ADVERTISEMENT

ತಜ್ಞರ ಉತ್ತರ: ಕಾಮರ್ಸ್‌ ಕ್ಷೇತ್ರದ ವಿದ್ಯಾರ್ಥಿಗಳ ಆಯ್ಕೆ ಹೇಗಿರಬೇಕು?

ವಿ.ಪ್ರದೀಪ್ ಕುಮಾರ್
Published 3 ಮಾರ್ಚ್ 2024, 22:57 IST
Last Updated 3 ಮಾರ್ಚ್ 2024, 22:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

1 ನಾನು ಕಳೆದ ವರ್ಷ ಬಿಕಾಂ ಮುಗಿಸಿದ್ದು ಈಗ ಮುಂದೇನು ಮಾಡುವುದೆಂಬ ಗೊಂದಲದಲ್ಲಿದ್ದೇನೆ. ಎಂಬಿಎ, ಎಲ್‌ಎಲ್‌ಬಿ, ಸಿಎ, ಎಸಿಎಸ್, ಸಿಎಫ್‌ಎ ಆಯ್ಕೆಗಳಲ್ಲಿ ಯಾವುದು ಉತ್ತಮ?

ಹೆಸರು, ಊರು ತಿಳಿಸಿಲ್ಲ

ADVERTISEMENT

ಈ ಎಲ್ಲಾ ಕೋರ್ಸ್ ಸಂಬಂಧಿತ ವೃತ್ತಿಗಳಿಗೂ ಬೇಡಿಕೆಯಿದೆ; ಆದರೆ, ನಿಮಗೆ ಯಾವ ವೃತ್ತಿ/ಕೋರ್ಸ್ ಸೂಕ್ತವೆಂದು ನಿರ್ಧರಿಸಬೇಕು. ಪ್ರತಿಭೆ, ಕೌಶಲಗಳನ್ನು ಗುರುತಿಸಿ, ಸ್ವಯಂ-ಮೌಲ್ಯಮಾಪನ ಮಾಡಬೇಕು. ವೈಯಕ್ತಿಕ/ಕುಟುಂಬದ ಮೌಲ್ಯಗಳು, ಸವಾಲುಗಳು, ಅಗತ್ಯಗಳನ್ನು ಗುರುತಿಸಿ, ಯಾವ ವೃತ್ತಿ ಸರಿಹೊಂದಬಹುದು ಎಂದು ಅಂದಾಜು ಮಾಡಿ, ದೀರ್ಘಾವಧಿಯಲ್ಲೂ ಆ ವೃತ್ತಿಗೆ ಬೇಡಿಕೆ ಇರುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ.

ವೃತ್ತಿಯ ಮತ್ತು ವೈಯಕ್ತಿಕ ಬದುಕಿನ ಧ್ಯೇಯಗಳನ್ನು ನಿಶ್ಚಯಿಸಿ, ಶಿಕ್ಷಣದ ಇನ್ನಿತರ ಹಂತಗಳ ಅವಶ್ಯಕತೆಗಳನ್ನು ತೀರ್ಮಾನಿಸಿ. ವೃತ್ತಿಯ ಅವಶ್ಯಕತೆಗಳಿಗೆ ತಕ್ಕಂತೆ ಅಲ್ಪಾವಧಿ ಮತ್ತು ದೀರ್ಘಾವಧಿ ಮೈಲಿಗಲ್ಲುಗಳೊಂದಿಗೆ, ವೃತ್ತಿ ಯೋಜನೆಯನ್ನು ರೂಪಿಸಿ, ಅನುಷ್ಠಾನ ಗೊಳಿಸಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://youtu.be/AwlDno1YduQ

2 ಸರ್, ನಾನು ಎರಡು ವರ್ಷಗಳ ಹಿಂದೆ ಪಿಯುಸಿ (ವಿಜ್ಞಾನ) ಮುಗಿಸಿದ್ದು, ಅನಾರೋಗ್ಯದಿಂದ ಬೇರೆ ಕೋರ್ಸ್ ಸೇರಲು ಆಗಲಿಲ್ಲ. ಈಗ, ಯಾವ ಕೋರ್ಸ್ ಮಾಡಬೇಕೆಂದು ತಿಳಿಯದಾಗಿದೆ. ಪದವಿಯ ನಂತರ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದೇನೆ. ಮೆಡಿಕಲ್/ಎಂಜಿನಿಯರಿಂಗ್ ಅಲ್ಲದೆ ಸುಲಭವಾಗಿ ಮಾಡಬಹುದಾದ ಕೋರ್ಸ್ ಬಗ್ಗೆ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ಪಿಯುಸಿ (ವಿಜ್ಞಾನ) ನಂತರ ಅಪಾರವಾದ ಕೋರ್ಸ್ ಆಯ್ಕೆಗಳಿವೆ. ಉದಾಹರಣೆಗೆ ಬಿ.ಎಸ್ಸಿ (ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಐಟಿ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ ಕೃಷಿ, ಪಶುಸಂಗೋಪನೆ, ಹೈನುಗಾರಿಕೆ, ಬಯೋಟೆಕ್ನಾಲಜಿ, ನರ್ಸಿಂಗ್, ಪ್ಯಾರಾಮೆಡಿಕಲ್, ಆಹಾರ ತಂತ್ರಜ್ಞಾನ, ಅರಣ್ಯವಿಜ್ಞಾನ, ಸೇರಿದಂತೆ 50ಕ್ಕೂ ಹೆಚ್ಚು ಆಯ್ಕೆಗಳು), ಬಿ.ಫಾರ್ಮಾ, ಬಿ.ಕಾಂ, ಬಿ.ಕಾಂ (ಹಾನರ್ಸ್), ಬಿಎ (ಹಲವಾರು ಆಯ್ಕೆಗಳು), ಬಿಎ (ಹಾನರ್ಸ್) ಬಿಸಿಎ, ಬಿಬಿಎ, ಬಿ.ಡಿಸೈನ್, ಸಿಎ, ಎಸಿಎಸ್, ಸಿಎಂಎ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ನಿಮಗೆ ಆಸಕ್ತಿ, ಅಭಿರುಚಿಯಿರುವ ಕೋರ್ಸ್ ಮಾಡುವುದು ಸುಲಭ. ಪಿಯುಸಿ ನಂತರದ ಕೋರ್ಸ್ ಆಯ್ಕೆಗಳ ಸಂಪೂರ್ಣ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://youtu.be/ChvTG9rg33A

3. ನನ್ನ ಮಗ 10ನೇ ತರಗತಿಯಲ್ಲಿ ಓದುತ್ತಿದ್ದು,  ಪಿಯು  (ವಾಣಿಜ್ಯ) ನಂತರ ಯಾವ ಕೋರ್ಸ್ ಮಾಡಬಹುದು? ಬಿಕಾಂ ಜೊತೆಗೆ ಸಿಎ ಮಾಡಬಹುದೇ?

ಹೆಸರು, ಊರು ತಿಳಿಸಿಲ್ಲ.

ಅಕೌಂಟೆನ್ಸಿ ಕ್ಷೇತ್ರದಲ್ಲಿ ಪ್ರತಿಭೆಯಿದ್ದಲ್ಲಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿ ಅತ್ಯುತ್ತಮ ಆಯ್ಕೆ. ಪಿಯುಸಿ ನಂತರ, ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್ ಮಾಡುವುದಕ್ಕೆ ಫೌಂಡೇಷನ್ ಕೋರ್ಸ್ ಮಾಡಬೇಕು. ಬಿ.ಕಾಂ (ಕನಿಷ್ಠ ಶೇ 55) ನಂತರ, ನೇರವಾಗಿ ಸಿಎ ಮಧ್ಯಂತರ ಕೋರ್ಸ್‌ಗೆ ಅರ್ಹತೆ ಸಿಗುತ್ತದೆ. ಕನಿಷ್ಠ 2 1/2 ವರ್ಷದ ಆರ್ಟಿಕಲ್‌ಶಿಪ್ ತರಬೇತಿಯ ನಂತರ ಸಿಎ ಅಂತಿಮ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು.
ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಇನ್ನಿತರ ಕೋರ್ಸ್ಗಳೆಂದರೆ ಬಿಕಾಂ (ಜನರಲ್, ಹಾನರ್ಸ್, ಬ್ಯಾಂಕಿಂಗ್, ಫೈನಾನ್ಸ್, ಟೂರಿಸಮ್, ಪ್ರೊಫೆಷನಲ್, ಇಂಟರ್‌ನ್ಯಾಷನಲ್ ಫೈನಾನ್ಸ್ ಇತ್ಯಾದಿ), ಬಿಬಿಎ, ಬಿಸಿಎ, ಬಿಎಸ್‌ಡಬ್ಲು÷್ಯ, ಎಸಿಎಸ್, ಸಿಎಂಎ, 5 ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:  https://youtu.be/fuTaa5UjZCo

4.  ಬಿ.ಎಸ್ಸಿ (ಸಸ್ಯವಿಜ್ಞಾನ, ಜಿಯಾಲಜಿ) ಅಂತಿಮ ವರ್ಷದಲ್ಲಿದ್ದು, ಮುಂದೆ ಎಂ.ಎಸ್ಸಿ ಕೋರ್ಸ್‌ನಲ್ಲಿ ಮೈಕ್ರೊಬಯಾಲಜಿ ಅಥವಾ ಬಯೋಟೆಕ್ನಾಲಜಿ ಆಯ್ಕೆಗಳಲ್ಲಿ, ಸರ್ಕಾರಿ ವೃತ್ತಿಯನ್ನು ಅನುಸರಿಸಲು ಯಾವುದು ಉತ್ತಮ?

ಚಂದ್ರು ಪಾಟೀಲ, ಕಾರಟಗಿ.

 ಸಾಮರ್ಥ್ಯಗಳ ಮೌಲ್ಯಮಾಪನ ಮಾಡಿ, ಅದರಂತೆ ಎಂ.ಎಸ್ಸಿ ಯಾವ ವಿಷಯದಲ್ಲಿ ಮಾಡುವುದೆಂದು ನಿರ್ಧರಿಸುವುದು ಸೂಕ್ತ.  ಮೈಕ್ರೊಬಯಾಲಜಿ ವಿಷಯಕ್ಕೆ ಖಾಸಗಿ ಕ್ಷೇತ್ರದಲ್ಲಿ   ಹೆಚ್ಚಿನ ಬೇಡಿಕೆಯಿದೆ. ಬಿ.ಎಸ್ಸಿ ನಂತರ ಸರ್ಕಾರಿ ವೃತ್ತಿಯನ್ನು ಅನುಸರಿಸುತ್ತಾ, ಎಂ.ಎಸ್ಸಿ ಕೋರ್ಸ್ ಕೂಡಾ ನೀವು ಮಾಡಬಹುದು. 

ಹೆಚ್ಚಿನ ಪ್ರಶ್ನೋತ್ತರಗಳಿಗೆ: https://www.prajavani.net/education-career/guide

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್‌ಕುಮಾರ್‌ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.inಕ್ಕೆ ಕಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.