ADVERTISEMENT

ಸಿಯುಇಟಿ–ಪಿಜಿ ಫಲಿತಾಂಶ ಪ್ರಕಟ

ಪಿಟಿಐ
Published 26 ಸೆಪ್ಟೆಂಬರ್ 2022, 14:22 IST
Last Updated 26 ಸೆಪ್ಟೆಂಬರ್ 2022, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ–ಪಿಜಿ) ಫಲಿತಾಂಶವು ಸೋಮವಾರ ಪ್ರಕಟವಾಗಿದೆ.

‘ಬಿಎಚ್‌ಯು ವಿಶ್ವವಿದ್ಯಾಲಯದಿಂದ 3.5 ಲಕ್ಷ ಅಭ್ಯರ್ಥಿಗಳು, ಜೆಎನ್‌ಯುನಿಂದ 2.3 ಲಕ್ಷ ಅಭ್ಯರ್ಥಿಗಳು ಸೇರಿ ಒಟ್ಟು 6.07 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಗಿತ್ತು ಮತ್ತು ಪರೀಕ್ಷೆಯಲ್ಲಿ ಬಹುಆಯ್ಕೆ ಪ್ರಶ್ನೆಗಳನ್ನು ಕೇಳಲಾಗಿತ್ತು’ ಎಂದು ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿಯ ಹಿರಿಯ ನಿರ್ದೇಶಕ (ಪರೀಕ್ಷೆ) ಸಾಧನಾ ಪರಾಶರ್‌ ಹೇಳಿದರು.

ಸಿಯುಇಟಿ–ಯುಜಿ ಅಂತೆಯೇ ಇಲ್ಲಿಯೂ ವಿಷಯಾವಾರು ಅತ್ಯಧಿಕ ಅಂಕ ಪಡೆದವರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಿಯುಇಟಿ–ಪಿಜಿ ಅಡಿಯಲ್ಲಿ ಪ್ರವೇಶಾತಿ ನಡೆಸಲು ಕೇಂದ್ರ, ರಾಜ್ಯ ಮತ್ತು ಖಾಸಗಿ ಸೇರಿ ಒಟ್ಟು 66 ವಿಶ್ವವಿದ್ಯಾಲಯಗಳು ನಿರ್ಧರಿಸಿವೆ. ಆದ್ದರಿಂದ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಈ ವಿಶ್ವವಿದ್ಯಾಲಯಗಳಿಗೆ ವಿಶ್ವವಿದ್ಯಾಲಯಗಳ ಅನುದಾನ ಆಯೋಗವು (ಯುಜಿಸಿ) ಸೂಚಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.