ಕೆಪಿಎಸ್‌ಸಿ ‘ಗ್ರೂಪ್-ಸಿ’ಯ ವಿವಿಧ ಹುದ್ದೆಗಳು, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿಶೇಷ ಮೀಸಲು ಸಬ್ಇನ್‌ಸ್ಪೆಕ್ಟರ್ (ಕೆಎಸ್‌ಆರ್‌ಪಿ ಆ್ಯಂಡ್ ಐಆರ್‌ಬಿ) ಹಾಗೂ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇರ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.
**
1) ಬ್ರಿಟನ್‌ನ ಪ್ರತಿಷ್ಟಿತ ವಿಟ್ಲೆ ಫಂಡ್ ಫಾರ್ ನೇಚರ್ ನೀಡುವ ‘ವಿಟ್ಲೆ ಗೋಲ್ಡ್ ಅವಾರ್ಡ್’ ಅನ್ನು ಈ ಕೆಳಗೆ ಉಲ್ಲೇಖಿಸಿರುವ ಯಾರಿಗೆ ನೀಡಲಾಗಿದೆ?
ಎ) ಡಾ. ಚಾರುದತ್ತ ಮಿಶ್ರಾ ಬಿ) ಡಾ. ಉಲ್ಲಾಸ ಕಾರಂತ ಸಿ) ಕೃತಿ ಕಾರಂತ ಡಿ) ಭಾಗಿರಥಿ ಭೂಮಿಹಾಳ
ಉತ್ತರ : ಎ
2) ಮಾನವ ಮುಖವುಳ್ಳ ಕೀಟವೊಂದು ಇತ್ತೀಚೆಗೆ ಕರ್ನಾಟಕದಲ್ಲಿ ಪತ್ತೆಯಾಗಿದೆ. ಹಾಗಾದರೆ ಅದು ಎಲ್ಲಿ ಪತ್ತೆಯಾಗಿದೆ?
ಎ) ಚಾಮರಾಜನಗರ ಬಿ) ದೊಡ್ಡಬಳ್ಳಾಪುರ
ಸಿ) ಉಡುಪಿ ಡಿ) ಚಿತ್ರದುರ್ಗ
ಉತ್ತರ: ಸಿ
3) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) 2006ರಲ್ಲಿ ಟ್ವಿಟರ್ ಸಾಮಾಜಿಕ ಜಾಲತಾಣ ಆರಂಭವಾಯಿತು. 2013ರಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿತು. ಈಗ ಇದನ್ನು ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ ಖರೀದಿಸಿದ್ದಾರೆ.
2) ಭಾರತದ ಮೂಲದ ಪರಾಗ್ ಅಗ್ರವಾಲ್ ಟ್ವಿಟರ್‌ನ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲಾನ್ ಮಸ್ಕ್ ಇವರನ್ನು ಟ್ವಿಟರ್‌ನಿಂದ ಹೊರ ಹಾಕಬಹುದು ಎಂಬ ವರದಿಗಳೂ ಇವೆ.
ಉತ್ತರ ಸಂಕೇತಗಳು
ಎ) 1 ನೇ ಹೇಳಿಕೆ ಮಾತ್ರ ಸರಿಯಾಗಿದೆ
ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಎರಡೂ ಹೇಳಿಕೆಗಳು ಸರಿಯಾಗಿವೆ
ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ.
ಉತ್ತರ: ಸಿ
4) ಐರೋಪ್ಯ ಒಕ್ಕೂಟ ಮತ್ತು ಭಾರತದ ನಡುವೆ ವಾಣಿಜ್ಯ ಮತ್ತು ತಂತ್ರಜ್ಞಾನ ಮಂಡಳಿ ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಯೂರೋಪಿಯನ್ ಯೂನಿಯನ್ ಅಧ್ಯಕ್ಷೆ………………………….. ಒಪ್ಪಿಗೆ ಸೂಚಿಸಿದ್ದಾರೆ.
ಎ) ವಾರೆನ್ ಡೆರ್ ಜೆಲುನೆಸ್ಕಿ
ಬಿ) ಮಾಕ್ರೋನಿ ಮ್ಯಾಕ್ರನ್
ಸಿ) ಉರ್ಸುಲಾ ವಾನ್ ಡೆರ್ ಲೇಯೆನ್
ಡಿ) ಮೇಲಿನ ಯಾರೂ ಅಲ್ಲ
ಉತ್ತರ: ಸಿ
5) ‘ದಿ ಹಿಕ್ಸನ್ ಕಾಂಪೆಕ್ಟ್ ಗ್ರೂಪ್-40’ ಎಂಬ ಹೆಸರಿನ 5 ಗ್ಯಾಲಕ್ಸಿಗಳ ಕುರಿತ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಇವುಗಳ ವಿಶೇಷತೆ ಏನು?
ಎ) ಭೂಮಿಯಿಂದ 106 ಜ್ಯೋತಿವರ್ಷದಷ್ಟು ದೂರದಲ್ಲಿರುವ ಈ ಗ್ಯಾಲಕ್ಸಿಗಳಲ್ಲಿ 5 ಸಾವಿರ ವರ್ಷಗಳ ನಂತರ ನಮ್ಮ ಗ್ಯಾಲಕ್ಸಿ ಮಿಲ್ಕಿ ವೇ ವೀಲಿನಗೊಳ್ಳಲಿದೆ.
ಬಿ) ಈ ಐದೂ ಗ್ಯಾಲಕ್ಸಿಗಳು ಪರಸ್ಪರ ಗುರುತ್ವಾಕರ್ಷಣೆ ಬಲಕ್ಕೆ ಒಳಪಟ್ಟಿವೆ.
ಸಿ) ಇದರ ಚಿತ್ರವನ್ನು ಹಬಲ್ ದೂರದರ್ಶಕ ಸೆರೆಹಿಡಿದಿದ್ದು. ಹಬಲ್ ದೂರದರ್ಶಕದ 50ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ಗ್ಯಾಲಾಕ್ಸಿಗಳ ಗುಂಪಿನ ಚಿತ್ರ ಬಿಡುಗಡೆ ಮಾಡಲಾಗಿದೆ.
ಡಿ) ಮೇಲಿನ ಯಾವುದೂ ಅಲ್ಲ.
ಉತ್ತರ: ಬಿ
6) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಭಾರತ ಅಸಾಧಾರಣವಾದ ಸೆಮಿಕಂಡಕ್ಟರ್ ವಿನ್ಯಾಸ ಪ್ರತಿಭೆಗಳ ಭಂಡಾರ. ವಿಶ್ವದಲ್ಲಿ ಸೆಮಿ ಕಂಡಕ್ಟರ್ ವಿನ್ಯಾಸ ಎಂಜಿನಿಯರ್‌ಗಳ ಪೈಕಿ ಶೇ 20ರಷ್ಟು ಭಾರತೀಯರೇ ಇದ್ದಾರೆ. ವಿಶ್ವದ ಅಗ್ರ 25 ಸೆಮಿಕಂಡಕ್ಟರ್ ವಿನ್ಯಾಸ ಕಂಪನಿಗಳು ಭಾರತದಲ್ಲಿ ವಿನ್ಯಾಸ ಮತ್ತು ಆರ್ ಎಂಡ್ ಡಿ ಕೇಂದ್ರ ಹೊಂದಿವೆ.
2) ಭಾರತ ದೇಶವೊಂದರಲ್ಲೇ ಸೆಮಿಕಂಡಕ್ಟರ್‌ಗಳ ಬಳಕೆಯು 2026ರ ವೇಳೆಗೆ 80 ಶತಕೋಟಿ ಡಾಲರ್ ಮತ್ತು 2030ರ ವೇಳೆಗೆ 110 ಶತಕೋಟಿ ಡಾಲರ್ ದಾಟುವ ನಿರೀಕ್ಷೆ ಇದೆ.
ಉತ್ತರ ಸಂಕೇತಗಳು
ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ.
ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ
ಸಿ) ಎರಡೂ ಹೇಳಿಕೆಗಳು ಸರಿಯಾಗಿವೆ.
ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ.
ಉತ್ತರ: ಸಿ
ಹಾರುವ ನರಿ
ನರಿಗಳು ಹಾರುತ್ತವೆಯೇ? ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಆದರೆ ‘ಹಾರುವ ನರಿ’ ನಿಜವಾಗಿ ನರಿಯೇ ಅಲ್ಲ. ಅದೊಂದು ಬಗೆಯ ಬಾವಲಿ. ತಲೆ ಮತ್ತು ಮುಖದಲ್ಲಿ ಅದು ನರಿಯನ್ನೇ ಹೋಲುತ್ತದೆ. ಆದ್ದರಿಂದ ಅದಕ್ಕೆ `ಹಾರುವ ನರಿ’(ಫ್ಲೈಯಿಂಗ್ ಫಾಕ್ಸ್) ಎಂಬ ಹೆಸರು ಬಂದಿದೆ. ಹೆಚ್ಚು ಪಾಲು ಬಾವಲಿಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಅವು ಇಲಿಗಳಂತೆ ಕಾಣುತ್ತವೆ. ಆದರೆ ಹಾರುವ ನರಿಗಳ ಗಾತ್ರ ದೊಡ್ಡದು. ಅದರ ಗಾತ್ರ ಚಿಕ್ಕ ನಾಯಿಯಷ್ಟು ಉದ್ದವಾಗಿರುತ್ತದೆ. ಅವುಗಳಿಗೆ ಉದ್ದವಾದ ಮತ್ತು ಮೊನಚಾದ ಹಲ್ಲುಗಳಿರುತ್ತವೆ. ಈ ಹಲ್ಲುಗಳಿಗೆ ಒಂದು ತೆಂಗಿನಕಾಯಿ ಒಡೆಯುವಷ್ಟು ಸಾಮರ್ಥ್ಯವಿರುತ್ತದೆ. ಅವುಗಳ ತೂಕ 1.5 ಕೆ.ಜಿಯವರೆಗೆ ಇರುತ್ತದೆ.
ಹಾರುವ ನರಿಗಳು ಭಾರತ, ಆಸ್ಟ್ರೇಲಿಯಾ, ಮಲೇಷಿಯಾ ಮತ್ತು ಏಷ್ಯಾದ ಇತರ ಭಾಗಗಳಲ್ಲಿ ಕಂಡುಬರುತ್ತದೆ. ಇದುವರೆಗೆ 65 ಜಾತಿಗಳಿಗೆ ಸೇರಿದ ಹಾರುವ ನರಿಗಳ ಕುರಿತು ಅಧ್ಯಯನ ನಡೆಸಲಾಗಿದೆ. ವಿವಿಧ ತರಹದ(ಜಾತಿಯ) ಹಾರುವ ನರಿಗಳು ಶಾಂತ ಮಹಾಸಾಗರ ಮತ್ತು ಹಿಂದು ಮಹಾಸಾಗರದಲ್ಲಿರುವ ದ್ವೀಪಗಳಲ್ಲಿ ಕಂಡುಬಂದಿವೆ. ಅವುಗಳ ಗುಣಲಕ್ಷಣಗಳು ಮತ್ತು ಅಭ್ಯಾಸಗಳು, ಬಹುಮಟ್ಟಿಗೆ ಸಾಧಾರಣ ಫ್ಲೈಯಿಂಗ್ ಫಾಕ್ಸ್‌ಗಳಂತೆಯೇ ಇರುತ್ತವೆ. ಅವುಗಳಲ್ಲಿ ಕೆಲವದರ ಸ್ವಭಾವಗಳು ಮಾತ್ರ ಸ್ವಲ್ಪ ಬೇರೆಯಾಗಿರುತ್ತವೆ. ಇವುಗಳಿಗೆ ಹಣ್ಣುಗಳೆಂದರೆ ಬಹಳ ಇಷ್ಟ. ಅವುಗಳ ಕಣ್ಣುಗಳು ಮಾತ್ರ ಇತರ ಬಾವಲಿಗಳಿಗಿಂತ ತುಂಬ ಚೆನ್ನಾಗಿರುತ್ತದೆ. ಅವು ತಮ್ಮ ಕಣ್ಣಿ ನಿಂದಲೇ ದಾರಿ ಕಂಡುಕೊಳ್ಳುತ್ತವೆ. ಇತರ ಬಾವಲಿಗಳಂತೆ, ಧ್ವನಿ ತರಂಗಗಳ ನೆರವಿನಿಂದ ಅಲ್ಲ. ಹಾರುವ ನರಿಗಳು ತುಂಬ ಜನನಿಬಿಡ ಪ್ರದೇಶಗಳಲ್ಲಿ ವಾಸಿಸುತ್ತವೆ. ಅವು ಹೆಚ್ಚಾಗಿ ಮರದ ಮೇಲೆ ವಾಸಿಸುತ್ತವೆ. ತಮಗೆ ಯೋಗ್ಯವಾದ ಆಹಾರ ಎಲ್ಲಿ ಸುಲಭವಾಗಿ ಸಿಗುತ್ತದೋ ಅಲ್ಲಿಯೇ ಅವು ವಿಶ್ರಾಂತಿ ಪಡೆಯುತ್ತವೆ.
(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.