ADVERTISEMENT

JEE Main 2022 Exam Result: ಸೆಷನ್–2ರ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 6:50 IST
Last Updated 8 ಆಗಸ್ಟ್ 2022, 6:50 IST
ಐಸ್ಟಾಕ್ ಚಿತ್ರ
ಐಸ್ಟಾಕ್ ಚಿತ್ರ   

ಬೆಂಗಳೂರು: ಜೆಇಇ (ಜಂಟಿ ಪ್ರವೇಶ ಪರೀಕ್ಷೆ )ಮೇನ್–2022ರ ಸೆಷನ್ 2ರ ಅವಧಿಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ಜೆಇಇ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಬಿಡುಗಡೆ ಮಾಡಿದೆ.

ಇದರಲ್ಲಿ 24 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಅಧಿಕೃತ ವೆಬ್‌ಸೈಟ್‌ಗಳಾದ jeemain.nta.nic.in, ntaresults.nic.in.ನಲ್ಲಿ ಅರ್ಜಿ ಸಂಖ್ಯೆ, ಜನ್ಮ ದಿನಾಂಕ ಬಳಸಿ, ಅಭ್ಯರ್ಥಿಗಳು ಫಲಿತಾಂಶ ನೋಡಬಹುದು ಮತ್ತು ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ADVERTISEMENT

JEE Main 2022ರ ಫಲಿತಾಂಶ ನೋಡುವುದು ಹೇಗೆ?

JEE Main 2022ರ ಸ್ಕೋರ್‌ಕಾರ್ಡ್ ಅನ್ನು ವೆಬ್‌ಸೈಟ್‌ಗಳಲ್ಲಿ ಡೌನ್‌ಲೋಡ್ ಮಾಡಲು- jeemain.nta.nic.in, nta.ac.in ಲಿಂಕ್ ಅನ್ನು ಕ್ಲಿಕ್ ಮಾಡಿ. ಲಾಗಿನ್ ಮಾಹಿತಿಗಳಾದ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ. ಬಳಿಕ, ಜೆಇಇ ಮುಖ್ಯ ಪರೀಕ್ಷೆ ಸೆಷನ್ 2ರ ಫಲಿತಾಂಶವು ಪರದೆಯ ಮೇಲೆ ಗೋಚರಿಸುತ್ತದೆ, ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳಿ.

ಜೆಇಇ ಮುಖ್ಯ ಪರೀಕ್ಷೆ 2022ಸೆಷನ್ 2ರ ಪರೀಕ್ಷೆ ಜುಲೈ 25 ಮತ್ತು ಜುಲೈ 30 ರ ನಡುವೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.