ADVERTISEMENT

ಎಂಎಸ್ಸಿ ಫಿಸಿಕ್ಸ್‌: ಮುಂದೇನು?

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ಮುರಳೀಧರ ಕುಲಕರ್ಣಿ
Published 26 ಫೆಬ್ರುವರಿ 2019, 19:30 IST
Last Updated 26 ಫೆಬ್ರುವರಿ 2019, 19:30 IST
book
book   

ನಾನು ಬಿಎಸ್‌ಸಿ ಮುಗಿಸಿ ಎಂಎಸ್‌ಸಿ (ಫಿಸಿಕ್ಸ್‌) ತೆಗೆದುಕೊಂಡಿದ್ದೇನೆ. ಮುಂದೆ ಯಾವ ರೀತಿಯ ಉದ್ಯೋಗ ಮಾಡಬಹುದು. ಶಿಕ್ಷಕ ವೃತ್ತಿ ಇಷ್ಟವಿಲ್ಲ.

ಊರು, ಹೆಸರು ಬೇಡ

* ನಿಮಗೆ ಸರಕಾರಿ ಅಥವಾ ಖಾಸಗಿ ಸಂಶೋಧನಾ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿದೆ

ADVERTISEMENT

* ಲ್ಯಾಬ್ ಇಕ್ವಿಪ್ಮೆಂಟ್ಸ, ಮಿಸ್ಸುರಿಂಗ್ ಡೈವರ್ಸಸ್ ಮೆಡಿಕಲ್ ಎಲೆಕ್ಟ್ರಾನಿಕ್ಸ್ ಡೈವರ್ಸಸ್ ತಯಾರು ಮಾಡುವ ಕಂಪನಿಗಳಲ್ಲಿ ಸಂಶೋಧನೆ, ಪ್ರೊಡಕ್ಷನ್, ಗುಣಮಟ್ಟ ಭರವಸೆ ಮತ್ತು ಸೇಲ್ಸ್ ಅಂಡ್ ಮಾರ್ಕೆಟಿಂಗ್ ಸೆಕ್ಷನ್‌ಗಳಲ್ಲಿಯೂ ಉತ್ತಮ ಅವಕಾಶಗಳಿರುತ್ತವೆ.

* ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಲ್ಯಾಬ್ ಟೆಚ್ನಿಷಿಯನ್ ಅಥವಾ ವಿಶೇಷ ಉದ್ಯೋಗಗಳಾದ ಏರ್ ಟ್ರಾಫಿಕ್ ಕಂಟ್ರೋಲರ್ ಕಂಪ್ಯೂಟರ್ ಏಡೆಡ್ ಎಂಜಿನಿಯರಿಂಗ್ ಮತ್ತು ಡಿಸೈನ್ ಕ್ಷೇತ್ರಗಳಲ್ಲಿ ಅವಕಾಶಗಳಿರುತ್ತವೆ

* ನಿಮಗೆ ಮುಂದೆ ಸಂಶೋಧನೆಯನ್ನು ಮಾಡಿಪಿಎಚ್‌ಡಿ ಪಡೆಯಬೇಕೆನ್ನುವ ಆಸೆಯಿದ್ದರೆ ಈಗಿನಿಂದಲೇ ತಯಾರಿಯನ್ನು ಮಾಡಬೇಕು.

ಬಿಸಿಎನಲ್ಲಿ ಐದನೇ ಸೆಮಿಸ್ಟರ್‌ ಓದುತ್ತಿದ್ದೇನೆ. ನಾನು ಮುಂದೆ ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲರ್‌) ಕೋರ್ಸ್‌ ಓದಲು ಇಷ್ಟವಿದೆ. ಈ ಬಗ್ಗೆ ಕಾಲೇಜು, ಕೋರ್ಸ್‌ , ಶುಲ್ಕ ಹಾಗೂ ಸ್ಕಾಲರ್‌ಶಿಪ್‌ ಮತ್ತು ಉದ್ಯೋಗದ ಬಗ್ಗೆ ತಿಳಿಸಿ.

ಶಕೀಲ್‌ ಖಾನ್‌, ವಿಜಯಾ ಕಾಲೇಜ್‌ ಬೆಂಗಳೂರು

ನೀವು ಏರ್ ಟ್ರಾಫಿಕ್ ಕಂಟ್ರೋಲರ್ ಆಗಬೇಕಾದಲ್ಲಿ ಎಂಜಿನಿಯರಿಂಗ್ ಡಿಗ್ರಿ ಅಥವಾ ಪೂರ್ಣ ಪ್ರಮಾಣದ ಬಿಎಸ್ಸಿ (ಫಿಸಿಕ್ಸ್ ಮತ್ತು ಮಾಥ್ಸ್) ಕಡ್ಡಾಯವಾಗಿ ಹೊಂದಿರಬೇಕು. ನೀವು ಬಿ ಸಿ ಎ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ನಿಮಗೆ ಅರ್ಹತೆ ಇಲ್ಲ. ನಿಮ್ಮ ಮೇಲ್ಕಂಡ ಆಯ್ಕೆಗೆ ಯಾವುದೇ ಕೋರ್ಸುಗಳಿಲ್ಲ. ನಿಮಗೆ ಅರ್ಹತೆ ಇದ್ದಲ್ಲಿ ಏರ್‌ರ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾಗೆ ಅರ್ಜಿ ಸಲ್ಲಿಸಬಹುದು. ದಯಮಾಡಿ AAI ವೆಬ್‌ಸೈಟ್ ವಿಸಿಟ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. ಅವಕಾಶಗಳು ಸಿಗುತ್ತವೆ ಹಾಗೂ ನೀವು ಸ್ವಂತ ಉದ್ಯಮಕ್ಕೆ ಅನುಭವವು ದೊರಕುತ್ತದೆ. ನಿಮಗೆ ಇನ್ನೊಂದು ಸಲಹೆ ಏನೆಂದರೆ ಯಾವುದಾದರು ಚಿಕ್ಕ ಪ್ರಮಾಣದ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯುವುದಕ್ಕಾಗಿ ಕೆಲಸ ಸೇರಿ. ಹೆಚ್ಚಿನ ಮಾಹಿತಿ ಮತ್ತು ವಿವರಗಳನ್ನು ಕಲಿತುಕೊಂಡಲ್ಲಿ ನಿಮ್ಮ ಮುಂದಿನ ಸ್ವಂತ ಉದ್ಯಮಕ್ಕೆ ಸಹಾಯವಾಗುವುದು.

ನಾನು ರಾಜ್ಯ ಸರ್ಕಾರಿ ನೌಕರಿಯಲ್ಲಿ ಇದ್ದೇನೆ. ನಾನು ದೂರ ಶಿಕ್ಷಣದ ಮೂಲಕ ಬಿ.ಎ ಪದವಿ ಪಡೆಯುತ್ತಿದ್ದು ಪ್ರಸ್ತುತ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ, ನನಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಇಲಾಖೆಯಿಂದ ಅನುಮತಿ ಪಡೆದಿಲ್ಲ. ದೂರ ಶಿಕ್ಷಣದ ಮೂಲಕ ವಿದ್ಯಾಭ್ಯಾಸಕ್ಕೆ ಇಲಾಖಾ ಅನುಮತಿ ಕಡ್ಡಾಯವೇ? ತಿಳಿಸಿ.

ಹೆಸರು, ಊರು ಬೇಡ

ಹೌದು ನೀವು ದೂರ ಶಿಕ್ಷಣದ ಮೂಲಕ ಬಿಎ ಪದವಿ ಪಡೆಯುತ್ತಿರುವುದಕ್ಕೆ ಕಡ್ಡಾಯವಾಗಿ ನಿಮ್ಮ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಹೆಚ್ಚಿನ ವಿವರಗಳನ್ನು ಪಡೆಯಬೇಕಾದಲ್ಲಿ ನಿಮ್ಮ ಇಲಾಖೆಯ ನಿಯಮ ಮತ್ತು ಕಾಯಿದೆಗಳ ಕೈಪಿಡಿಯನ್ನು ಪಡೆಯಿರಿ.

ನಾನು ಇಇಇ (ಎಲೆಕ್ಟ್ರಿಕಲ್ಸ್‌ ಮತ್ತು ಎಲೆಕ್ಟ್ರಾನಿಕ್ಸ್‌) ಎಂಜಿನಿಯರಿಂಗ್‌ ಕೋರ್ಸ್‌ನ್ನು ಕಳೆದ ಆರು ತಿಂಗಳಿಂದ ಓದುತ್ತಿದ್ದೇನೆ. ನಾನು ಸರಿಯಾದ ಕೋರ್ಸ್‌ ಆಯ್ಕೆ ಮಾಡಿಕೊಂಡಿದ್ದೇನೆಯೇ ಎಂಬುದನ್ನು ತಿಳಿಸಿ. ಜೊತೆಗೆ ಕಾಲೇಜಿನ ಹೊರಗಡೆ ನಾನು ಯಾವ ರೀತಿಯ ಕೌಶಲವನ್ನು ಪಡೆಯಬಹುದು. ಇಲ್ಲದಿದ್ದರೆ ಬೇರೆ ಯಾವುದಾದರೂ ಪರ್ಯಾಯ ಕೋರ್ಸ್ ಇದೆಯೇ? ಮತ್ತೆ ಖಾಸಗಿ ಹಾಗೂ ಸರ್ಕಾರಿ ಕ್ಷೇತ್ರದಲ್ಲಿ ನನಗೆ ಯಾವ ರೀತಿಯ ಉದ್ಯೋಗಾವಕಾಶಗಳು ಇವೆ?

ದುಶ್ಯಂತ, ಎಸ್‌ಜೆಸಿಇ, ಮೈಸೂರು

ನಿಮಗೆ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ ಮೇಲೂ ಗೊಂದಲಗಳಿದ್ದರೆ ಮೊದಲು ನಿಮ್ಮ ಆಸಕ್ತಿ, ವ್ಯಕ್ತಿತ್ವ, ಯೋಗ್ಯತೆ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಒಂದು ನಿರ್ಧಾರಕ್ಕೆ ಬನ್ನಿ. ಇದಕ್ಕಾಗಿ ಮೈಸೂರಿನಲ್ಲಿಯೇ ಒಬ್ಬ ಉತ್ತಮ ಉದ್ಯಮಿಗಳ ವೃತ್ತಿ ಸಲಹೆಗಾರರನ್ನು ಸಂಪರ್ಕಿಸಿ ಅದರಿಂದ ಇವೆಲ್ಲವುಗಳ ಬಗ್ಗೆ ಒಂದು ವಿವರವನ್ನು ಪಡೆಯಿರಿ. ಅವರ ಸಹಾಯದಿಂದ ಒಂದು ದೃಢ ನಿರ್ಧಾರಕ್ಕೆ ಬಂದ ಮೇಲೆ ನಿಮ್ಮ ವಿಷಯ, ಆಸಕ್ತಿಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಅನುಕೂಲವಾಗಿ ನೀವು ತೆಗೆದುಕೊಂಡಿರುವ ಹೆಜ್ಜೆ ಸರಿಯಾಗಿದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆದರೆ ನಿಮಗೆ ಸಾಫ್ಟ್‌ವೇರ್‌ ಡೆವಲಪ್ಮೆಂಟ್ ಸಂಬಂಧ ಪಟ್ಟ ಉದ್ಯೋಗಗಳು ದೊರಕುತ್ತವೆ ಹಾಗೂ ಡಿಸೈನ್ ಮತ್ತು ಪ್ರೊಡಕ್ಷನ್ ಉದ್ಯೋಗಗಳು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ಸ್ ಮತ್ತು ಸೆಮಿಕಂಡಕ್ಟರ್ಸ್ ತಯಾರು ಮಾಡುವ ಕಂಪನಿಗಳಲ್ಲಿ ದೊರಕುತ್ತದೆ. ಆಟೋಮೊಬೈಲ್ ಬಿಡಿಭಾಗಗಳನ್ನು ತಯಾರು ಮಾಡುವ ಕಂಪನಿಗಳಲ್ಲಿ ಮತ್ತು ಎಲೆಕ್ಟ್ರಾನಿಕ್ಸ್ ಸಲಕರಣೆಗಳನ್ನು ತಯಾರು ಮಾಡುವ ಕಂಪನಿಗಳಲ್ಲಿ ಮೇಂಟೆನೆನ್ಸ್ ವಿಭಾಗದಲ್ಲಿ ಉದ್ಯೋಗ ದೊರಕುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.