ADVERTISEMENT

ವಿದ್ಯಾರ್ಥಿವೇತನ ಕೈಪಿಡಿ: ಎಫ್‌ಎಇಎ ಸ್ಕಾಲರ್‌ಶಿಪ್

ಪ್ರಜಾವಾಣಿ ವಿಶೇಷ
Published 23 ಜೂನ್ 2024, 22:32 IST
Last Updated 23 ಜೂನ್ 2024, 22:32 IST
ಸ್ಕಾಲರ್‌ಶಿಪ್
ಸ್ಕಾಲರ್‌ಶಿಪ್   

ವಿವರ:  ಯಾವುದೇ ಭಾರತೀಯ ಸಂಸ್ಥೆಯಲ್ಲಿ ಕಲೆ, ವಾಣಿಜ್ಯ, ವಿಜ್ಞಾನ, ಎಂಜಿನಿಯರಿಂಗ್ ಅಥವಾ ಇತರ ತಂತ್ರಜ್ಞಾನ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಪದವಿ ಅಧ್ಯಯನ ಮಾಡುತ್ತಿರುವ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಅಥವಾ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಫೌಂಡೇಷನ್ ಫಾರ್ ಅಕಾಡೆಮಿಕ್ ಎಕ್ಸಲೆನ್ಸ್ ಅಂಡ್ ಆಕ್ಸೆಸ್ (ಎಫ್‌ಎಇಎ) ನೀಡುವ ಅವಕಾಶವಾಗಿದೆ.

ಅರ್ಹತೆ: ಭಾರತದ ಯಾವುದೇ ಮಾನ್ಯ ವಿಶ್ವವಿದ್ಯಾಲಯ, ಸಂಸ್ಥೆ ಅಥವಾ ಕಾಲೇಜಿನಲ್ಲಿ  ಕಲೆ, ವಾಣಿಜ್ಯ, ವಿಜ್ಞಾನ, ವೈದ್ಯಕೀಯ, ಎಂಜಿನಿಯರಿಂಗ್ ಅಥವಾ ಇತರ ತಂತ್ರಜ್ಞಾನ ಮತ್ತು ವೃತ್ತಿಪರ ಕ್ಷೇತ್ರದಲ್ಲಿ 12ನೇ ತರಗತಿಯಲ್ಲಿ ಅಥವಾ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಲಭ್ಯವಿದೆ. ಅಭ್ಯರ್ಥಿಗಳು ಎಸ್‌ಸಿ, ಎಸ್‌ಟಿ, ಒಬಿಸಿ ಅಥವಾ ಬಿಪಿಎಲ್ ಎಂದು ವರ್ಗೀಕರಿಸಲ್ಪಟ್ಟ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜಕ್ಕೆ ಸೇರಿದವರಾಗಿರಬೇಕು.

ಆರ್ಥಿಕ ಸಹಾಯ:  ಬೋಧನಾ ಶುಲ್ಕಗಳು, ನಿರ್ವಹಣೆ ಭತ್ಯೆ ಅಥವಾ ಹಾಸ್ಟೆಲ್/ಮೆಸ್ ಶುಲ್ಕಗಳು ಮತ್ತು ಇತರ ಭತ್ಯೆಗಳು

ADVERTISEMENT

ಅರ್ಜಿ ಸಲ್ಲಿಸಲು ಕೊನೆ ದಿನ:  30-06-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: 
Short Url: www.b4s.in/praja/FAEA2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.