ADVERTISEMENT

ಮಾದರಿ ಪ್ರಶ್ನೋತ್ತರ | ಸಾಮಾನ್ಯ ಜ್ಞಾನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 22:30 IST
Last Updated 14 ಸೆಪ್ಟೆಂಬರ್ 2022, 22:30 IST
   

1. 1)………………………. ಕಾಡಿನಲ್ಲಿದ್ದ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬನನ್ನು`ಮ್ಯಾನ್ ಆಫ್ ದಿ ಹೋಲ್’ ಎಂದು ಕರೆಯಲಾಗುತಿತ್ತು. ಆತನ ನಿಧನದೊಂದಿಗೆ ಆ ಬುಡಕಟ್ಟು ಜನಾಂಗವೇ ಸರ್ವನಾಶವಾಯಿತು.

ಎ) ಅಮೆಜಾನ್ ಕಾಡು

ಬಿ) ಜಿಯಾಂಗ್ ಜಿಂಗ್ ಕಾಡು ಚೀನಾ

ADVERTISEMENT

ಸಿ) ಭಾರತದ ಪಶ್ಚಿಮ ಘಟ್ಟದ ಕಾಡು
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

2)ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಭಾರತದ ಮೊದಲ ಸ್ವದೇಶಿ ನಿರ್ಮಿತ ಯುದ್ಧವಿಮಾನ ವಾಹಕ `ಐಎನ್‌ಎಸ್ ವಿಕ್ರಾಂತ್‌’ಗೆ ಕೇರಳದ ಕೊಚ್ಚಿಯಲ್ಲಿ ಚಾಲನೆ ನೀಡಲಾಯಿತು. ಋಗ್ವೇದದ ವಾಕ್ಯವೊಂದನ್ನು ಘೋಷವಾಕ್ಯವಾಗಿ ಈ ವಿಮಾನ ವಾಹಕ ಹೊಂದಿದೆ.

21971ರಲ್ಲಿ ಬಂಗಾಳ ಕೊಲ್ಲಿಯಲ್ಲಿ ನಿಗೂಢವಾಗಿ ಆಕ್ರಮಣ ಮಾಡಲು ಬಂದ ಪಾಕಿಸ್ತಾನದ `ಪಿಎನ್‌ಎಸ್ ಘಾಜಿ’ಯನ್ನು ಬಂಗಾಳ ಕೊಲ್ಲಿಯಲ್ಲಿ ನಡುನೀರಿನಲ್ಲಿ ಹೊಡೆದುರುಳಿಸಿತು ಐಎನ್‌ಎಸ್ ವಿಕ್ರಾಂತ. ಇದೇ ಹೆಸರನ್ನು ನೂತನವಾಗಿ ನಿರ್ಮಿತವಾದ ಭಾರತದ ಯುದ್ಧ ವಿಮಾನ ವಾಹಕಕ್ಕೆ ಇಡಲಾಗಿದೆ.

3ಗಂಟೆಗೆ 33 ಕಿ.ಮೀ ವೇಗದಲ್ಲಿ ಚಲಿಸಿ, ಒಂದೇ ಬಾರಿಗೆ 75000 ನಾಟಿಕಲ್ ಮೈಲ್ ಕ್ರಮಿಸಬಲ್ಲದು, ಅಂದರೆ ಭಾರತದಿಂದ ಹೊರಟು ಬ್ರೆಜಿಲ್ ವರೆಗೆ ನಿಲ್ಲದೇ ಚಲಿಸಬಲ್ಲುದು.

ಉತ್ತರ ಸಂಕೇತಗಳು

ಎ)1ನೇ ಮತ್ತು 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಬಿ )2ನೇ ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ) 1 ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ

ಡಿ)1 ರಿಂದ 3ರವರೆಗೆ ಎಲ್ಲ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

3) ಪರಖ್(PARAKH) ರಚಿಸಲು ಕೇಂದ್ರ ಸರ್ಕಾರ ಹೊರಟಿದೆ. ಹಾಗಾದರೆ ಪರಖ್ ಯಾವುದಕ್ಕೆ ಸಂಬಂಧಿಸಿದ್ದು?

ಎ)10 ಮತ್ತು 12ನೇ ತರಗತಿಗಳ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಏಕರೂಪತೆ ತರುವುದು.

ಬಿ)ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಂದೇ ವೇದಿಕೆಯಲ್ಲಿ ತರುವುದು.

ಸಿ)ಎಲ್ಲಾ ಜನಾಂಗದ ಜನರಿಗೆ ಇರುವ ಸರ್ಕಾರಿ ಯೋಜನೆಗಳನ್ನು ಒಂದೇ ವೇದಿಕೆಗೆ ತರುವುದು

ಡಿ) ಮೇಲಿನ ಯಾವುದೂ ಅಲ್ಲ.

ಉತ್ತರ: ಎ

4) ಬಹುರಾಷ್ಟ್ರೀಯ ಕಂಪನಿ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಆಗಿ ಯಾರನ್ನು ನೇಮಕ ಮಾಡಲಾಗಿದೆ?

ಎ)ಲಕ್ಷ್ಮಣ್‌ ನರಸಿಂಹನ್

ಬಿ) ರಮೇಶ್ ಜಾದವ್
ಸಿ) ಸುಂದರ್ ಪಿಚ್ಚೈ
ಡಿ) ಮೇಲಿನ ಯಾರೂ ಅಲ್ಲಾ

ಉತ್ತರ: ಎ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ ಪೊಕ್ಸೊ ಕಾನೂನು(The Protection of Children from Sexual Offences Act, 2012) 2012ರಲ್ಲಿ ಜಾರಿಗೆ ಬಂತು

2) ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಸ್ಪರ್ಶ, ಅತ್ಯಾಚಾರ, ಮಕ್ಕಳಿಗೆ ಲೈಂಗಿಕ ಸಂಪರ್ಕದ ವಿಡಿಯೊ ಅಥವಾ ಚಿತ್ರ ತೋರಿಸುವುದು, ಮೊದಲಾದವುಗಳಿಂದ ಪೊಕ್ಸೊ ಕಾನೂನು ರಕ್ಷಣೆ ನೀಡುತ್ತದೆ.

3)ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳಿಗೆ ತೊಂದರೆಯಾದರೂ ಪೊಕ್ಸೊ ಕಾನೂನು ರಕ್ಷಣೆ ನೀಡುತ್ತದೆ

ಉತ್ತರ ಸಂಕೇತಗಳು

ಎ)1ನೇ ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಬಿ)3ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ)1 ಮತ್ತು 2ನೇ ಹೇಳಿಕೆ ಮಾತ್ರ ಸರಿಯಾಗಿದೆ

ಡಿ)1 ರಿಂದ 3ನೇ ಎಲ್ಲ ಹೇಳಿಕೆಗಳು ಸರಿಯಾಗಿದೆ

ಉತ್ತರ: ಡಿ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

ಎ)ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್ ಸೇರಿದಂತೆ ಹಲವು ರಾಷ್ಟ್ರಗಳ ರೈತರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯೂರೋಪ್‌, 500 ವರ್ಷಗಳಲ್ಲಿ ಕಂಡುಕೇಳರಿಯದಂತಹ ಜಲಕ್ಷಾಮಕ್ಕೆ ಈಡಾಗುತ್ತಿದೆ. ದಾಖಲೆಯ ಬಿಸಿಲು ಬರುತ್ತಿದ್ದು, ಬತ್ತುತ್ತಿರುವ ನದಿಗಳು, ಹೆಚ್ಚುತ್ತಿರುವ ಕಾಡ್ಗಿಚ್ಚು ಯೂರೋಪ್‌ ಅನ್ನು ಆವರಿಸಿದೆ.

2)ಇಂಗ್ಲೆಂಡ್‌ನ ಥೇಮ್ಸ್ ನದಿ ಬತ್ತಲಾರಂಭಿಸಿದೆ. ಜರ್ಮನಿಯ ರೈನ್ ನದಿಯೂ ಸಹಾ ಬತ್ತುತಿದೆ. ಯೂರೋಪ್‌ನಲ್ಲಿರುವ ಎರಡನೇ ಅತಿದೊಡ್ಡ ನದಿಯಾದ ಓಡರ್ ನದಿಯಲ್ಲಿ ಮೀನುಗಳು ಸಾಯುತ್ತಿವೆ.

ಉತ್ತರ ಸಂಕೇತಗಳು

ಎ)1ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಬಿ2ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ)1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ

ಡಿ)1 ರಿಂದ 2ನೇ ಎಲ್ಲ ಹೇಳಿಕೆಗಳು ಸರಿಯಾಗಿಲ್ಲ

ಉತ್ತರ: ಸಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.