ADVERTISEMENT

ಶಿಕ್ಷಣ: ಐಟಿ ಕ್ಷೇತ್ರದಲ್ಲಿ ಕೋಡಿಂಗ್ ಕಲಿಕೆ ಅಗತ್ಯವೇ?

ರವಿಚಂದ್ರ ಎಂ.
Published 13 ಅಕ್ಟೋಬರ್ 2024, 21:30 IST
Last Updated 13 ಅಕ್ಟೋಬರ್ 2024, 21:30 IST
   

ಮಾಹಿತಿ ತಂತ್ರಜ್ಞಾನ ಪ್ರೋಗ್ರಾಮಿಂಗ್ ಅಥವಾ ಕೋಡಿಂಗ್ ಕೌಶಲ ಬಯಸುವ ಕ್ಷೇತ್ರ ಎಂಬ ಭಾವನೆ ಜನಜನಿತವಾದುದು. ಕೆಲವು ಪದವೀಧರರು ತಮಗೆ ಕೋಡಿಂಗ್ ಕಬ್ಬಿಣದ ಕಡಲೆ ಎಂಬ ಭಾವನೆಯಿಂದ ಹೊರಬರಲು ಸಾಧ್ಯವಾಗದೆ ಐ. ಟಿ ಕ್ಷೇತ್ರ ದಲ್ಲಿ ವೃತ್ತಿ ಬದಕು ಕಂಡುಕೊಳ್ಳದೆ ಬೇರೆ ಉದ್ಯೋಗ ದತ್ತ ಮುಖ ಮಾಡುವುದು ಇದೆ. ನಿಜ ಹೇಳಬೇಕಂದರೆ ಐ.ಟಿ ಕ್ಷೇತ್ರದ ಎಲ್ಲ ಹುದ್ದೆಗಳಿಗೆ ಕೋಡಿಂಗ್ ಕೌಶಲದ ಅವಶ್ಯಕತೆ ಇಲ್ಲ ಎಂಬುದನ್ನು ನಾವು ತಿಳಿಯಬೇಕಿದೆ. ಅಂತಹ ಪ್ರಮುಖ ಕ್ಷೇತ್ರ ಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಇಲ್ಲಿದೆ.

ಟೆಕ್ನಿಕಲ್ ರೈಟರ್

ಉದ್ಯೋಗದ ಪರಿಧಿ: ತಾಂತ್ರಿಕ ಬರಹಗಾರರು ಅನೇಕ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಉತ್ಪನ್ನ ಗಳನ್ನು ಬಳಸುವ ವಿಧಾನಗಳ ಬಗ್ಗೆ ಸೂಚ್ಯವಾಗಿ ಸರಳ ಭಾಷೆ ಯಲ್ಲಿ ಕಡತ ಗಳನ್ನು ಬರೆಯುತ್ತಾರೆ.

ಬೇಕಾದ ಕೌಶಲ: ಸರಳ ಭಾಷೆಯಲ್ಲಿ ಬರೆಯುವ ಶಕ್ತಿ ಮತ್ತು ತಾಂತ್ರಿಕ ವಿಚಾರಗಳ ಗ್ರಹಿಸುವ ಸಾಮರ್ಥ್ಯ

ADVERTISEMENT

ಪ್ರಮುಖ ಸರ್ಟಿಫಿಕೇಷನ್‌ಗಳು: Certified Technical Communicator (CTC), Certified Information Systems Auditor (CISA)

ಯೂಸರ್ ಎಕ್ಸ್ ಪೀರಿಯನ್ಸ್ (UX) ಡಿಸೈನ್

ಉದ್ಯೋಗದ ಪರಿಧಿ: ಮೊಬೈಲ್ ಫೋನ್ ಮತ್ತು ಇತರೆ ಡಿಜಿಟಲ್ ಉತ್ಪನ್ನಗಳ ಬಳಕೆ ಹೆಚ್ಚಿದಂತೆ ಈ ಉತ್ಪನ್ನಗಳ ಬಳಕೆದಾರಿಗೆ ಮನ ಮುಟ್ಟುವ ಡಿಸೈನ್/ವಿನ್ಯಾಸ ಅಕ್ಷರ ಗಾತ್ರ, ಸುಲಭವಾಗಿ ಬಳಸಲು ಅನುವು ಮಾಡಿಕೊಡುವುದು ಈ ಪರಿಣಿತರ ಕಾರ್ಯ.

ಬೇಕಾದ ಕೌಶಲ: ಸೃಜನಶೀಲತೆ ಮತ್ತು ಬಳಕೆದಾರರ ಮನಸ್ಥಿತಿ ಅರಿಯಬಲ್ಲ ಮಾನಸಿಕ ತಜ್ಞರ ಕೌಶಲ

ಪ್ರಮುಖ ಸರ್ಟಿಫಿಕೇಷನ್‌ಗಳು: Certified User Experience Professional (CUX-P), Certified User Experience Designer (CXD)

ಸೈಬರ್ ಸೆಕ್ಯುರಿಟಿ ಎನಾಲಿಸ್ಟ್

ಉದ್ಯೋಗದ ಪರಿಧಿ: ಗಣಕ ಯಂತ್ರ ಮತ್ತು ಗಣಕ ನೆಟ್ವರ್ಕ್/ಜಾಲಗಳ ಸುರಕ್ಷತೆ ಬಗ್ಗೆ ಗಮನ ಹರಿಸುವುದು ಮತ್ತು ಸೈಬರ್ ಕ್ರೈಂ ಗಳ ಬಗ್ಗೆ ಅಧ್ಯಯನ ನೆಡಸುವುದು.

ಬೇಕಾದ ಕೌಶಲ: ಕಠಿಣ ಮತ್ತು ಗೋಜಲು ಸನ್ನಿವೇಶ ಗಳ ನಿರ್ವಹಣೆ ಮಾಡುವ ಛಾತಿ, ಗಣಕ ವಿಜ್ಞಾನದಲ್ಲಿನ ಸುರಕ್ಷತೆ ರೀತಿ ರೀವಾಜುಗಳನ್ನು ಅಧ್ಯಯನ ಮಾಡುವುದು.

ಪ್ರಮುಖ ಸರ್ಟಿಫಿಕೇಷನ್‌ಗಳು: Certified Information Systems Security Professional (CISSP), Certified Ethical Hacker (CEH).

ಐ.ಟಿ ಸಪೋರ್ಟ್ ಸ್ಪೆಷಲಿಸ್ಟ್: (ಐ. ಟಿ ಪೂರಕ /ಸಹಾಯಕ ಹುದ್ದೆ)

ಉದ್ಯೋಗದ ಪರಿಧಿ: ಕಂಪ್ಯೂಟರ್ ಮತ್ತು ಇತರೆ ಡಿಜಿಟಲ್ ಸೇವೆ ಪಡೆಯುವ ಗ್ರಾಹಕರು ಎದರುಸುವ ದಿನ ನಿತ್ಯ ತೊಂದರೆಗಳನ್ನು ಪರಿಹರಿಸುವ ಸಹಾಯಕ ಕಾಯಕ ಇದು.

ಬೇಕಾದ ಕೌಶಲ: ಗ್ರಾಹಕ ಸ್ನೇಹಿ ಕೌಶಲ್ಯ, ತಾಂತ್ರಿಕ ದೋಷಗಳ ಗುರುತಿಸುವ ಕಲೆ, ತಂತ್ರಜ್ಞಾನ ಹೇಗೆ ಕಾರ್ಯ ನಿರ್ವಹಣೆ ಮಾಡುತ್ತೆ ಎಂಬ ಬಗ್ಗೆ ಜ್ಞಾನ.

ಪ್ರಮುಖ ಸರ್ಟಿಫಿಕೇಷನ್‌ಗಳು: CompTIA A+, Microsoft Certified: Azure Fundamentals

ಡೇಟಾ ಎನಾಲಿಸ್ಟ್ (ದತ್ತಾಂಶ ವಿಶ್ಲೇಷಕರು)

ಉದ್ಯೋಗದ ಪರಿಧಿ: ದತ್ತಾಂಶ ಸಂಗ್ರಹ ಮತ್ತು ವಿಶ್ಲೇಷಣೆ ಮಾಡುವುದು ಮತ್ತು ದತ್ತಾಂಶ ವಿಶ್ಲೇಷಣೆಯಿಂದ ತಮ್ಮ ಸಂಸ್ಥೆಗೆ ಆಗುವ ಅನುಕೂಲ ಗಳ ಬಗ್ಗೆ ಮಾಹಿತಿ ನೀಡುವುದು.

ಬೇಕಾದ ಕೌಶಲ: ಸದೃಢ ವಾದ ವಿಶ್ಲೇಷಣೆ ಗುಣ ಮತ್ತು ಮಾಹಿತಿ ವಿಶ್ಲೇಷಣೆ ಮಾಡುವ ಸಲಕರಣೆ ಗಳ ಬಳಸುವ ಕಲೆ.

ಪ್ರಮುಖ ಸರ್ಟಿಫಿಕೇಷನ್‌ಗಳು: Certified Data Analyst (CDA), Certified Business Intelligence Professional (CBIP).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.