ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ ಕೋರ್ಸ್‌ನಲ್ಲಿ ಯಾವುದು ಉತ್ತಮ?

ಪ್ರದೀಪ್‌ ಕುಮಾರ್‌ ವಿ
Published 1 ಜನವರಿ 2024, 1:00 IST
Last Updated 1 ಜನವರಿ 2024, 1:00 IST
<div class="paragraphs"><p>ಪ್ರದೀಪ್‌ ಕುಮಾರ್‌. ವಿ</p></div>

ಪ್ರದೀಪ್‌ ಕುಮಾರ್‌. ವಿ

   

1. ನಾನು ಬಿ.ಇ (ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ) ಮುಗಿಸಿ ಎಂಬಿಎ ಮಾಡ ಬಯಸಿದ್ದೇನೆ. ನನ್ನ ವಿದ್ಯಾರ್ಹತೆಯಂತೆ, ಬದುಕಿನಲ್ಲಿ ಉತ್ತಮ ಸ್ಥಾನ ಗಳಿಸಲು ಯಾವ ಎಂಬಿಎ ಕೋರ್ಸ್ ಮಾಡಬಹುದೆಂದು ತಿಳಿಸಿ.
ಹೆಸರು, ಊರು ತಿಳಿಸಿಲ್ಲ.

ವೈವಿಧ್ಯಮಯ ಮತ್ತು ಬಹುಪಯೋಗಿ ಗುಣಲಕ್ಷಣಗಳಿಂದ ಅಸಂಖ್ಯಾತ ಉದ್ಯಮಗಳಲ್ಲಿ ಪಾಲಿಮರ್‌ಗಳ ಬಳಕೆಯಾಗುತ್ತಿದೆ. ಎಂಬಿಎ ಕೋರ್ಸಿನಲ್ಲಿ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಮೂಲತತ್ವಗಳ, ಮೌಲ್ಯಗಳ ಮನದಟ್ಟಾಗುತ್ತದೆ. ಈ ತತ್ವಗಳ ಆಧಾರದ ಮೇಲೆ, ನೀವು ವೃತ್ತಿ ಮತ್ತು ಖಾಸಗೀ ಜೀವನಗಳೆರಡರಲ್ಲೂ ಯಶಸ್ಸು ಸಾಧಿಸಬಹುದು. ಹಾಗಾಗಿ ನಮ್ಮ ಅಭಿಪ್ರಾಯದಂತೆ, ಬಿ.ಇ ನಂತರ ವೃತ್ತಿಪರ ಜೀವನವನ್ನು ರೂಪಿಸಿಕೊಳ್ಳಲು, ಎಂಬಿಎ ಉತ್ತಮ ಆಯ್ಕೆ.

ADVERTISEMENT

ಉತ್ಪಾದನೆ, ಮಾರುಕಟ್ಟೆಯ ನಿರ್ವಹಣೆ, ಮಾನವ ಸಂಪನ್ಮೂಲದ ನಿರ್ವಹಣೆ, ಲಾಜಿಸ್ಟಿಕ್ಸ್, ಹಣಕಾಸು ಮುಂತಾದ ವಿಭಾಗಗಳಲ್ಲಿ ಎಂಬಿಎ ಮಾಡಬಹುದು. ಹಾಗೂ, ಅನೇಕ ವಿಶ್ವವಿದ್ಯಾಲಯಗಳಲ್ಲಿ ಎಂಬಿಎ (ವೇಸ್ಟ್ ಮ್ಯಾನೇಜ್‌ಮೆಂಟ್ ಅಂಡ್ ಸೋಷಿಯಲ್ ಎಂಟರ್‌ಪ್ರೆನರ್‌ಷಿಪ್) ಕೋರ್ಸ್ ಲಭ್ಯವಿದೆ. ನನಗನಿಸುವಂತೆ ಎಂಬಿಎ (ಉತ್ಪಾದನೆ ಅಥವಾ ವೇಸ್ಟ್ ಮ್ಯಾನೇಜ್‌ಮೆಂಟ್ ಅಂಡ್ ಸೋಷಿಯಲ್ ಎಂಟರ್‌ಪ್ರೆನರ್‌ಷಿಪ್) ಮಾಡಬಹುದು.
ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/channel/UCH-ugIg9bBIyH5QQbn_JjIw2

ನಾನು 12ನೇ ತರಗತಿ (ವಾಣಿಜ್ಯ) ಓದುತ್ತಿದ್ದು, ಮುಂದೆ ಯಾವ ಆಯ್ಕೆ ಇದ್ದರೆ ಸೂಕ್ತ?

ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಕೋರ್ಸ್‌ಗಳೆಂದರೆ ಸಿಎ (ಫೌಂಡೇಷನ್ ಕೋರ್ಸ್ ಮುಖಾಂತರ), ಬಿಕಾಂ (ಜನರಲ್, ಹಾನರ್ಸ್, ಬ್ಯಾಂಕಿಂಗ್, ಫೈನಾನ್ಸ್, ಟೂರಿಸಮ್, ಪ್ರೊಫೆಷನಲ್, ಇಂಟರ್‌ನ್ಯಾಷನಲ್ ಫೈನಾನ್ಸ್ ಇತ್ಯಾದಿ), ಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯು, ಎಸಿಎಸ್, ಸಿಎಂಎ,  ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ.  ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ವೃತ್ತಿ ಯೋಜನೆಯ ಅನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=fuTaa5UjZCo

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.