ADVERTISEMENT

ಆ್ಯಪ್ ಅಂಗಳ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:45 IST
Last Updated 4 ಜೂನ್ 2019, 19:45 IST
   

ಕ್ವಿಜ್‌ಲೆಟ್‌
ಈ ಆ್ಯಪ್‌ನ ಮೂಲಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠಕ್ಕೆ ಸಂಬಂಧಿಸಿದ ಪರಿಕರಗಳನ್ನು ಒದಗಿಸಬಹುದು. ತಾವು ಪಾಠ ಮಾಡುವ ವಿಷಯದ ಆಧಾರದ ಮೇಲೆ ಪ್ರಶ್ನೆಗಳನ್ನು ಜೋಡಿಸಬಹುದು. ವಿದ್ಯಾರ್ಥಿಗಳಿಗೆ ಅವಶ್ಯಕವಾಗಿರುವುದನ್ನಷ್ಟೇ ಸೇರಿಸುವುದರಿಂದ ಸಮಯವೂ ಉಳಿತಾಯವಾಗುತ್ತದೆ ಜೊತೆಗೆ ವಿದ್ಯಾರ್ಥಿಗಳಿಗೆ ಓದಲೂ ಸುಲಭ. ಆ್ಯಪ್‌ ಸಹಾಯದಿಂದ ವಿದ್ಯಾರ್ಥಿಗಳು ಮನೆ ಹಾಗೂ ಶಾಲೆಯಲ್ಲಿ ಕ್ವಿಜ್‌ಲೆಟ್ ಸ್ಟಡಿ ಗೇಮ್‌ಗಳನ್ನು ಆಡುವ ಮೂಲಕ ವಿಷಯದ ಮೇಲಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು.

ಕ್ವಿಜ್‌ಲೆಟ್‌ ಮೂಲಕ ಯಾವುದೇ ವಿಷಯದ ಬಗೆಗಿನ ಸಂಪನ್ಮೂಲಗಳನ್ನು ಹುಡುಕಬಹುದು. ಜೊತೆಗೆ ಫ್ಲ್ಯಾಶ್‌ಕಾರ್ಡ್‌, ಆಟಗಳು ಹಾಗೂ ಚಿತ್ರಗಳು ಮುಂತಾದವುಗಳನ್ನು ಬಳಸಿ ಮನರಂಜನೆ ಹಾಗೂ ಸಂವಾದದ ಮೂಲಕ ಪಾಠವನ್ನು ಪುನರಾವರ್ತನೆ ಮಾಡಬಹುದು. ಇತಿಹಾಸ, ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಹೊಸ ಹೊಸ ಅಧ್ಯಯನದ ವಿಷಯಗಳನ್ನೂ ಇದರಲ್ಲಿ ತಿಳಿದುಕೊಳ್ಳಬಹುದು.

ನ್ಯೂಸ್ ಓ ಮ್ಯಾಟಿಕ್ ಎಜು
ಇದು ವಿದ್ಯಾರ್ಥಿಗಳಿಗಾಗಿಯೇ ಪ್ರಕಟಗೊಂಡ ಮೊದಲ ದಿನಪತ್ರಿಕೆ ಆಧಾರಿತ ಆ್ಯಪ್‌. ಇದರ ಮೂಲಕ ವಿದ್ಯಾರ್ಥಿಗಳು ತರಗತಿಯಲ್ಲಿ ಕಾಲ್ಪನಿಕ ಅನುಭವವನ್ನು ಪಡೆಯುವ ಜೊತೆಗೆ ಓದಿನ ಪರಿಕರಗಳನ್ನು ಪಡೆಯಬಹುದು. ಇದು ಸಂಪಾದಕೀಯ ಹಾಗೂ ತಂತ್ರಜ್ಞಾನ ವಿಷಯಗಳನ್ನು ಒಳಗೊಂಡಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಹೊಸ ಹೊಸ ವಿಷಯಗಳನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರಾಗುವುದು ಹೇಗೆ ಎಂಬುದರ ಕುರಿತು ತಿಳಿಸಲಾಗುತ್ತದೆ. ಇದೊಂದು ಯುವ ಓದುಗರನ್ನು ಸೃಷ್ಟಿಸುವ ಆ್ಯಪ್ ಎಂದೂ ಹೇಳಬಹುದು.

ADVERTISEMENT

1000ಕ್ಕೂ ಅಧಿಕ ಶಾಲೆಗಳಲ್ಲಿ ನ್ಯೂಸ್ ಓ ಮ್ಯಾಟಿಕ್ ಆ್ಯಪ್ ಬಳಸುತ್ತಿದ್ದು ಇದರಲ್ಲಿ ಸಮಾಜ, ಭೂಗೋಳ, ವಿಜ್ಞಾನ ಹಾಗೂ ಇನ್ನಿತರ ವಿಷಯಗಳ ಬಗ್ಗೆ ವಿಸ್ತಾರವಾದ ಮಾಹಿತಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.