ADVERTISEMENT

ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 20:00 IST
Last Updated 8 ಫೆಬ್ರುವರಿ 2023, 20:00 IST
   

1) ಇನ್‌ಕೋವಾಕ್ (INCOVACC) ಏನಿದು?

ಎ) ಮೂಗಿನ ಮೂಲಕ ನೀಡುವ ವಿಶ್ವದ ಮೊದಲ ಕೋವಿಡ್ ಲಸಿಕೆ

ಬಿ) ಜಾನುವಾರುಗಳಲ್ಲಿನ ಕಾಲು ಬಾಯಿ ಮತ್ತು ಚರ್ಮಗಂಟು ರೋಗ ತಡೆಗೆ ಕಂಡು ಹಿಡಿಯಲಾದ ಹೊಸ ಲಸಿಕೆ

ADVERTISEMENT

ಸಿ) ಕಣ್ಣು ಬೇನೆ ತಡೆಗೆ ಕಂಡು ಹಿಡಿಯಲಾದ ಹೊಸರೀತಿಯ ಲಸಿಕೆ

ಡಿ) ಮೇಲಿನ ಯಾವ ಕಾರಣಕ್ಕಾಗಿಯೂ ಅಲ್ಲ

ಉತ್ತರ: ಎ

2) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಏಷ್ಯಾದಲ್ಲಿ ಇದೇ ಮೊದಲಬಾರಿಗೆ ಹೈಡ್ರೋಜನ್ ಆಧರಿತ ಸೆಮಿ ಹೈಸ್ಪೀಡ್ ರೈಲನ್ನು ಚೀನಾ ದೇಶ ಅಳವಡಿಸಿಕೊಂಡಿದೆ. ಜಗತ್ತಿನಲ್ಲಿ ಮೊದಲು ಜರ್ಮನಿ ಈ ತರಹದ ರೈಲನ್ನು ಬಳಕೆಗೆ ತಂದಿತ್ತು.

2) ಚೀನ ದೇಶ ಬಳಸುವ ಹೈಡ್ರೋಜನ್ ಆಧರಿತ ಸೆಮಿ ಹೈಸ್ಪೀಡ್ ರೈಲು ಒಮ್ಮೆ ಹೈಡ್ರೋಜನ್ ಇಂಧನ ಕೋಶವನ್ನು ಚಾರ್ಜ್ ಮಾಡಿದರೆ ಗಂಟೆಗೆ 160 ಕಿ.ಮೀ ವೇಗದಲ್ಲಿ 600 ಕಿ.ಮೀ ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಉತ್ತರ ಸಂಕೇತಗಳು
ಎ) ಹೇಳಿಕೆ 1 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 2 ಮಾತ್ರ ಸರಿಯಾಗಿದೆ.
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ)1 ಮತ್ತು 2 ಎರಡೂ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಭಾಗಶಃ ಬಿಳಿ ಬಣ್ಣದ ಸೀಳು ನಾಯಿ(Partial albino dhole wild dogs) ಇದೇ ಮೊದಲಬಾರಿಗೆ ನಮ್ಮ ರಾಜ್ಯದ ಕಾವೇರಿ ವನ್ಯಧಾಮದಲ್ಲಿ ಪತ್ತೆಯಾಗಿದೆ. ಭಾರತ, ನೇಪಾಳ, ಬಾಂಗ್ಲಾದೇಶ, ಭೂತಾನ್, ಕಾಂಬೊಡಿಯಾ, ಚೀನ, ಇಂಡೋನೇಷಿಯಾ, ಮೊದಲಾದ 11 ದೇಶಗಳಲ್ಲಿ ಸೀಳು ನಾಯಿಗಳು ಕಾಣಬರುತ್ತದೆ.

2) ಅಂತರರಾಷ್ಟ್ರೀಯ ನಿಸರ್ಗ ಸಂರಕ್ಷಣಾ ಸಂಸ್ಥೆ(ಐಯುಸಿಎನ್) ಪ್ರಕಾರ ಅಫ್ಗಾನಿಸ್ತಾನ, ಕೊರಿಯಾ, ಮಂಗೂಲಿಯಾ ದೇಶಗಳಲ್ಲಿ ಸೀಳುನಾಯಿಗಳು ಸಂಪೂರ್ಣ ನಾಶವಾಗಿವೆ. ಭಾರತದಲ್ಲಿ ಸೀಳು ನಾಯಿಗಳು ವನ್ಯ ಜೀವಿ ಸಂರಕ್ಷಣಾ ಕಾಯ್ದೆ-1972ರ ಅಧಿನಿಯಮ-2ರಲ್ಲಿ ಸಂರಕ್ಷಿತಗೊಂಡಿವೆ.

ಉತ್ತರ ಸಂಕೇತಗಳು
ಎ) ಹೇಳಿಕೆ 2 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 1 ಮಾತ್ರ ಸರಿಯಾಗಿದೆ.
ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ
ಡಿ) ಹೇಳಿಕೆ 1 ಮತ್ತು 2 ಎರಡೂ ಸರಿಯಾಗಿವೆ

ಉತ್ತರ: ಡಿ

4) ಜನವರಿ 23 ಅನ್ನು‘ಪರಾಕ್ರಮ ದಿವಸ್‘ ಎಂದು ಆಚರಿಸಲಾಗುತ್ತದೆ. ಹಾಗಾದರೆ ಆ ದಿನ ಯಾರ ಜನ್ಮದಿನ?

ಎ) ಜವಾಹರ್ ಲಾಲ್ ನೆಹರೂ

ಬಿ) ರಾಜಗುರು
ಸಿ) ಲಚಿನ್ ಬರ್ಬೂಕನ್

ಡಿ) ನೇತಾಜಿ ಸುಭಾಷ್ ಚಂದ್ರ ಬೋಸ್

‌ಉತ್ತರ: ಡಿ

5) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1)ದೆಹಲಿಯಲ್ಲಿ ಜ.26ರಂದು ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ‘ನಾರಿಶಕ್ತಿ ಸ್ಥಬ್ದಚಿತ್ರ’ ಪ್ರದರ್ಶಿಸಲಾಯಿತು. ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಪದ್ಮ ಪ್ರಶಸ್ತಿಗೆ ಪಾತ್ರರಾದ ಮಹಿಳೆಯರ ಸ್ಥಬ್ದಚಿತ್ರವನ್ನು ಪ್ರದರ್ಶಿತವಾಗಿತ್ತು

2) ಈ ಸಲದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕದಿಂದ ಪ್ರದರ್ಶಿತ ಸ್ಥಬ್ದ ಚಿತ್ರದಲ್ಲಿ ಸೂಲಗಿತ್ತಿ ನರಸಮ್ಮ, ತುಳಸಿ ಬೊಮ್ಮಗೌಡ, ಸಾಲುಮರದ ತಿಮ್ಮಕ್ಕ ಅವರ ಚಿತ್ರಗಳಿದ್ದವು.

ಉತ್ತರ ಸಂಕೇತಗಳು‌‌

ಎ) ಹೇಳಿಕೆ 1 ಮತ್ತು 2ಸರಿಯಾಗಿದೆ

ಬಿ) ಹೇಳಿಕೆ 1 ಮಾತ್ರ ಸರಿಯಾಗಿದೆ.

ಸಿ) ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ) ಹೇಳಿಕೆ 2 ಮಾತ್ರ ಸರಿಯಾಗಿವೆ

ಉತ್ತರ: ಎ

6) ಈ ಸಲ ನಡೆದ ಗಣರಾಜ್ಯೋತ್ಸವದಲ್ಲಿ ಯಾರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು?

ಎ) ಶೇಖ್ ಹಸಿನಾ (ಬಾಂಗ್ಲಾದೇಶ್)

ಬಿ) ಪುಷ್ಪ ಕಮಲ್ ಧಹಲ್ -ಪ್ರಚಂಡ (ನೇಪಾಳ್)
ಸಿ) ಅಬ್ದೆಲ್ ಫತ್ತಾಹ್ ಎಲ್-ಸಿಸಿ

(Abdel Fattah el-Sisi) (ಈಜಿಪ್ಟ್‌)

ಡಿ) ಡೋನಾಲ್ದ್ ಟ್ರಂಪ್

ಉತ್ತರ: ಸಿ

7) ‘ಪರಾಕ್ರಮ್ ದಿವಸ್’ ಸಂದರ್ಭದಲ್ಲಿ ಭಾರತದಲ್ಲಿರುವ ಇನ್ನೂ ಹೆಸರಿಡದ ಸುಮಾರು ………..ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ವಿಜೇತರ ಹೆಸರನ್ನು ಇಡಲಾಗಿದೆ


ಎ) 18 →→ಬಿ) 21

ಸಿ) 25 →→ಡಿ) 30

ಉತ್ತರ: ಬಿ

8) ಡೈನೊಸಾರಸ್‌ಗಳಲ್ಲಿ ಅತ್ಯಂತ ದೊಡ್ಡದಾದ ಟಿಟಿನೊಸಾರಸ್‌ಗಳ 256 ಮೊಟ್ಟೆಗಳ ಪಳೆಯುಳಿ ಕೆಗಳು ಎಲ್ಲಿ ದೊರೆತಿವೆ?

ಎ) ತಮಿಳುನಾಡಿನ ರಾಮೇಶ್ವರ

ಬಿ) ಕೇರಳದ ಇಡುಕ್ಕಿ

ಸಿ) ಮಧ್ಯಪ್ರದೇಶದ ಧಾರ ಜಿಲ್ಲೆಯ ನರ್ಮದಾ ಕಣಿವೆಯಲ್ಲಿ

ಡಿ) ಮಹಾರಾಷ್ಟ್ರದ ಪುಣೆ

ಉತ್ತರ: ಸಿ

9) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ನಾರಾಯಣಪುರ ಎಡದಂಡೆ ಕಾಲುವೆಯು ಸ್ಕಾಡಾ ತಂತ್ರಜ್ಞಾನ ಬಳಸಿದ ದೇಶದ ಮೊದಲ ಸ್ವಯಂ ಚಾಲಿತ ನೀರಾವರಿ ವಿತರಣೆ ಹೊಂದಿರುವ ಕಾಲುವೆಯಾಗಿದೆ.

2) ನಾರಾಯಣಪುರ ಎಡದಂಡೆ ಕಾಲುವೆ ನಾರಾಯಣಪುರ ಅಣೆಕಟ್ಟಿನಿಂದ ಪ್ರಾರಂಭವಾಗಿ ಮತ್ತು 14.5 ಲಕ್ಷ ಹೆಕ್ಟೆರ್‌ ಕಮಾಂಡ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 20 ಸಾವಿರ ಕ್ಯೂಸೆಕ್ಸ್ ನೀರು ಸಾಗಿಸುವ ಸಾಮರ್ಥ್ಯವನ್ನು ಕಾಲುವೆ ಹೊಂದಿದೆ.

3) ನಾರಾಯಣಪುರ ಎಡದಂಡೆ ಕಾಲುವೆ ವ್ಯವಸ್ಥೆಯಲ್ಲಿ 365 ಸ್ವಯಂಚಾಲಿತ ಇಂಟಿಗ್ರೇಟೆಡ್ ಗೇಟುಗಳಿಗೆ ಸ್ಕಾಡಾ ತಂತ್ರಜ್ಞಾನ (SCADA (Supervisory Control and Data Acquisition)) ಅಳವಡಿಸಲಾಗುತ್ತದೆ.

ಉತ್ತರ ಸಂಕೇತಗಳು

ಎ) ಹೇಳಿಕೆ 1 ಮತ್ತು 3 ಮಾತ್ರ ಸರಿಯಿದೆ
ಬಿ) ಹೇಳಿಕೆ 1 ಮತ್ತು 2 ಮಾತ್ರ ಸರಿಯಿದೆ
ಸಿ) ಹೇಳಿಕೆ 2, ಮತ್ತು 3 ಮಾತ್ರ ಸರಿಯಿದೆ
ಡಿ) 1 ರಿಂದ 4ರ ತನಕ ಎಲ್ಲವೂ ಸರಿಯಿದೆ

ಉತ್ತರ: ಎ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.