ಬೆಂಗಳೂರು: ಅಂತರರಾಷ್ಟ್ರೀಯ ಖ್ಯಾತಿಯ ಗಣಿತ ತಜ್ಞ ಶ್ರೀನಿವಾಸ ರಾಮಾನುಜನ್ ಅವರ ಹುಟ್ಟಿದ ದಿನವಾದ 22 ಡಿಸೆಂಬರ್ ಅನ್ನು ದೇಶದಲ್ಲಿ ‘ರಾಷ್ಟ್ರೀಯ ಗಣಿತ ದಿನ‘ವನ್ನಾಗಿ ಆಚರಿಸಲಾಗುತ್ತದೆ.
2012ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅವರು, ಶ್ರೀನಿವಾಸ ರಾಮಾನುಜನ್ ಗೌರವಾರ್ಥ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸುವಂತೆ ಘೋಷಿಸಿದರು.
1887ರ ಡಿಸೆಂಬರ್ 22ರಂದು ತಮಿಳುನಾಡಿನ ಈರೋಡ್‌ನಲ್ಲಿ ಶ್ರೀನಿವಾಸ ರಾಮಾನುಜನ್ ಅವರ ಜನನವಾಯಿತು.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಟ್ರಿನಿಟಿ ಕಾಲೇಜಿನಲ್ಲಿ ರಾಮಾನುಜನ್ ಅವರು ಪದವಿ ವಿದ್ಯಾಭ್ಯಾಸ ಮಾಡಿದರು.
ಗಣಿತ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿರುವ ರಾಮಾನುಜನ್ ಅವರ ಕುರಿತು 2015ರಲ್ಲಿ ‘ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ‘ ಹೆಸರಿನ ಚಿತ್ರ ಕೂಡ ತೆರೆಕಂಡಿದೆ.
ಇಂದು ರಾಮಾನುಜನ್ ಅವರ 134ನೇ ಜನ್ಮ ದಿನಾಚರಣೆಯಾಗಿದೆ. 1920ರ ಏಪ್ರಿಲ್ 26ರಂದು ತಮಿಳುನಾಡಿನ ಕುಂಬಕೋಣಮ್‌ನಲ್ಲಿ ತಮ್ಮ 32ನೇ ವಯಸ್ಸಿನಲ್ಲಿ ಅವರು ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.