ADVERTISEMENT

ವಿದ್ಯಾರ್ಥಿ ವೇತನ: ಅದಾನಿ ಗ್ಯಾನ್, ರಿಲಾಯನ್ಸ್ ಫೌಂಡೇಷನ್‌, ಆದಿತ್ಯ ಬಿರ್ಲಾ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 0:30 IST
Last Updated 30 ಸೆಪ್ಟೆಂಬರ್ 2024, 0:30 IST
<div class="paragraphs"><p>ವಿದ್ಯಾರ್ಥಿ ವೇತನ ಕೈಪಿಡಿ</p></div>

ವಿದ್ಯಾರ್ಥಿ ವೇತನ ಕೈಪಿಡಿ

   

(ಪ್ರಾತಿನಿಧಿಕ ಚಿತ್ರ)

ಅದಾನಿ ಗ್ಯಾನ್

ADVERTISEMENT


ಅದಾನಿ ಗ್ರೂಪ್ ಈ ವಿದ್ಯಾರ್ಥಿವೇತನವನ್ನು ಒದಗಿಸುತ್ತಿದೆ. 

ಅರ್ಹತೆ:  ಬಿಎ ಎಕನಾಮಿಕ್ಸ್, ಬಿ.ಎಸ್‌ಸಿ ಎಕನಾಮಿಕ್ಸ್, ಬಿ.ಇಸಿ, ಬಿ.ಇ/ಬಿ.ಟೆಕ್., ಇಂಟಿಗ್ರೇಟೆಡ್ 5-ಇಯರ್ ಡ್ಯುವಲ್ ಡಿಗ್ರಿ, ಎಂ.ಟೆಕ್, ಎಂಬಿಬಿಎಸ್ ಮತ್ತು ಎಲ್‌ಎಲ್‌ಬಿ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.

ಅರ್ಜಿದಾರರು  ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಗಳ ಮೆರಿಟ್ ಶ್ರೇಣಿಯನ್ನು ಆಧರಿಸಿರಬೇಕು. ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯವು ₹ 4,50,000ವನ್ನು ಮೀರಬಾರದು.

ಆರ್ಥಿಕ ಸಹಾಯ:  ವಾರ್ಷಿಕ ₹ 3,50,000ವರೆಗೆ (ಬೋಧನಾ ಶುಲ್ಕ)
ಅರ್ಜಿ ಸಲ್ಲಿಸಲು ಕೊನೆ ದಿನ: 7-10-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/AGSP5

****

ರಿಲಾಯನ್ಸ್ ಫೌಂಡೇಷನ್‌

ವಿಭಿನ್ನವಾಗಿ ಯೋಚಿಸುವ, ನಾಯಕತ್ವ ಹೊಂದಿರುವ ಅಭ್ಯರ್ಥಿಗಳಿಗೆ ರಿಲಾಯನ್ಸ್ ಫೌಂಡೇಷನ್‌ ಪೋಸ್ಟ್‌ಗ್ರಾಜುಯೇಟ್ ಸ್ಕಾಲರ್‌ಷಿಪ್‌ ನೀಡಲಿದೆ. 


ಅರ್ಹತೆ: ಎಂಜಿನಿಯರಿಂಗ್, ಟೆಕ್ನಾಲಜಿ, ಎನರ್ಜಿ ಅಂಡ್ ಲೈಫ್-ಸೈನ್ಸಸ್‌ಗಳಿಂದ ಆಯ್ದ ಫ್ಯೂಚರ್-ರೆಡಿ ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರುವ ಮೊದಲ ವರ್ಷದ ಪೂರ್ಣಾವಧಿಯ ಸ್ನಾತಕೋತ್ತರ ಪದವಿಗಳಿಗೆ ದಾಖಲಾಗಿರುವಂತಹ ವಿದ್ಯಾರ್ಥಿಗಳು. ಗೇಟ್‌ ಪರೀಕ್ಷೆಯಲ್ಲಿ 550-1000 ಗಳಿಸಿರಬೇಕು. ಅಥವಾ ತಮ್ಮ ಪದವಿಪೂರ್ವ ಸಿಜಿಪಿಎಯಲ್ಲಿ 7.5 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು (ಅಥವಾ ಸಿಜಿಪಿಎಗೆ ಸಾಮಾನ್ಯೀಕರಿಸಲಾದ %) [ವಿದ್ಯಾರ್ಥಿಗಳು ಗೇಟ್ ಪರೀಕ್ಷೆ ಬರೆದಿರದಿದ್ದರೆ].
 

ಆರ್ಥಿಕ ಸಹಾಯ:  ಪದವಿಯ ಅವಧಿಯಲ್ಲಿ ₹ 6,00,000 

ಅರ್ಜಿ ಸಲ್ಲಿಸಲು ಕೊನೆ ದಿನ: 6-10-2024

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/RFS10

****

ಎಸ್‌ಬಿಐಎಫ್ ಆಶಾ ಸ್ಕಾಲರ್‌ಷಿಪ್‌

ಎಸ್‌ಬಿಐ ಫೌಂಡೇಷನ್‌ ಉಪಕ್ರಮವಾಗಿದ್ದು,  ಭಾರತದ ಅತಿದೊಡ್ಡ ವಿದ್ಯಾರ್ಥಿವೇತನ ಯೋಜನೆಗಳಲ್ಲಿ ಇದೂ ಒಂದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಿದೆ. 

ಅರ್ಹತೆ: 6 ರಿಂದ 12ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳು, ಅಗ್ರ 100 ಎನ್‌ಐಆರ್‌ಎಫ್ ವಿಶ್ವವಿದ್ಯಾಲಯಗಳು/ಕಾಲೇಜುಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಐಐಟಿಗಳ ವಿದ್ಯಾರ್ಥಿಗಳು ಮತ್ತು ಐಐಎಂಗಳ ಎಂಬಿಎ/ಪಿಜಿಡಿಎಂ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 75 ಅಂಕಗಳನ್ನು ಗಳಿಸಿರಬೇಕು. ಅವರ ಕುಟುಂಬದ ಒಟ್ಟು ವಾರ್ಷಿಕ ಆದಾಯವು ₹ 6 ಲಕ್ಷದವರೆಗೆ ಇರಬೇಕು (6-12ನೇ ತರಗತಿಯ ವಿದ್ಯಾರ್ಥಿಗಳಾದರೆ ₹ 3 ಲಕ್ಷದವರೆಗೆ).


ಆರ್ಥಿಕ ಸಹಾಯ: 6 ರಿಂದ 12ನೇ ತರಗತಿಯವರೆಗೆ: ತಲಾ ₹ 15,000
ಯುಜಿ ವಿದ್ಯಾರ್ಥಿಗಳು: ₹ 50,000ದ ವರೆಗೆ
ಪಿಜಿ ವಿದ್ಯಾರ್ಥಿಗಳು: ₹ 70,000ದ ವರೆಗೆ
ಐಐಟಿಗಳ ಯುಜಿ ವಿದ್ಯಾರ್ಥಿಗಳು: ₹ 2,00,000ದ ವರೆಗೆ
ಐಐಎಂಗಳ ಎಂಬಿಎ ವಿದ್ಯಾರ್ಥಿಗಳು: ₹7,50,000ದ ವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ:  01-10-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/SBIFS7

****

ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಷಿಪ್‌

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ  ಹಣಕಾಸಿನ ನೆರವು ಮತ್ತು ಮಾರ್ಗದರ್ಶನ ನೀಡಲಿದೆ. 
ಅರ್ಹತೆ:  9 ರಿಂದ 12 ನೇ ತರಗತಿ, ಯಾವುದೇ ಸಾಮಾನ್ಯ ಪದವಿ ಕೋರ್ಸ್‌ಗಳು, ಯಾವುದೇ 3-ವರ್ಷದ ವೃತ್ತಿಪರ ಪದವಿ ಕೋರ್ಸ್‌ಗಳು ಅಥವಾ ಭಾರತದ ಮಾನ್ಯತೆ ಪಡೆದ ಕಾಲೇಜುಗಳು/ವಿಶ್ವವಿದ್ಯಾಲಯಗಳಿಂದ ಯಾವುದೇ 4-ವರ್ಷದ ವೃತ್ತಿಪರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವಂಥ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.


ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಗಳಿಸಿರಬೇಕು.
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ₹  6 ಲಕ್ಷವನ್ನು ಮೀರಬಾರದು.
ಭಾರತದಾದ್ಯಂತದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.


ಆರ್ಥಿಕ ಸಹಾಯ: ₹ 60,000ದ ವರೆಗೆ (ಒಂದು ಬಾರಿ)
ಅರ್ಜಿ ಸಲ್ಲಿಸಲು ಕೊನೆ ದಿನ:  15-10-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/ABCC9 

****

ಮುಸ್ಕಾನ್ ಸ್ಕಾಲರ್‌ಷಿಪ್‌ 

ಚಾಲಕರು (ಎಲ್‌ಎಂವಿ/ಎಚ್‌ಎಂವಿ), ಮೆಕ್ಯಾನಿಕ್ಸ್ ಮತ್ತು ಆರ್ಥಿಕವಾಗಿ ಹಿಂದುಳಿದ ವಿಭಾಗದ (ಇಡಬಲ್ಯೂಎಸ್) ವರ್ಗದ ವ್ಯಕ್ತಿಗಳ ಮಕ್ಕಳಿಗೆ ಹಣಕಾಸಿನ ನೆರವು ನೀಡಲಿದೆ. 


ಅರ್ಹತೆ: 9 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.  ಚಾಲಕರು (ಎಲ್‌ಎಂವಿ/ಎಚ್ಎಂವಿ), ಮೆಕ್ಯಾನಿಕ್ಸ್ ಮತ್ತು ಆರ್ಥಿಕವಾಗಿ ದುರ್ಬಲ ವಿಭಾಗಕ್ಕೆ ಸೇರಿದ (ಇಡಬಲ್ಯೂಎಸ್) ವರ್ಗದ ಮಕ್ಕಳಿಗೆ ಆದ್ಯತೆ.  ಅರ್ಹತೆಗಾಗಿ ಅರ್ಜಿದಾರರು ತಮ್ಮ ಹಿಂದಿನ ತರಗತಿಯಲ್ಲಿ ಶೇ  60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು. ಎಲ್ಲಾ ಮೂಲಗಳಿಂದ ಕುಟುಂಬದ ಒಟ್ಟು ಆದಾಯವು ವಾರ್ಷಿಕ ₹ 8 ಲಕ್ಷವನ್ನು ಮೀರಬಾರದು.


ಆರ್ಥಿಕ ಸಹಾಯ: ₹  12,000ದ ವರೆಗಿನ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನದ ಬೆಂಬಲ
ಅರ್ಜಿ ಸಲ್ಲಿಸಲು ಕೊನೆ ದಿನ:  10-10-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/MKSP1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.