ಒಡಿಶಾದಲ್ಲಿ ಮಾನವ ಮತ್ತು ಆನೆಗಳ ನಡುವಿನ ಸಂಘರ್ಷಣೆಯ ಪ್ರಕರಣಗಳು ನಿರಂತರವಾಗಿ ಹೆಚ್ಚಳಗೊಂಡಿರುವ ಕಾರಣದಿಂದ ಒಡಿಶಾ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಕುಮ್ಕಿ ಆನೆಗಳನ್ನು ಕಳುಹಿಸುವಂತೆ ಮನವಿ ಸಲ್ಲಿಸಿದೆ.
ಕಾಡಾನೆಗಳನ್ನು ಹಿಡಿಯುವ ವಿಚಾರದಲ್ಲಿ ಕುಮ್ಕಿ ಆನೆಗಳು ತರಬೇತಿಯನ್ನು ಪಡೆದಿದ್ದು, ಇವುಗಳ ನಿಯೋಜನೆಯಿಂದ ಸಂಘರ್ಷಣೆಯ ಪ್ರಕರಣಗಳ ಪ್ರಮಾಣವನ್ನು ತಡೆಯಲು, ಬೆಳೆ ಮತ್ತು ಜನವಸತಿಗಳ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಗ್ಗಿಸಲು ಒಡಿಶಾ ಸರ್ಕಾರ ಕೈಗೊಂಡ ಕ್ರಮವಾಗಿದೆ.
ಅರಣ್ಯಗಳಲ್ಲಿ ಗಸ್ತು ತಿರುಗಲು ಮತ್ತು ಕಾಡಾನೆಗಳನ್ನು ಹಿಡಿಯಲು ತಮಿಳುನಾಡಿನಲ್ಲಿ ಕುಮ್ಕಿ ಆನೆಗಳನ್ನು ಯಶಸ್ವಿಯಾಗಿ ಬಳಸಲಾಗಿದೆ.
ಅಳಿವಿನ ಅಂಚಿನಲ್ಲಿರುವ ರಣಹದ್ದು ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಜಾರ್ಖಂಡ್ ಸರ್ಕಾರ ರಣಹದ್ದುಗಳ ರೆಸ್ಟೋರೆಂಟ್ ಪ್ರಾರಂಭಿಸಿದೆ.
ರಣಹದ್ದುಗಳು ಸತ್ತ ಪ್ರಾಣಿಗಳನ್ನು ತಿಂದು ಪರಿಸರವನ್ನು ಸಂರಕ್ಷಿಸುವ ಕಾರ್ಯವನ್ನು ನಿರ್ವಹಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಜಾನುವಾರಿಗಾಗಿ ಬಳಸುವ ಔಷಧಗಳಲ್ಲಿ ‘ಡೈಕ್ಲೊಫೆನಾಕ್’ ಎಂಬ ಅಂಶ ಹೆಚ್ಚಿರುವುದು ಪತ್ತೆಯಾಗಿದ್ದು, ಜಾನುವಾರು ಮರಣ ಹೊಂದಿದ ನಂತರವೂ ಡೈಕ್ಲೊಫೆನಾಕ್ ಅಂಶ ಉಳಿದುಕೊಳ್ಳುತ್ತದೆ. ಈ ಸತ್ತ ಜಾನುವಾರುಗಳನ್ನು ತಿನ್ನುವ ರಣಹದ್ದುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಕಾರಣದಿಂದ ಜಾರ್ಖಂಡ್ ಸರ್ಕಾರ, ಕೊಡೆರ್ಮ ಜಿಲ್ಲೆಯಲ್ಲಿ ‘ರಣಹದ್ದುಗಳ ರೆಸ್ಟೋರೆಂಟ್’ ನಿರ್ಮಿಸಿದೆ.
ಈ ರೆಸ್ಟೋರೆಂಟ್‌ನಲ್ಲಿ ವಿಷರಹಿತ ಆಹಾರ ನೀಡುವ ಮೂಲಕ ರಣಹದ್ದುಗಳನ್ನು ರಕ್ಷಿಸಲಾಗುತ್ತಿದೆ.
ಇದೇ ಸ್ವರೂಪದ ರೆಸ್ಟೋರೆಂಟ್‌ಗಳನ್ನು ಮಹಾರಾಷ್ಟ್ರದ ರಾಯ್‌ಗಡ್, ಗದ್ ಚಿರೋಲಿ ಮತ್ತು ನಾಸಿಕ್ ಜಿಲ್ಲೆಗಳಲ್ಲಿಯೂ ಸ್ಥಾಪಿಸಲಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರ ಜಿಲ್ಲೆಯಲ್ಲಿಯೂ ಇಂಥದ್ದೆ ರೆಸ್ಟೋರೆಂಟ್ ಇದೆ.
ಭಾರತದಲ್ಲಿ ಕಂಡುಬರುವ 9 ರಣಹದ್ದು ತಳಿಗಳ ಮಾಹಿತಿ (ಅವುಗಳಲ್ಲಿ ಮೂರು ವಲಸಿಗ ತಳಿಗಳು)
ವೈಟ್ ರಂಪಡ್ ರಣಹದ್ದು l ಸ್ಲೆಂಡರ್ ಬಿಲ್ಡ್ ರಣಹದ್ದು l ಭಾರತೀಯ ರಣಹದ್ದು
ಕೆಂಪು ತಲೆಯ ರಣಹದ್ದು l ದಾಡಿ ಹೊಂದಿರುವ ರಣಹದ್ದು l ಈಜಿಪ್ಟ್‌ನ ರಣಹದ್ದು
ಸೀನಿರಿಯಸ್ ರಣಹದ್ದು l ಗ್ರಿಫಾನ್ ರಣಹದ್ದು l ಹಿಮಾಲಯದ ಗ್ರಿಫಾನ್ ರಣಹದ್ದು
ವಿಶೇಷ ಸೂಚನೆ: ಪಟ್ಟಿಯಲ್ಲಿರುವ ರಣಹದ್ದುಗಳಲ್ಲಿ ಕೊನೆಯ ಮೂರು ಪ್ರಭೇದಗಳು ವಲಸಿಗ ಪ್ರಭೇದಗಳಾಗಿವೆ.
ರಣಹದ್ದುಗಳು ತ್ಯಾಜ್ಯ ನಾಶಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಇದರಿಂದ ವನ್ಯಜೀವಿಗಳಿಗೆ ರೋಗ ರುಜಿನಗಳು ಹರಡದಂತೆ ನೋಡಿಕೊಳ್ಳುತ್ತವೆ.
2006ರಲ್ಲಿ ಡೈಕ್ಲೋಫೈನಾಕ್ ಬಳಕೆಯನ್ನು ಸರ್ಕಾರ ನಿಷೇಧಿಸಿದ್ದು, 2023ರಲ್ಲಿ ಕಿಟೋ ಪ್ರೋಫೆನ್ ಮತ್ತು ಆಸಿಕ್ಲೇನೋ ಫೆನಾಕ್ ಬಳಕೆಯನ್ನು ನಿಷೇಧಿಸಿದೆ.
ಹರಿಯಾಣದ, ಪಿಂಜೋರ್‌ನಲ್ಲಿ ರಣಹದ್ದು ಸಂರಕ್ಷಣಾ ತಳಿ ಅಭಿವೃದ್ಧಿ ಕೇಂದ್ರದ ಸ್ಥಾಪನೆ ಮಾಡಲಾಗಿದೆ.
ವಿಶೇಷ ಸೂಚನೆ: ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ಒಂದನೇ ಅನುಸೂಚಿಯಲ್ಲಿ ರಣಹದ್ದುಗಳಿಗೆ ಸ್ಥಾನವನ್ನು ಕಲ್ಪಿಸಲಾಗಿದೆ.
ಕೇರಳದ ಚಿನ್ನಾರ್ ವನ್ಯಜೀವಿಧಾಮದಲ್ಲಿ ಯುರೇಷ್ಯಾದ ನೀರು ನಾಯಿ ಪತ್ತೆಯಾಗಿದೆ.
ಈ ನೀರು ನಾಯಿಗಳು ನಾಚಿಕೆಯ ಸ್ವಭಾವವನ್ನು ಹೊಂದಿದ್ದು, ನಿಶಾಚರಿಯಾಗಿದೆ. ಮೀನುಗಳೇ ಇವುಗಳ ಪ್ರಮುಖ ಆಹಾರವಾಗಿದೆ.
ಈ ನೀರು ನಾಯಿಗಳು ಕಡಲ ತೀರಗಳಲ್ಲಿ ಮತ್ತು ತೇವಾಂಶ ಪ್ರದೇಶಗಳಲ್ಲಿ ವಾಸಿಸುತ್ತವೆ.
ಹಂಚಿಕೆ: ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಉತ್ತರ ಭಾಗ, ಈಶಾನ್ಯ ಪ್ರದೇಶಗಳು ಮತ್ತು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.