ಕ್ರೆಡಿಟ್ ಸೂಯಿಸ್ ಸ್ಕಾಲರ್‌ಷಿಪ್ ಫಾರ್ ಎಂಬಿಎ ಆ್ಯಂಡ್ ಎಂ.ಎ(ಎಕನಾಮಿಕ್ಸ್) ಸ್ಟೂಡೆಂಟ್ಸ್ 2022
ವಿವರ: ಎಂಬಿಎ / ಎಂ.ಎ(ಎಕನಾಮಿಕ್ಸ್) ಪದವಿಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕ್ರೆಡಿಟ್ ಸೂಯಿಸ್ ಸ್ಕಾಲರ್‌ಷಿಪ್ ಫಾರ್ ಕಾರ್ಯಕ್ರಮವನ್ನು ರೂಪಿಸಿದೆ.
‘ಬಡ್ಡಿ4ಸ್ಟಡಿ‘ ಸಂಸ್ಥೆ ಈ ಸ್ಕಾಲರ್‌ಷಿಪ್‌ಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಶುಲ್ಕದ ಕಾರಣಕ್ಕಾಗಿ ಉನ್ನತ ವಿದ್ಯಾಭ್ಯಾಸದಿಂದ ಹಿಂದುಳಿಯುವಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಅರ್ಹತೆ:
* ನಿಗದಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಎಂಬಿಎ/ಎಂ.ಎ(ಎಕನಾಮಿಕ್ಸ್) ಪದವಿಗಳಿಗೆ ದಾಖಲಾದ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು.
* ಅರ್ಜಿದಾರರು 12 ನೇ ತರಗತಿ ಅಥವಾ ಪದವಿಯಲ್ಲಿ ಉತ್ತೀರ್ಣರಾಗಿರಬೇಕು ಶೇ 60 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
* ವಾರ್ಷಿಕ ಕುಟುಂಬದ ಆದಾಯ ₹5ಲಕ್ಷಕ್ಕಿಂತ ಕಡಿಮೆ ಇರಬೇಕು.(ಬಡ್ಡಿ4ಸ್ಟಡಿ ಮೂಲಕ ಪರಿಶೀಲನೆಗೆ ಒಳಪಟ್ಟಿರುತ್ತದೆ)
ಆರ್ಥಿಕ ನೆರವು: ಒಟ್ಟು ಶುಲ್ಕದ ಶೇ 80ವರೆಗೆ ಅಥವಾ ₹2,00,000 ವರೆಗಿನ ಸ್ಥಿರ ಮೊತ್ತ, ಯಾವುದು ಕಡಿಮೆಯಿರುತ್ತದೋ ಅಷ್ಟು ಹಣವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನ: 24–12–2022
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ
ಹೆಚ್ಚಿನ ಮಾಹಿತಿಗೆ: www.b4s.in/praja/CSE4
****
ಲಡೂಮಾ ದಮೆಚಾ ಯುವಾ ಸ್ಕಾಲರ್‌ಷಿಪ್ ಪ್ರೋಗ್ರಾಂ 2022
ವಿವರ:ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡುವುದು ಈ ಸ್ಕಾಲರ್‌ಷಿಪ್ ಕಾರ್ಯಕ್ರಮದ ಉದ್ದೇಶವಾಗಿದೆ.
ಅರ್ಹತೆ:10 /12 ನೇ ತರಗತಿ ಪರೀಕ್ಷೆಯಲ್ಲಿ ಶೇ 85 ಅಂಕಗಳೊಂದಿಗೆ ಉತ್ತೀರ್ಣರಾದ ಅಹಮದಾಬಾದ್, ಮುಂಬೈ, ಬೆಂಗಳೂರು ಮತ್ತು ದೆಹಲಿ ಎನ್‌ಸಿಆರ್ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್ ಪಡೆಯಲು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಜೆಇಇ/ನೀಟ್ ಕೋಚಿಂಗ್ ಪಡೆಯುತ್ತಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹ 3ಲಕ್ಷ ಮೀರಿರಬಾರದು.
ಆರ್ಥಿಕ ನೆರವು:ವಾರ್ಷಿಕ ₹ 50,000
ಅರ್ಜಿ ಸಲ್ಲಿಕೆಗೆ ಕೊನೆ ದಿನ: 30–11–2022
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/YUUS1
****
ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2022
ವಿವರ:ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್‌ಆರ್ ಯೋಜನೆಯಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್ 12 ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಂದ ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2022ಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಹೆಸರಾಂತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೃತ್ತಿಪರ ಪದವಿ ಕೋರ್ಸ್‌ಗಳನ್ನು ಮುಂದುವರಿಸಲು ನೆರವಾಗುವ ಗುರಿ ಈ ಕಾರ್ಯಕ್ರಮದ್ದು.
ಅರ್ಹತೆ: ಪ್ರತಿಷ್ಠಿತ ಸಂಸ್ಥೆಗಳಿಂದ (ಎನ್‍ಎಎಸಿ/ಎನ್‌ಐಆರ್‌ಎಫ್ ಮಾನ್ಯತೆ ಪಡೆದ) ವೃತ್ತಿಪರ ಕೋರ್ಸ್‌ಗಳಲ್ಲಿ 1 ನೇ ವರ್ಷದ ಪದವಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದ ಪ್ರತಿಭಾವಂತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸ ಬಹುದು. ವೃತ್ತಿಪರ ಕೋರ್ಸ್‌ಗಳಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಆರ್ಕಿಟೆಕ್ಚರ್, ಡಿಸೈನ್, ಇಂಟಿಗ್ರೆಟೆಡ್ ಎಲ್‌ಎಲ್‌ಬಿ ಇತ್ಯಾದಿ ವೃತ್ತಿಪರ ಪದವಿ ಕೋರ್ಸ್‌ಗಳು ಸೇರಿವೆ.
ಅರ್ಜಿದಾರರು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ 75ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ರೂ.3,20,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು
ಆರ್ಥಿಕ ನೆರವು: ವಾರ್ಷಿಕ ₹1.5 ಲಕ್ಷದ ವರೆಗೆ
ಅರ್ಜಿ ಸಲ್ಲಿಕೆಗೆ ಕೊನೆ ದಿನ: 30–11–2022
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/KKGS12
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.