ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳ ‘ಸಾಮಾನ್ಯ ಜ್ಞಾನ’ಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಿಶೇಷ
Published 6 ಸೆಪ್ಟೆಂಬರ್ 2023, 23:32 IST
Last Updated 6 ಸೆಪ್ಟೆಂಬರ್ 2023, 23:32 IST
   

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಸೇರಿದಂತೆ ವಿವಿಧ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1. ಕೆರೆಗಳನ್ನು ಹಸಿರು ಸರೋವರಗಳನ್ನಾಗಿ ಹೇಗೆ ಪರಿವರ್ತಿಸಲಾಗುತ್ತಿದೆ?

ಎ. ಕಾಂಕ್ರೀಟ್ ನ್ನು ಅಳವಡಿಸದೆ ಜೈವಿಕ ತಡೆಗೋಡೆಗಳನ್ನು ನಿರ್ಮಿಸುವುದು.

ADVERTISEMENT

ಬಿ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ-ಸಿ.


2. ದೊಡ್ಡ ಮದಗದ ಕೆರೆಯನ್ನು ಕುರಿತ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ

ಎ. ಈ ಕೆರೆಯು 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ.

ಬಿ. ಈ ಕೆರೆಯು 12ನೇ ಶತಮಾನದಲ್ಲಿ ರುಕ್ಮಾಂಗದ ರಾಯ ಎಂಬುವವರಿಂದ ನಿರ್ಮಿತವಾಗಿದೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ-ಸಿ.

3. ಕರ್ನಾಟಕದ ಅತಿದೊಡ್ಡ ಕೆರೆ ಯಾವುದು?

ಎ. ತೊಣ್ಣೂರು ಕೆರೆ

ಬಿ. ಮದಗ ಕೆರೆ

ಸಿ. ಹೈರಿಗೆ ಕೆರೆ

ಡಿ. ಶಾಂತಿಸಾಗರ

ಉತ್ತರ-ಡಿ

4. ಮಹದಾಯಿ ಯೋಜನೆಯ ಕುರಿತ ಈ ಕೆಳಗಿನ ಯಾವ ಹೇಳಿಕೆಗಳು ಸರಿಯಾಗಿವೆ?

ಎ. ಮಹದಾಯಿ ನದಿಯಿಂದ ಕಳಸ ಮತ್ತು ಬಂಡೂರಿ ಬಳಿ ಒಟ್ಟು 3.9 ಟಿಎಂಸಿ ಅಡಿ ನೀರು ಬಳಸಿಕೊಳ್ಳುವ ಯೋಜನೆ ಇದಾಗಿದೆ.

ಬಿ. ಜಸ್ಟೀಸ್ ಪಾಂಚಾಲ್ ನೇತೃತ್ವದ ನ್ಯಾಯಾಧೀಕರಣವು ಗೋವಾಗೆ 24 ಟಿಎಂಸಿ, ಕರ್ನಾಟಕಕ್ಕೆ 13.92 ಟಿಎಂಸಿ    ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರು ಮಂಜೂರು ಮಾಡಿದೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

ಉತ್ತರ: ಸಿ

5. ಹಸಿರು ಇಂಧನದ ವಲಯವನ್ನು ಕುರಿತು ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿರಿ

ಎ. ಏಷ್ಯಾ ರಾಷ್ಟ್ರಗಳಲ್ಲಿ ಹಸಿರು ವಲಯದಲ್ಲಿ ಶೇ.63.6 ರಷ್ಟು ಉದ್ಯೋಗಗಳನ್ನು ನೀಡಲಾಗಿದೆ.

ಬಿ. ಮೂರನೇ ಒಂದರಷ್ಟು ಉದ್ಯೋಗಗಳನ್ನು ಅತಿ ವೇಗವಾಗಿ ಬೆಳೆಯುತ್ತಿರುವ ಸೋಲಾರ್ ವಲಯ ಸೃಷ್ಟಿಸಿದೆ.

ಎ. ಹೇಳಿಕೆ ಎ ಮಾತ್ರ ಸರಿಯಾಗಿದೆ.

ಬಿ. ಹೇಳಿಕೆ ಬಿ ಮಾತ್ರ ಸರಿಯಾಗಿದೆ.

ಸಿ. ಮೇಲಿನ ಎರಡೂ ಹೇಳಿಕೆಗಳು ಸರಿಯಾಗಿವೆ.

ಡಿ. ಮೇಲಿನ ಎರಡೂ ಹೇಳಿಕೆಗಳು ತಪ್ಪಾಗಿವೆ.

 ಉತ್ತರ-ಸಿ.


6. ಕಳೆದ ಹಣಕಾಸು ವರ್ಷದಲ್ಲಿ ಕರ್ನಾಟಕವು ಎಷ್ಟು ಮೊತ್ತದ ಹಸಿರು ಇಂಧನವನ್ನು ಉತ್ಪಾದಿಸಿದೆ?

ಎ. 14.15 ಶತಕೋಟಿ.

ಬಿ. 16.32 ಶತ ಕೋಟಿ.

ಸಿ. 12.13 ಶತಕೋಟಿ.

ಡಿ. 15.11 ಶತ ಕೋಟಿ.

 ಉತ್ತರ-ಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.