ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ | ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ಸ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 0:30 IST
Last Updated 22 ಜುಲೈ 2024, 0:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

(ಸಾಂದರ್ಭಿಕ ಚಿತ್ರ)

ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ಸ್

ADVERTISEMENT

1ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಅರ್ಜಿಗಳನ್ನು ಆಹ್ವಾನಿಸಿದೆ.

ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆವಿದ್ಯಾರ್ಥಿವೇತನ ನೀಡುತ್ತದೆ.

ಅರ್ಹತೆ: ವಿದ್ಯಾರ್ಥಿವೇತನವು ಭಾರತೀಯ ಪ್ರಜೆಗಳಿಗೆ ಮಾತ್ರ ಮುಕ್ತವಾಗಿದೆ. ವಿದ್ಯಾರ್ಥಿಗಳು 1 ರಿಂದ 12ನೇ ತರಗತಿಯಲ್ಲಿ ಓದುತ್ತಿರಬೇಕು ಅಥವಾ ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್, ಅಂಡರ್‌ಗ್ರಾಜುಯೇಟ್ ಅಥವಾ ಸ್ನಾತಕೋತ್ತರ (ಸಾಮಾನ್ಯ ಮತ್ತು ವೃತ್ತಿಪರ ಸೇರಿ ) ಕೋರ್ಸ್‌ಗಳನ್ನು ಅಭ್ಯಾಸ ಮಾಡುತ್ತಿರಬೇಕು. ಅರ್ಜಿದಾರರು ತಮ್ಮ ಹಿಂದಿನ ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ ಶೇ 55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯವು ₹ 2.5 ಲಕ್ಷಕ್ಕಿಂತ ಕಡಿಮೆ ಅಥವಾ ಸಮನಾಗಿರಬೇಕು.

ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸಲು ಅಶಕ್ತರಾದವರಿಗೆ, ಮೂರು ವರ್ಷಗಳಲ್ಲಿ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟುಗಳನ್ನು ಅನುಭವಿಸಿದ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು.

ಆರ್ಥಿಕ ಸಹಾಯ: ₹ 75,000ರವರೆಗೆ
ಅರ್ಜಿ ಸಲ್ಲಿಸಲು ಕೊನೆ ದಿನ: 04-09-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/HDFC54

****

ರತ್ತಿ ಛಾತ್ರ ಸ್ಕಾಲರ್‌ಶಿಪ್

ಪ್ಯಾನಸೋನಿಕ್ ಲೈಫ್ ಸಲ್ಯೂಷನ್ಸ್ ಇಂಡಿಯಾ (ಪಿಎಲ್‌ಎಸ್‌ಐಎನ್‌ಡಿ), ಇಂಡಿಯನ್ ಇನ್ಸ್‌ಟಿಟ್ಯೂಟ್  ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಬಿ.ಇ. / ಬಿ. ಟೆಕ್. ಕೋರ್ಸ್‌ಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿನಿಯರಿಂದ ಅರ್ಜಿಗಳನ್ನು ಆಹ್ವಾನಿಸಿದೆ.


ಅರ್ಹತೆ:  2024-25ರಲ್ಲಿ ಯಾವುದೇ ಐಐಟಿಗಳಲ್ಲಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಬಿ.ಇ/ಬಿ.ಟೆಕ್‌ ಕೋರ್ಸ್‌ಗಳಿಗಾಗಿ ಪ್ರವೇಶ ಪಡೆಯಲಿರುವವರಿಗೆ ಮುಕ್ತವಾಗಿದೆ. 

ಅರ್ಜಿದಾರರು ತಮ್ಮ 12ನೇ ತರಗತಿ ಪರೀಕ್ಷೆಯನ್ನು ತೇರ್ಗಡೆ ಹೊಂದಿರಬೇಕು ಅಥವಾ ಅಂತಿಮ ಫಲಿತಾಂಶಗಳಿಗಾಗಿ ಎದುರು ನೋಡುತ್ತಿರುವವರಾಗಿರಬೇಕು. ಅರ್ಜಿದಾರರು 12ನೇ ತರಗತಿಯಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರ ವಾರ್ಷಿಕ ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ ₹ 8,00,000ಕ್ಕಿಂತ ಹೆಚ್ಚಿರಬಾರದು.

2024-25 ಬ್ಯಾಚ್‌ನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಆರ್ಥಿಕ ಸಹಾಯ:    ನಾಲ್ಕು ವರ್ಷಗಳವರೆಗೆ ವರ್ಷಕ್ಕೆ ₹‌ 70, 250
ಅರ್ಜಿ ಸಲ್ಲಿಸಲು ಕೊನೆ ದಿನ: 15-08-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ: www.b4s.in/praja/RCSP56

****

ಕೋಟಕ್ ಕನ್ಯಾ ಸ್ಕಾಲರ್‌ಶಿಪ್

ಕೋಟಕ್ ಮಹೀಂದ್ರಾ ಗ್ರೂಪ್ ಕಂಪನೀಸ್‌, ಕೋಟಕ್ ಎಜುಕೇಶನ್ ಫೌಂಡೇಷನ್ ಶಿಕ್ಷಣ ಮತ್ತು ಜೀವನೋಪಾಯದ ಕುರಿತ ಸಿಎಸ್‌ಆರ್ ಪ್ರಾಜೆಕ್ಟ್‌ನ ಅಡಿಯಲ್ಲಿ, 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣದಲ್ಲಿ ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗುವಂತೆ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಂದ ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2024-25ಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
 

ಅರ್ಹತೆ: ಭಾರತದಾದ್ಯಂತದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಲಭ್ಯವಿರುತ್ತದೆ.
ಅಭ್ಯರ್ಥಿಗಳು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 75 ಅಥವಾ ಹೆಚ್ಚಿನ ಅಂಕಗಳನ್ನು ಅಥವಾ ತತ್ಸಮಾನ ಸಿಜಿಪಿಎಯನ್ನು ಗಳಿಸಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು
₹ 6,00,000ಕ್ಕಿಂತ ಕಡಿಮೆ ಇರಬೇಕು.

ಮಾನ್ಯತೆ ಪಡೆದ ಎನ್‌ಆರ್‌ಎಫ್/ ಎನ್‌ಎಎಸಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25 ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ (5 ವರ್ಷಗಳು), ಬಿ.ಎಸ್‌ಸಿ ನರ್ಸಿಂಗ್, ಬಿ.ಫಾರ್ಮಸಿ, ಇಂಟಿಗ್ರೇಟೆಡ್ ಬಿಎಸ್-ಎಂಎಸ್/ಬಿಎಸ್-ರಿಸರ್ಚ್ ಇನ್ ಐಎಸ್‌ಇಆರ್‌, ಐಐಎಸ್‌ಸಿ (ಬೆಂಗಳೂರು) ಅಥವಾ (ಡಿಸೈನ್, ಆರ್ಕಿಟೆಕ್ಚರ್, ಇತ್ಯಾದಿ) ಇತರ ವೃತ್ತಿಪರ ಕೋರ್ಸ್‌ಗಳಿಗೆ ಮೊದಲ ವರ್ಷದ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ.

ಆರ್ಥಿಕ ಸಹಾಯ: ವರ್ಷಕ್ಕೆ  ₹ 1.5* ಲಕ್ಷ

ಅರ್ಜಿ ಸಲ್ಲಿಸಲು ಕೊನೆ ದಿನ:  30-09-2024

ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  www.b4s.in/praja/KKGS3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.