1. ನಾನು ಬಿ.ಎಸ್ಸಿ. ಮುಗಿಸಿದ್ದೇನೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಎಂ.ಎಸ್ಸಿ. ಮಾಡಬೇಕು ಎಂದುಕೊಂಡಿದ್ದೇನೆ. ಅದಕ್ಕೆ ಇನ್ನೂ ಸೀಟು ಹಂಚಿಕೆ ಆಗಿಲ್ಲ. ನನಗೆ ಓದಲು ಇನ್ನೂ ಎರಡು ವರ್ಷ ಮಾತ್ರ ಇರುವುದರಿಂದ ನಂತರ ನನಗೆ ಒಳ್ಳೆಯ ಕೆಲಸ ಸಿಗುವಂತೆ ಕೋರ್ಸ್ ಮಾಡಬೇಕು. ಎಂ.ಎಸ್ಸಿ. ಅಥವಾ ಬಿ.ಇಡಿ. ಮಾಡುವುದು ಸೂಕ್ತವೇ ಎಂಬುದನ್ನು ದಯವಿಟ್ಟು ತಿಳಿಸಿ.
–ರಕ್ಷಿತಾ. ಕೆ.ಆರ್. ಗೌಡ, ಊರು ಬೇಡ
ಗಣಿತ ಕ್ಷೇತ್ರದಲ್ಲಿ ಹಲವಾರು ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳಲ್ಲಿ ಗಣಿತ ಅಂದರೆ ತಲೆನೋವು, ಅರ್ಥವಾಗುವುದಿಲ್ಲ, ಬಹಳ ಕಷ್ಟ, ಲೆಕ್ಕವಿಲ್ಲದ ಕೋರ್ಸ್ ಆಯ್ಕೆ ಮಾಡಬೇಕು ಅನ್ನುವವರೇ ಜಾಸ್ತಿ. ಆದರೆ ನೀವು ಗಣಿತದಲ್ಲಿ ಎಂ.ಎಸ್ಸಿ. ಮಾಡಲು ಬಯಸಿದ್ದೀರಿ. ಅಂದ ಮೇಲೆ ನಿಮಗೆ ಗಣಿತ ಇಷ್ಟ ಎಂದು ಅರ್ಥವಾಗುತ್ತಿದೆ.
ಉದ್ಯೋಗಾವಕಾಶಗಳು:
1. ಬೋಧನೆ
2. ಫೈನಾನ್ಸ್ ಮತ್ತು ಇನ್‌ವೆಸ್ಟ್‌ಮೆಂಟ್ ಅನಲಿಸ್ಟ್
3. ಇನ್ಫಾರ್ಮೇಷನ್ ಟೆಕ್ನಾಲಜಿ ಮತ್ತು ಕಂಪ್ಯೂಟಿಂಗ್
4 . ಡೇಟಾ ಸೈನ್ಸ್
5.ಬಿಸಿನಸ್, ಮ್ಯಾನೇಜ್‌ಮೆಂಟ್ ಮತ್ತು ಕನ್ಸಲ್ಟಿಂಗ್
6. ಸಂಶೋಧನೆ
7. ಮಾರ್ಕೆಟ್ ರಿಸರ್ಚ್
8. ಬ್ಯಾಂಕಿಂಗ್
9. ಸಿಸ್ಟಮ್ ಅನಲಿಸ್ಟ್
10. ಸ್ಪೇಸ್ ಅ್ಯಂಡ್ ಏರ್‌ಕ್ರಾಫ್ಟ್
ಮತ್ತು ಇನ್ನೂ ಅನೇಕ...
2. ನನ್ನ ಮಗಳು ದ್ವಿತೀಯ ಪಿ.ಯು.ಸಿ. ಓದುತ್ತಿದ್ದು ಮುಂದೆ ಬಯೋಟೆಕ್ನಾಲಜಿ ಓದಬೇಕೆಂದಿದ್ದಾಳೆ. ಬಿ.ಎಸ್.ಸಿ. ಮತ್ತು ಎಂಜಿನಿಯರಿಂಗ್‌ಗಳಲ್ಲಿ ಯಾವುದು ಉತ್ತಮ? ಮುಂದೆ ಉದ್ಯೋಗಾವಕಾಶಗಳು ಹೇಗಿವೆ? ಜೀವವಿಜ್ಞಾನದಲ್ಲೂ ಆಸಕ್ತಿ ಇರುವುದರಿಂದ ಅದರಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಉದ್ಯೋಗಾವಕಾಶಗಳು ಹೇಗಿವೆ?
–ಮೇಧಾಭಟ್, ಬೆಂಗಳೂರು
ಬಯೋಟೆಕ್ನಾಲಜಿ ಹಲವು ವಿಜ್ಞಾನಗಳ ಒಕ್ಕೂಟ. ಆರೋಗ್ಯ, ಔಷಧ, ಕೃಷಿ, ಆಹಾರ, ಪರಿಸರ – ಹೀಗೆ ಹಲವು ಕ್ಷೇತ್ರಗಳ ಬಗ್ಗೆ ನೀವುಬಯೋಟೆಕ್ನಾಲಜಿಯಲ್ಲಿ ಕಲಿಯುತ್ತೀರ. BE/B.Tech ಬಯೋಟೆಕ್ನಾಲಜಿಯಲ್ಲಿ, ಬಯೋಲಾಜಿಕಲ್ ಸ್ಪೆನ್ಸಸ್ ಮತ್ತು ಎಂಜಿನಿಯರಿಂಗ್ ಟೆಕ್ನಾಲಜಿಯನ್ನು ಕಲಿಯುತ್ತೀರಿ. ಬಯೋಲಾಜಿಯಕಲ್ ಸ್ಪೆನ್‌ಸಸ್‌ನಲ್ಲಿ ಮೈಕ್ರೋಬಯೋಲಜಿ, ಮಾಲಿಕ್ಯುಲರ್ ಬಯೋಲಜಿ, ಜನೆಟಿಕ್ಸ್, ಸೆಲ್ ಬಯೋಲಜಿಗಳನ್ನು ಓದುತ್ತೀರಿ. ಎಂಜಿನಿಯರಿಂಗ್ ಸಬ್ಜೆಕ್ಟ್‌ನಲ್ಲಿ ಬಯೋಪ್ರಾಸಸ್ ಎಂಜಿನಿಯರಿಂಗ್, ಬಯೋಕೆಮಿಕಲ್ ಎಂಜಿನಿಯರಿಂಗ್, ರ್ಥಮೋಡೈನಮಿಕ್ಸ್, ಮಾಸ್ ಟ್ರಾನ್ಸ್‌ಫರ್ – ಈ ವಿಷಯಗಳನ್ನು ಕಲಿಯುತ್ತೀರಿ.
B.Sc/BE/B.Tech. ಬಯೋಟೆಕ್ನಾಲಜಿಯಲ್ಲಿ ಆರಿಸಬೇಕಾದರೆ ನಿಮ್ಮ ಗುರಿ ಏನು ಎನ್ನುವುದನ್ನು ನಿರ್ಧರಿಸಿ. ನಿಮಗೆ ರಿಸರ್ಚ್ ಇನ್ ಸ್ಪೆಮ್‌ಸೆಲ್ಸ್, ಪ್ಲಾನೆಟ್ ಬಯೋಟೆಕ್ನಾಲಜಿ, ಮಾಲಿಕ್ಯುಲರ್ ಬಯೋಟೆಕ್ನಾಲಜಿ ಈ ರೀತಿಯ ಕ್ಷೇತ್ರದಲ್ಲಿ ಆಸಕ್ತಿ ಇದ್ದಲ್ಲಿ ನೀವು Bsc/ Msc/PhD ಈ ಹಾದಿಯಲ್ಲಿ ಹೋಗುವುದು ಉತ್ತಮ.
B.Sc.- 3 ವರ್ಷದ ಕೋರ್ಸ್
M.Sc.– 2 ವರ್ಷದ ಕೋರ್ಸ್
B.E./ B.Tech– 4 ವರ್ಷದ ಕೋರ್ಸ್
ನೀವು ಹೊರದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡಬಯಸಿದ್ದಲ್ಲಿ, M.Sc. ನಂತರವೇ ಸಾಧ್ಯ. ಏಕೆಂದರೆ ಅಲ್ಲಿ ವಿದ್ಯಾಭ್ಯಾಸ ಮಾಡಲು 16 ವರ್ಷಗಳ ವ್ಯಾಸಂಗ ಕಡ್ಡಾಯ.
B.Sc. ಅಥವಾB.E., ಯಾವುದನ್ನು ಮಾಡಿದರೂ ನೀವು ಮ್ಯಾನೇಜ್‌ಮೆಂಟ್ ಕಡೆ ಹೋಗಬಯಸಿದರೆ ಅರ್ಹತೆ ಇರುತ್ತದೆ. IAS/ IFS/IPS ಕಡೆ ಒಲವು ಇದ್ದಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಬರೆಯಬಹುದು.
ಉದ್ಯೋಗಾವಕಾಶಕ್ಕೆ ಏನೂ ಕೊರತೆ ಇಲ್ಲ. ಹೆಸರಾಂತ ಕಂಪನಿಗಳಾದ Biocon, IFGL, Biochemicals limited, Orbees Medical Invitrogen, Glaxo Smithkine, Dr. Reddy's lab, Clipa Reliance life scinces, CTS Life Scince - ಇನ್ನೂ ಅನೇಕ ಕಂಪನಿಗಳಲ್ಲಿ ಉದ್ಯೋಗಾವಕಾಶಗಳು ಇರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.