ADVERTISEMENT

ದಕ್ಷಿಣ ಕನ್ನಡ | SSLC ಪರೀಕ್ಷೆ–2: ಮೂಡುಬಿದಿರೆ ಬ್ಲಾಕ್‌ ಗರಿಷ್ಠ ಸಾಧನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 11:11 IST
Last Updated 10 ಜುಲೈ 2024, 11:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ಕಳೆದ ತಿಂಗಳ 14ರಂದು ನಡೆದ ಎಸ್‌ಎಸ್‌ಎಲ್‌ಸಿ–2 ಪರೀಕ್ಷೆಯಲ್ಲಿ ಮಂಗಳೂರು ಶೈಕ್ಷಣಿಕ ಜಿಲ್ಲೆಯ ಪೈಕಿ ಮೂಡುಬಿದಿರೆ ಬ್ಲಾಕ್‌ ಗರಿಷ್ಠ ಸಾಧನೆ ಮಾಡಿದ್ದು ಶೇಕಡ 45.69 ಸಾಧನೆ ಆಗಿದೆ. ಈ ಬ್ಲಾಕ್‌ನಲ್ಲಿ ಒಟ್ಟು 116 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 53 ಮಂದಿ ತೇರ್ಗಡೆ ಹೊಂದಿದ್ದಾರೆ.

ಪುತ್ತೂರು ಬ್ಲಾಕ್‌ನಲ್ಲಿ ಶೇ 45.15ರಷ್ಟು ಸಾಧನೆ ಆಗಿದೆ. ಇಲ್ಲಿ ಪರೀಕ್ಷೆ ಬರೆದ 259 ವಿದ್ಯಾರ್ಥಿಗಳ ಪೈಕಿ 117 ಮಂದಿ ತೇರ್ಗಡೆ ಹೊಂದಿದ್ದಾರೆ. ಬಂಟ್ವಾಳ ಬ್ಲಾಕ್‌ನಲ್ಲಿ ಅತಿ ಕಡಿಮೆ ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 470 ಮಂದಿ ಪೈಕಿ 134 ಮಂದಿ ತೇರ್ಗಡೆ ಹೊಂದಿದ್ದಾರೆ ಎಂದು ಡಿಡಿಪಿಐ ವೆಂಕಟೇಶ ಪಟಗಾರ ತಿಳಿಸಿದ್ದಾರೆ.

ADVERTISEMENT

ಬೆಳ್ತಂಗಡಿ ಬ್ಲಾಕ್‌ನಲ್ಲಿ 207ರ ಪೈಕಿ 90 (ಶೇ 43.48), ಮಂಗಳೂರು ಉತ್ತರದಲ್ಲಿ 539ರ ಪೈಕಿ 223 (ಶೇ 41.37), ಮಂಗಳೂರು ದಕ್ಷಿಣದಲ್ಲಿ 397ರ ಪೈಕಿ 131 (ಶೇ33) ಮತ್ತು ಸುಳ್ಯದಲ್ಲಿ 149ರ ಪೈಕಿ 62 (ಶೇ 41.61) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಜಿಲ್ಲೆಯಲ್ಲಿ 1555 ವಿದ್ಯಾರ್ಥಿಗಳು ಮತ್ತು 582 ವಿದ್ಯಾರ್ಥಿನಿಯರು (ಒಟ್ಟು 2137) ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 810 ಮಂದಿ ಪಾಸಾಗಿದ್ದಾರೆ. ಪಾಸಾದವರ ಪೈಕಿ ವಿದ್ಯಾರ್ಥಿಗಳೇ ಹೆಚ್ಚು, 485 ಮಂದಿ ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು ಶೇ 37.90ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.