ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಎಎಸ್‌ಗೆ ತಯಾರಿ ಹೇಗಿರಬೇಕು?

ಪ್ರದೀಪ್‌ ಕುಮಾರ್‌ ವಿ
Published 23 ಸೆಪ್ಟೆಂಬರ್ 2024, 0:30 IST
Last Updated 23 ಸೆಪ್ಟೆಂಬರ್ 2024, 0:30 IST
   
ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಐಎಎಸ್‌ಗೆ ತಯಾರಿ ಹೇಗಿರಬೇಕು?

1. ನಾನು ಬಿಬಿಎ ಮಾಡುತ್ತಿದ್ದು ಐಎಎಸ್ ಮಾಡುವಾಸೆಯಿದೆ. ಮಾರ್ಗದರ್ಶನ ನೀಡಿ.


ಹೆಸರು, ಊರು ತಿಳಿಸಿಲ್ಲ.


ADVERTISEMENT

ಯುಪಿಎಸ್‌ಸಿ ಕಠಿಣವಾದ ಸ್ಪರ್ಧಾತ್ಮಕ ಪರೀಕ್ಷೆ. ಈ ಪರೀಕ್ಷೆಯ ಯಶಸ್ಸಿಗೆ ಸೂಕ್ತವಾದ ಕಾರ್ಯತಂತ್ರ, ಸಾಕಷ್ಟು ಪರಿಶ್ರಮ ಹಾಗೂ ಏಕಾಗ್ರತೆಯಿದ್ದರೆ ಯಾರು ಬೇಕಾದರೂ ಐಎಸ್ ಅಧಿಕಾರಿಯಾಗಬಹುದು. ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಬಹು ಆಯ್ಕೆ ಮಾದರಿಯಾಗಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಎರಡು ಐಚ್ಛಿಕ ವಿಷಯಗಳೂ ಸೇರಿದಂತೆ 250 ಅಂಕಗಳ ಏಳು ಪತ್ರಿಕೆಗಳಿರುತ್ತವೆ. ಇದಾದ ನಂತರ, ಸಂದರ್ಶನದ ಮೂಲಕ ವ್ಯಕ್ತಿತ್ವ ಪರೀಕ್ಷೆ ಮಾಡಿ ಅಂತಿಮ ಆಯ್ಕೆಯಾಗುತ್ತದೆ.

ಐಚ್ಛಿಕ ವಿಷಯ ಯಾವುದಿದ್ದರೂ ಪಠ್ಯಕ್ರಮವನ್ನು ಅರಿತು, ಪುಸ್ತಕಗಳು ಮತ್ತು ಅಧ್ಯಯನದ ಸಾಮಗ್ರಿಯನ್ನು ಸಿದ್ಧ ಪಡಿಸಿಕೊಳ್ಳಬೇಕು. ಪ್ರಮುಖವಾಗಿ, ಓದುವಿಕೆ ಪರಿಣಾಮಕಾರಿಯಾಗಿರಬೇಕು.

ಐಚ್ಛಿಕ ವಿಷಯದ ಅನುಗುಣವಾಗಿ ಪುಸ್ತಕಗಳನ್ನು ಖರೀದಿಸಿ ಸ್ವತಂತ್ರವಾಗಿ ತಯಾರಾಗಬಹುದು ಅಥವಾ ಹೆಚ್ಚಿನ ಮಾರ್ಗದರ್ಶನಕ್ಕಾಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್ ಸೇರಬಹುದು. ಈ ವೃತ್ತಿಯಲ್ಲಿ ಯಶಸ್ಸನ್ನು ಗಳಿಸಲು, ಆಡಳಿತಾತ್ಮಕ ವಿಷಯಗಳ ಕುರಿತ ಜ್ಞಾನ ಮತ್ತು ಕೌಶಲಗಳ ಜೊತೆಗೆ ಸಕಾರಾತ್ಮಕ ಆಲೋಚನೆ, ನಿಷ್ಠೆ, ಪ್ರಾಮಾಣಿಕತೆ, ಸ್ವಯಂಪ್ರೇರಣೆ ಮತ್ತು ಆತ್ಮವಿಶ್ವಾಸವಿರಬೇಕು. ಪರಿಣಾಮಕಾರಿ ಅಧ್ಯಯನ ಮಾಡುವ ಬಗ್ಗೆ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=3PzmKRaJHmk


2. ಸರ್, ನಾನು ಕಳೆದ ವರ್ಷ ಬಿಟೆಕ್ (ಮೆಕ್ಯಾನಿಕಲ್) ಮಾಡಿರುತ್ತೇನೆ. ಆದರೆ, ಈವರೆಗೆ ಯಾವುದೇ ಕೆಲಸ ಸಿಕ್ಕಿಲ್ಲ. ಸಂದರ್ಶನವನ್ನು ಎದುರಿಸುವುದು ಹೇಗೆ?


ಹೆಸರು, ಊರು ತಿಳಿಸಿಲ್ಲ.

ಮೊದಲಿಗೆ, ಎಂಜಿನಿಯರಿಂಗ್ ಮಾಡಿದ ನಂತರವೂ ಉತ್ತಮ ಉದ್ಯೋಗ ಸಿಗದಿರಲು ಕಾರಣಗಳೇನು ಎಂದು ಮೌಲ್ಯಮಾಪನ ಮಾಡಬೇಕು. ಸಾಮಾನ್ಯವಾಗಿ, ಉದ್ಯೋಗದಲ್ಲಿ ಯಶಸ್ವಿಯಾಗಲು ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಪ್ರಾಥಮಿಕ ಮತ್ತು ವೃತ್ತಿ ಸಂಬಂಧಿತ ಕೌಶಲಗಳ ಅಗತ್ಯವಿರುತ್ತದೆ. ಉದ್ಯೋಗದ ಸಂದರ್ಶನಗಳಲ್ಲಿ ಇವುಗಳು ಅಭ್ಯರ್ಥಿಗಳಲ್ಲಿವೆಯೇ ಎಂದು ಪರೀಕ್ಷಿಸಲಾಗುತ್ತದೆ. ಉದಾಹರಣೆಗೆ, ಪ್ರಾಥಮಿಕ ಕೌಶಲಗಳಾದ ಸಮಯದ ನಿರ್ವಹಣೆ, ಸಂವಹನ ಕೌಶಲ, ಅಂತರ್-ವೈಯಕ್ತಿಕ ಕೌಶಲ ಮತ್ತು ನಾಯಕತ್ವದ ಕೌಶಲಗಳು ಯಾವುದೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ. ಹಾಗೂ, ವೃತ್ತಿ ಸಂಬಂಧಿತ ಕೌಶಲಗಳಾದ ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ವಿಶ್ಲೇಷಾತ್ಮಕ ಕೌಶಲ ಇತ್ಯಾದಿ ಕೌಶಲಗಳೂ ಎಂಜಿನಿಯರಿಂಗ್ ಉದ್ಯೋಗದ ಆಕಾಂಕ್ಷಿಗಳಲ್ಲಿರಬೇಕು.ಸಂದರ್ಶನಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=T_z3ngIeyWk

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.