ಕೋರಮಂಗಲದ ಎನ್‍ಜಿವಿ ಕ್ಲಬ್‍ನಲ್ಲಿ ‘ಕಿತಾಬೇ ಮತ್ತು ಕಾಫಿ’ ಎಂಬ ವಿಶಿಷ್ಟ ಪುಸ್ತಕ ಮೇಳವು ಸೆ. 19ರಿಂದ 22ರವರೆಗೆ ನಡೆಯಲಿದೆ. ಇಲ್ಲಿ 20ಕ್ಕೂ ಹೆಚ್ಚು ಪ್ರಕಾರಗಳ 90 ಸಾವಿರ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.
ದಕ್ಷಿಣ ಭಾರತದ ಅತ್ಯುತ್ತಮ ಕಾಫಿ ಸಂಸ್ಥೆಗಳ, ಸಾವಯವ ಕಾಫಿ ತೋಟಗಳಲ್ಲಿ ಬೆಳೆದ ಸ್ವಾದಿಷ್ಟಕರ ಕಾಫಿ ಕೂಡಾ ಇಲ್ಲಿ ಲಭ್ಯ.
ವೆಲ್ಲೂರು ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ವಿಜ್ಞಾನ ಎಂಜಿನಿಯರಿಂಗ್ ಪೂರ್ಣಗೊಳಿಸಿ, ಬಳಿಕ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ ಜೈಪುರ ಮೂಲದ ಉದ್ಯಮಿ ಸೌರಭ್ ಸಿಂಗ್ ಅವರ ಕಲ್ಪನೆಯ ಕೂಸು www.kitabay.com ಈ ವಿಶಿಷ್ಟ ಪುಸ್ತಕ ಮೇಳವನ್ನು ಆಯೋಜಿಸಿದೆ. ಓದುಗರ ಬೇಡಿಕೆ ಮತ್ತು ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಪುಸ್ತಕಗಳನ್ನು ಪೂರೈಸುವಂಥ ಆನ್‍ಲೈನ್ ಪ್ಲಾಟ್‍ಫಾರಂ ಇದು.
‘ಕಿತಾಬೇ ಮತ್ತು ಕಾಫಿ’ ಮೇಳದಲ್ಲಿ ಹೊಸ ಹಾಗೂ ಜನಪ್ರಿಯ 90 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿದೆ.ಮೇಳದ ಮತ್ತೊಂದು ವಿಶೇಷತೆಯೆಂದರೆ ಪುಸ್ತಕ ಪ್ರೇಮಿಗಳು ತಮ್ಮ ಆಯ್ಕೆಗೆ ಹೊಂದುವಂಥ ಬಾಕ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇಲ್ಲಿ ಕನಿಷ್ಠ 10- 12 ಪುಸ್ತಕಗಳನ್ನು ತುಂಬಬಹುದಾದ ಪುಟ್ಟ ಬಾಕ್ಸ್ ಬೆಲೆ ₹ 999 ರೂಪಾಯಿಗಳು. 15-18 ಪುಸ್ತಕಗಳನ್ನು ತುಂಬುವ ಮಧ್ಯಮ ಗಾತ್ರದ ಬಾಕ್ಸ್ ₹ 1499 ರೂಪಾಯಿಗಳಲ್ಲಿ ಲಭ್ಯ. 30-33 ಪುಸ್ತಕಗಳ ಬಾಕ್ಸ್ ₹ 2499 ರೂಪಾಯಿಗಳಲ್ಲಿ ಲಭ್ಯ.
ಪುಸ್ತಕ ಮೇಳ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 10ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.