ADVERTISEMENT

UPSC, KPSC EXAM: ಬಹುಆಯ್ಕೆಯ ಪ್ರಶ್ನೋತ್ತರಗಳು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 0:39 IST
Last Updated 10 ಅಕ್ಟೋಬರ್ 2024, 0:39 IST
   

ಬಹು ಆಯ್ಕೆಯ ಪ್ರಶ್ನೆಗಳು

1. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ದಿ ರಿಮ್ ಆಫ್ ದಿ ಪೆಸಿಫಿಕ್ ಸಮರಾಭ್ಯಾಸ (RIMPAC) ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಕಡಲ ಯುದ್ಧ ಸಮರಾಭ್ಯಾಸವಾಗಿದೆ.

ಬಿ. ಭಾರತೀಯ ನೌಕಾಪಡೆಯು ಪೂರ್ವ ಕರಾವಳಿಯಲ್ಲಿ ಪೂರ್ವಿ ಲೆಹರ್ ಸಮರಾಭ್ಯಾಸವನ್ನು ನಡೆಸುತ್ತದೆ.

ADVERTISEMENT

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

2. ಭಾರತೀಯ ನೌಕಾಪಡೆಯ ದಿನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಪ್ರತಿ ವರ್ಷ ಡಿಸೆಂಬರ್ 14 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.

ಬಿ. 1971 ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ನಡೆಸಿದ ಆಪರೇಷನ್ ಟ್ರೈಡೆಂಟ್‌ ನಲ್ಲಿ ಭಾರತೀಯ ನೌಕಾಪಡೆಯ ಪಾತ್ರವನ್ನು ಗೌರವಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಬಿ

3. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಐ.ಎನ್.ಎಸ್‌ ಶಾತವಾಹನ ತರಬೇತಿ ಕೇಂದ್ರ ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿದೆ.

ಬಿ. ಐ.ಎನ್.ಎಸ್‌ ಕದಂಬ ನೌಕಾನೆಲೆಯು ಕನಾ೯ಟಕದ ಕಾರವಾರದಲ್ಲಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಡಿ

4. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಮಾಂಟ್ರಿಯಲ್ ಪ್ರೋಟೋಕಾಲ್‌ ನ ನೆನಪಿಗಾಗಿ 16 ಸೆಪ್ಟೆಂಬರ್ ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ.

ಬಿ. 2024 ರ ವಿಶ್ವ ಓಝೋನ್ ದಿನದ ಥೀಮ್, "ಮಾಂಟ್ರಿಯಲ್ಪ್ರೋ ಟೋಕಾಲ್: ಅಡ್ವಾನ್ಸಿಂಗ್ ಕ್ಲೈಮೇಟ್ ಆಕ್ಷನ್" ಆಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

5. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಮಾಂಟ್ರಿಯಲ್ ಪ್ರೋಟೋಕಾಲ್ ಅನ್ನು 16 ಸೆಪ್ಟೆಂಬರ್ 1987 ರಂದು ಸಹಿ ಮಾಡಲಾಯಿತು.

ಬಿ. ಓಝೋನ್-ಡಿಪ್ಲೀಟಿಂಗ್ ವಸ್ತುಗಳು (ODS) ಎಂದು ಕರೆಯಲ್ಪಡುವ ಮಾನವ ನಿರ್ಮಿತ ರಾಸಾಯನಿಕಗಳ ಉತ್ಪಾದನೆ ಮತ್ತು ಬಳಕೆಯನ್ನು ಮಾಂಟ್ರಿಯಲ್ ಪ್ರೋಟೋಕಾಲ್ ನಿಯಂತ್ರಿಸುತ್ತದೆ. 

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ: ಡಿ

6. ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.

ಎ. ಓಝೋನ್ ಪದರಿನ ರಕ್ಷಣೆಗಾಗಿ ಇರುವ ವಿಯೆನ್ನಾ ಸಮಾವೇಶವು 1988 ರಲ್ಲಿ ಜಾರಿಗೆ ಬಂದಿತು ಮತ್ತು 2009 ರ ಹೊತ್ತಿಗೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿತು.

ಬಿ. 2020 ರ ಕಿಗಾಲಿ ಒಪ್ಪಂದವು ಮಾಂಟ್ರಿಯಲ್ ಪ್ರೋಟೋಕಾಲ್ ಗೆ ಮಾಡಿದ ತಿದ್ದುಪಡಿಯಾಗಿದೆ.

ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

ಎ. ಹೇಳಿಕೆ ಎ ಸರಿಯಾಗಿದೆ.

ಬಿ. ಹೇಳಿಕೆ ಬಿ ಸರಿಯಾಗಿದೆ.

ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.

ಡಿ ಎರಡೂ ಹೇಳಿಕೆಗಳು ಸರಿಯಾಗಿವೆ.

ಉತ್ತರ : ಎ

7. ಗ್ರಾಮೀಣ ಜೀವನೋಪಾಯ ಅಭಿಯಾನವನ್ನು ಕೆಳಗಿನ ಯಾವ ಮತ್ತೊಂದು ಹೆಸರಿನಲ್ಲಿಯೂ ಕೂಡ ಕರೆಯಲಾಗುತ್ತದೆ?

ಎ. ದೀನ್ ದಯಾಳ್ ಅಂತ್ಯೋದಯ ಯೋಜನೆ.

ಬಿ. ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ.

ಸಿ. ಅಟಲ್ ಗ್ರಾಮೀಣ ಕೌಶಲ್ಯ ಯೋಜನೆ.

ಡಿ. ಪ್ರಧಾನ ಮಂತ್ರಿ ಗ್ರಾಮೀಣ ಕೌಶಲ್ಯ ಯೋಜನೆ.

ಉತ್ತರ : ಎ

8. ಕೆಳಗಿನ ಯಾವ ಅಂಶಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಘಟಕಗಳು ಎಂದು ಪರಿಗಣಿಸಬಹುದು?

1. ತ್ವರಿತ ನೀರಾವರಿ ಸವಲತ್ತು ಕಾರ್ಯಕ್ರಮ.

2. ಹರ್ ಖೆತ್ ಕೋ ಪಾನಿ.

3. ಪ್ರತಿ ಹನಿ ಹೆಚ್ಚು ಬೆಳೆ.

4. ಜಲಾನಯನ ಪ್ರದೇಶ ಅಭಿವೃದ್ಧಿ.

ಕೋಡ್ ಬಳಸಿ ಸರಿಯಾದ →ಉತ್ತರವನ್ನು ಗುರುತಿಸಿ.

ಎ. 1, 2 ಮತ್ತು 3 ಬಿ. 3 ಮತ್ತು 4

ಸಿ. 1, 2, 3 ಮತ್ತು 4 ಡಿ. 4 ಮಾತ್ರ

ಉತ್ತರ : ಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.