ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಕೌಶಲವಿದ್ದಾಗ ಗೊಂದಲವಿರದು

ಪ್ರದೀಪ್‌ ಕುಮಾರ್‌ ವಿ
Published 3 ಜೂನ್ 2024, 1:05 IST
Last Updated 3 ಜೂನ್ 2024, 1:05 IST
<div class="paragraphs"><p>ಪ್ರದೀಪ್‌ ಕುಮಾರ್‌ ವಿ.</p></div>

ಪ್ರದೀಪ್‌ ಕುಮಾರ್‌ ವಿ.

   

ದ್ವಿತೀಯ ಪಿಯು ಮುಗಿಸಿ, ಬಿಟೆಕ್ (ಕಂಪ್ಯೂಟರ್ ಸೈನ್ಸ್) ಅಥವಾ ಆರ್ಕಿಟೆಕ್ಚರ್ ಮಾಡಬೇಕೆಂದುಕೊಂಡಿದ್ದೇನೆ. ಆದರೆ, ಇವೆರಡರ ನಡುವೆ ಆಯ್ಕೆ ಮಾಡುವುದು ಹೇಗೆ?
ಹೆಸರು, ಊರು ತಿಳಿಸಿಲ್ಲ.

ವೃತ್ತಿಜೀವನದಲ್ಲಿ ಪ್ರಗತಿ ಮತ್ತು ಯಶಸ್ಸನ್ನು ಸಾಧಿಸಲು, ಆಸಕ್ತಿ, ಅಭಿರುಚಿ ಮತ್ತು ವೃತ್ತಿ ಸಂಬಂಧಿತ ಕೌಶಲಗಳು ಅಗತ್ಯ.
ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಗಣಿತದಲ್ಲಿ ತಜ್ಞತೆ, ವಿಶ್ಲೇಷಾತ್ಮಕ ಕೌಶಲ, ಯೋಜನೆಯ ನಿರ್ವಹಣೆ, ತಾಂತ್ರಿಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲಗಳು ಅಗತ್ಯ. ಆದರೆ ಯಶಸ್ವಿ ಆರ್ಕಿಟೆಕ್ಟ್ ಆಗಲು, ಈ ಕೌಶಲಗಳ ಜೊತೆಗೆ ಈ ಕ್ಷೇತ್ರದಲ್ಲಿ ಅಭಿರುಚಿ, ಸೃಜನಶೀಲತೆ, ವಿನ್ಯಾಸದ ಆಸಕ್ತಿ ಬೇಕು. ಅಂತಿಮ ಆಯ್ಕೆಯ ಮುನ್ನ,  ಈ ಕೌಶಲಗಳಿವೆಯೇ ಎಂದು ವಿಶ್ಲೇಷಿಸಿ.  ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

ADVERTISEMENT
ವಿದ್ಯಾರ್ಥಿಗಳೇ, ನಿಮ್ಮ ಮುುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@ prajavani.co.inಕ್ಕೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.