1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. 1950ರಲ್ಲಿ ಭಾರತದ ಒಕ್ಕೂಟವನ್ನು ಭಾಗ ಎ, ಬಿ, ಸಿ ಡಿ ಮತ್ತು ಇ ರಾಜ್ಯಗಳು ಎಂದು ವರ್ಗೀಕರಿಸಲಾಗಿತ್ತು.
ಬಿ. ಪ್ರಸ್ತುತ ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಬಿ
–––––––––––––––––––––––––––––––––––––––––––––––––
2. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. 1948 ಜೂನ್, 17 ರಂದು ಎಸ್.ಕೆ. ಧಾರ್‌ಆಯೋಗವನ್ನು ನೇಮಕ ಮಾಡಲಾಯಿತು.
ಬಿ. ಡಿಸೆಂಬರ್ 1948 ರಲ್ಲಿ ಜೆ.ವಿ.ಪಿ. ಸಮಿತಿಯನ್ನು ನೇಮಕ ಮಾಡಲಾಯಿತು.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಡಿ
–––––––––––––––––––––––––––––––––––––––––––––––––
3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. 1953 ಅಕ್ಟೋಬರ್, 1ರಂದು ಫಜಲ ಆಲಿ ಆಯೋಗವನ್ನು ನೇಮಕ ಮಾಡಲಾಯಿತು.
ಬಿ. ಫಜಲ ಆಲಿ ಆಯೋಗವು 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಬೇಕೆಂದು ಶಿಫಾರಸು ಮಾಡಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
–––––––––––––––––––––––––––––––––––––––––––––––––
4. ವಿಂಬಲ್ಡನ್ ಟೆನಿಸ್ ಚಾಂಪಿಯನ್ ಷಿಪ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಇದು 1877ರಲ್ಲಿ ಪ್ರಾರಂಭವಾದ ಅತ್ಯಂತ ಹಳೆಯ ಪಂದ್ಯಾವಳಿಯಾಗಿದೆ.
ಬಿ. 2024ರಲ್ಲಿ ಕಾರ್ಲೋಸ್ ಅಲ್ಕರಾಜ್ ಅವರು, ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿ ವಿಂಬಲ್ಡನ್ ಟೆನಿಸ್‌ನ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
–––––––––––––––––––––––––––––––––––––––––––––––––
5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಒಂದು ಕ್ಯಾಲೆಂಡರ್ ವರ್ಷದಲ್ಲಿ, ಐದು ಟೆನಿಸ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತದೆ.
ಬಿ. 2024 ರಲ್ಲಿ ರೋಹನ್ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಜೋಡಿಯು ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ: ಬಿ
–––––––––––––––––––––––––––––––––––––––––––––––––
6. ಕ್ಷೇತ್ರ ಮರು ವಿಂಗಡಣೆ ಆಯೋಗ ಕಾಯ್ದೆಗಳನ್ನು ಕೆಳಗಿನ ಯಾವ ವರ್ಷಗಳಲ್ಲಿ ಅನುಷ್ಠಾನಕ್ಕೆ ತರಲಾಯಿತು?
1.1952 ರಲ್ಲಿ ಕ್ಷೇತ್ರ ಮರು ವಿಂಗಡಣೆ ಆಯೋಗ ಕಾಯ್ದೆಯನ್ನು ಜಾರಿಗೆ ತರಲಾಯಿತು.
2.1982 ರಲ್ಲಿ ಕ್ಷೇತ್ರ ಮರು ವಿಂಗಡಣೆ ಆಯೋಗ ಕಾಯ್ದೆಯನ್ನು ಜಾರಿಗೆ ತರಲಾಯಿತು.
3. ಪ್ರತಿ ಜನಗಣತಿಯ ನಂತರ ಕ್ಷೇತ್ರ ಮರು ವಿಂಗಡಣೆ ಆಯೋಗ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1 ಮತ್ತು 2 ಡಿ. 3 ಮಾತ್ರ
ಉತ್ತರ : ಎ
–––––––––––––––––––––––––––––––––––––––––––––––––
7. ಕೆಳಗಿನ ಯಾವ ತಿದ್ದುಪಡಿಯ ಅನ್ವಯ ಕ್ಷೇತ್ರ ಮರು ವಿಂಗಡಣೆ ಪ್ರಕ್ರಿಯೆಯನ್ನು 2026 ರ ವರೆಗೂ ಮುಂದೂಡಲಾಗಿದೆ?
ಎ. 81 ನೇ ತಿದ್ದುಪಡಿ ಕಾಯ್ದೆ.
ಬಿ. 82 ನೇ ತಿದ್ದುಪಡಿ ಕಾಯ್ದೆ.
ಸಿ. 83 ನೇ ತಿದ್ದುಪಡಿ ಕಾಯ್ದೆ.
ಡಿ. 84 ನೇ ತಿದ್ದುಪಡಿ ಕಾಯ್ದೆ.
ಉತ್ತರ : ಡಿ
–––––––––––––––––––––––––––––––––––––––––––––––––
8. ಜಲಜನಕ ಅಥವಾ ಹೈಡ್ರೋಜನ್ ಕುರಿತು ಈ ಹೇಳಿಕೆಗಳನ್ನು ಪರಿಶೀಲಿಸಿ:
ಎ. ಜಲಜನಕವು ತೂಕದ ಲೆಕ್ಕದಲ್ಲಿ ಉಳಿದ ಯಾವುದೇ ಇಂಧನಕ್ಕಿಂತ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಹೊಂದಿದೆ.
ಬಿ. ಅದು ಪ್ರಮಾಣದ ಲೆಕ್ಕದಲ್ಲಿ ಉಳಿದ ಯಾವುದೇ ಇಂಧನಕ್ಕಿಂತ ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಹೊಂದಿದೆ.
ಈ ಎರಡು ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
1.ಎ ಮಾತ್ರ
2. ಬಿ ಮಾತ್ರ
3. ಎ ಮತ್ತು ಬಿ ಎರಡೂ ಸರಿ
4. ಎ ಮತ್ತು ಬಿ ಎರಡೂ ಸರಿಯಲ್ಲ
ಉತ್ತರ: (1)
–––––––––––––––––––––––––––––––––––––––––––––––––
9. ಜಲಜನಕದ ವಿಧಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಶೀಲಿಸಿ:
ಎ. ನೀಲಿ ಜಲಜನಕವನ್ನು ನೈಸರ್ಗಿಕ ಅನಿಲ ಅಥವಾ ಕಲ್ಲಿದ್ದಲಿನ ಅನಿಲೀಕರಣವನ್ನು ಇಂಗಾಲ ಹಿಡಿದಿಡುವ ಕಾರ್ಬನ್ ಕ್ಯಾಪ್ಚರ್ ಸ್ಟೋರೇಜ್ (ಸಿಸಿಎಸ್) ಅಥವಾ ಕಾರ್ಬನ್ ಕ್ಯಾಪ್ಚರ್ ಯೂಸ್ (ಸಿಸಿಯು) ಎಂಬ ತಂತ್ರಜ್ಞಾನಗಳನ್ನು ಬಳಸಿ,
ಕಡಿಮೆ ಇಂಗಾಲ ಹೊರಸೂಸುವಿಕೆಯ ವಿಧಾನದಲ್ಲಿ ಉತ್ಪಾದಿಸಲಾಗುತ್ತದೆ.
ಬಿ. ಹಸಿರು ಜಲಜನಕವನ್ನು ನವೀಕರಿಸಬಹುದಾದ ಇಂಧನದಿಂದ ಉತ್ಪಾದಿಸಿದ ವಿದ್ಯುತ್ ಬಳಸಿ, ನೀರಿನಿಂದ ಉತ್ಪಾದಿಸಲಾಗುತ್ತದೆ.
ಈ ಎರಡು ಹೇಳಿಕೆಗಳಲ್ಲಿ
ಯಾವುದು ಸರಿಯಾಗಿದೆ?
1.ಎ ಮಾತ್ರ
2. ಬಿ ಮಾತ್ರ
3. ಎ ಮತ್ತು ಬಿ ಎರಡೂ ಸರಿ
4. ಎ ಮತ್ತು ಬಿ ಎರಡೂ ಸರಿಯಲ್ಲ
ಉತ್ತರ: (3)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.