೇಂದ್ರೀಯ ಪೊಲೀಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆದುಕೊಳ್ಳಲು ಆಸಕ್ತರಾಗಿರಬೇಕು. ‌

ಕುಟುಂಬದ ವಾರ್ಷಿಕ ಆದಾಯವು ₹2,50,000 ಅಥವಾ ಕಡಿಮೆ ಇರಬೇಕು. 12ನೇ ತರಗತಿ ಕಲಿಯುತ್ತಿರಬೇಕು ಅಥವಾ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. 12ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವಷ್ಟು ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದುಕೊಂಡಿರಬೇಕು (ಅಭ್ಯರ್ಥಿಯು ಎದುರಿಸಲು ಬಯಸುವ ಸ್ಪರ್ಧಾರ್ತ್ಮಕ ಪರೀಕ್ಷೆಯನ್ನು ಅವಲಂಬಿಸಿ) ಆದರೆ ಪ್ರಸ್ತುತ 12ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಕನಿಷ್ಠ ಶೇ 50 ಅಂಕಗಳನ್ನು ಪಡೆದಿರಬೇಕು. ಕೇಂದ್ರ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಇತರ ಯಾವುದೇ ಯೋಜನೆಗಳಿಂದ ಈ ರೀತಿಯ ಪ್ರಯೋಜನಗಳನ್ನು (ಕೋಚಿಂಗ್ ತರಗತಿಗಳ) ಪಡೆದುಕೊಂಡಿರಬಾರದು.

ADVERTISEMENT

 ಆರ್ಥಿಕ ಸಹಾಯ:  ₹1,20,000ದ ವರೆಗಿನ ಕೋಚಿಂಗ್ ಶುಲ್ಕ ಮತ್ತು  ಹೆಚ್ಚುವರಿ ಪ್ರಯೋಜನಗಳು.

ಅರ್ಜಿ ಸಲ್ಲಿಸಲು ಕೊನೆ ದಿನ:  13-10-2024

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಮಾಹಿತಿಗೆ:  Short Url: www.b4s.in/praja/FCDNT1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.